

ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್, ಪತ್ನಿ ಕೈಲಿ ಬೋಲ್ಡಿಗೆ ವಿಚ್ಛೇದನ ನೀಡಿದ್ದಾರೆ. ಪತ್ನಿಗೆ 285 ಕೋಟಿ ರೂ. (40 ಮಿಲಿಯನ್ ಅಮೆರಿಕನ್ ಡಾಲರ್) ಪರಿಹಾರ ನೀಡುವ ಮೂಲಕ ಏಳು ವರ್ಷದ ದಾಂಪತ್ಯವನ್ನು ಅಂತ್ಯಗೊಳಿಸಿದ್ದಾರೆ.
ಆದರೆ, ನಾಲ್ಕು ವರ್ಷದ ಪುತ್ರಿ ಕೆಲ್ಸೆ ಲೀಗೆ ಸಹ-ಪಾಲಕರಾಗಿ ಮುಂದುವರಿಯಲು ಇಬ್ಬರೂ ಒಪ್ಪಿದ್ದಾರೆ. ‘ಕೆಲವು ವರ್ಷಗಳ ಕಾಲ ಜತೆಯಾಗಿ ಇದ್ದ ಬಳಿಕ, ನಾವಿಬ್ಬರು ಕಠಿಣ ನಿರ್ಧಾರವನ್ನು ಮಾಡಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆ ಆಗಲು ನಿರ್ಧರಿಸಿದ್ದೇವೆ’ ಎಂದು ಮೈಕೆಲ್ ಕಾರ್ಕ್ ಹಾಗೂ ಕೈಲಿ ಬೋಲ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
38 ವರ್ಷದ ಇವರಿಬ್ಬರೂ 2012ರಲ್ಲಿ ವಿವಾಹವಾಗಿದ್ದರು. 2015ರಲ್ಲಿ ಮೈಕೆಲ್ ಕ್ಲಾರ್ಕ್ ಕ್ರಿಕೆಟ್ಗೆ ನಿವೃತ್ತಿ ಹೇಳಿದ ಕೆಲ ತಿಂಗಳಲ್ಲಿಯೇ ಮಗಳು ಹುಟ್ಟಿದ್ದಳು. ಕಳೆದ ಐದು ತಿಂಗಳಿನಿಂದಲೂ ಕೈಲಿ ಹಾಗೂ ಕ್ಲಾರ್ಕ್ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು.