ಭಾರತಕ್ಕೆ ಸತತ 2ನೇ ಕಿರಿಯರ ಟಿ20 ವಿಶ್ವ ಕಿರೀಟ: ಕನ್ನಡತಿ ನಿಕಿ ಪ್ರಸಾದ್ ಸಾರಥ್ಯದಲ್ಲಿ ಪ್ರಶಸ್ತಿ ಸಾಧನೆ

New Project (1)
Published on

ಕೌಲಾಲಂಪುರ: ಎರಡನೇ ಆವೃತ್ತಿಯ ಐಸಿಸಿ 19 ವಯೋಮಿತಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಇದರೊಂದಿಗೆ ಸತತ 2ನೆ ಬಾರಿಗೆ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ತನ್ನಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಗೊಂಗಡಿ ತ್ರಿಷಾ (44* ರನ್, 33 ಎಸೆತ, 8 ಬೌಂಡರಿ ಹಾಗೂ 15ಕ್ಕೆ 3 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಕನ್ನಡತಿ ನಿಕಿ ಪ್ರಸಾದ್ ಬಳಗ ದಕ್ಷಿಣ ಆಫ್ರಿಕಾ ಎದುರು 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಅಜೇಯವಾಗಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಶೆಾಲಿ ವರ್ಮ ನೇತೃತ್ವದಲ್ಲಿ ಭಾರತ 2023ರಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದಿತ್ತು.

ಬೇಯುಮಾಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ೈನಲ್‌ನಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಗೊಂಗಡಿ ತ್ರಿಷಾ (15ಕ್ಕೆ 3) ಸಹಿತ ಇತರ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ಆಫ್ರಿಕಾ ಭರ್ತಿ 20 ಓವರ್‌ಗಳಲ್ಲಿ 82 ರನ್‌ಗಳಿಗೆ ಆಲೌಟ್ ಆಯಿತು. ಸಾಧಾರಣ ಮೊತ್ತದ ಚೇಸಿಂಗ್‌ಗೆ ಇಳಿದ ಭಾರತ ತಂಡ ಆರಂಭಿಕ ಬ್ಯಾಟುಗಾರ್ತಿ ಜಿ.ಕಮಲಿನಿ (8) ವಿಕೆಟ್ ಬೇಗನೆ ಕಳೆದುಕೊಂಡಿತು. ಆಗ ಜತೆಯಾದ ತ್ರಿಷಾ ಹಾಗೂ ಉಪನಾಯಕಿ ಸನಿಕಾ ಚಲ್ಕೆ (26* ರನ್, 22 ಎಸೆತ, 4 ಬೌಂಡರಿ) ಜತೆಯಾಟದ ನೆರವಿನಿಂದ 11.2 ಓವರ್‌ಗಳಲ್ಲಿ 1 ವಿಕೆಟ್‌ಗೆ 84 ರನ್‌ಗಳಿಸಿ ಸಂಭ್ರಮಿಸಿತು. ಸ್ಕ್ವೆರ್ ಲೆಗ್‌ನತ್ತ ಬೌಂಡರಿ ಸಿಡಿಸಿದ ಸನಿಕಾ ಇನ್ನೂ 52 ಎಸೆತ ಇರುವಂತೆಯೇ ಭಾರತದ ಗೆಲುವು ಸಾರಿದರು.

ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 82 (ಜೆಮ್ಮ ಬೋಥಾ 16, ಡಿಯರಾ 3, ರೈನೆಕೆ 7, ಕರ್ಬೋ 10, ಮಿಕೆ ವೊರ್ಸ್ಟ್ 23, ೇ ಕೌಲಿಂಗ್ 15, ನಿನಿ 2*, ಪರುಣಿಕಾ 6ಕ್ಕೆ 2, ಆಯುಷಿ ಶುಕ್ಲಾ 9ಕ್ಕೆ 2, ಜಿ.ತ್ರಿಷಾ 15ಕ್ಕೆ 3, ವೈಷ್ಣವಿ 23ಕ್ಕೆ 2).

ಭಾರತ: 11.4 ಓವರ್‌ಗಳಲ್ಲಿ 1 ವಿಕೆಟ್‌ಗೆ 84 (ಜಿ.ಕಮಲಿನಿ 8, ಜಿ.ತ್ರಿಷಾ 44*, ಸನಿಕಾ 26*,ರೈನೆಕೆ 14ಕ್ಕೆ 1). ಪಂದ್ಯಶ್ರೇಷ್ಠ: ಗೊಂಗಡಿ ತ್ರಿಷಾ.

ಸರಣಿಶ್ರೇಷ್ಠ ತ್ರಿಷಾ ಟೂರ್ನಿಯುದ್ದಕ್ಕೂ ಬ್ಯಾಟಿಂಗ್-ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ತೆಲಂಗಾಣದ 19 ವರ್ಷದ ಗೊಂಗಡಿ ತ್ರಿಷಾ ಸರಣಿಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು. ಆಡಿದ 10 ಪಂದ್ಯಗಳಲ್ಲಿ 77.25ರ ಸರಾಸರಿಯಲ್ಲಿ 309 ರನ್‌ಗಳಿಸಿದ ತ್ರಿಷಾ ಗರಿಷ್ಠ ರನ್ ಸ್ಕೋರರ್ ಎನಿಸಿದರೆ, ಬೌಲಿಂಗ್‌ನಲ್ಲಿ 7ವಿಕೆಟ್ ಪಡೆದು ಉಪಯುಕ್ತ ಕೊಡುಗೆ ನೀಡಿದರು. ಜತೆಗೆ ತ್ರಿಷಾ ಟೂರ್ನಿಯ ಇತಿಹಾಸದಲ್ಲಿ ಶತಕ ಗಳಿಸಿರುವ ಏಕೈಕ ಬ್ಯಾಟುಗಾರ್ತಿ ಎನಿಸಿದ್ದಾರೆ. ಸರಣಿಶ್ರೇಷ್ಠ ಪ್ರಶಸ್ತಿಯನ್ನು ತನ್ನ ತಂದೆ ಜಿ.ರಾಮಿರೆಡ್ಡಿಗೆ ಅರ್ಪಿಸಿದರು.

ವಿಶ್ವಕಪ್ ಪ್ರಶಸ್ತಿ ಗೆಲುವು ತಂಡಕ್ಕೆ ವಿಶೇಷ ಕ್ಷಣ. ತಂಡದಲ್ಲಿ ನಮ್ಮ ಕಾರ್ಯನಿರ್ವಹಿಸುವ ಮೂಲಕ ಶಾಂತವಾಗಿರಲು ಪ್ರಯತ್ನಿದ್ದೇವೆ. ಟೂರ್ನಿಯ ಆರಂಭದಲ್ಲಿಯೇ ನಾವೂ ಪ್ರಾಬಲ್ಯ ಸಾಧಿಸುವ ಮೂಲಕ ಪ್ರಶಸ್ತಿ ಗೆಲ್ಲುವ ಬಗ್ಗೆ ಉಲ್ಲೇಖಿಸಿದ್ದೆ. ಈಗ ಭಾರತವು ಅಗ್ರಸ್ಥಾನದಲ್ಲಿದ್ದೇವೆ ಎಂಬುದು ಸಂತೋಷ ನೀಡಿದೆ. ನಿಕಿ ಪ್ರಸಾದ್, ನಾಯಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net