ಸತತ 2ನೇ ಬಾರಿ ಫೈನಲ್‌ಗೇರಿದ ಮೆಸ್ಸಿ ಪಡೆ: ಹ್ಯಾಟ್ರಿಕ್ ಪ್ರಶಸ್ತಿ ಸನಿಹ ಅರ್ಜೆಂಟೀನಾ

New-Project-11
Published on

ಈಸ್ಟ್ ರುದರ್‌ಪೋರ್ಡ್: ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಸತತ 2ನೇ ಬಾರಿಗೆ ಕೋಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿದೆ. ಇದರೊಂದಿಗೆ ಕಳೆದ 9 ಆವೃತ್ತಿಗಳಲ್ಲಿ 7ನೇ ಬಾರಿ ಫೈನಲ್‌ಗೇರಿದ ದಾಖಲೆ ಬರೆದಿದೆ. ಬುಧವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಪಡೆ 2-0 ಗೋಲುಗಳಿಂದ ಕೆನಡಾ ತಂಡವನ್ನು ಮಣಿಸಿತು. ಪ್ರಶಸ್ತಿ ಸುತ್ತಿನಲ್ಲಿ ಉರುಗ್ವೆ ಅಥವಾ ಕೊಲಂಬಿಯಾ ಸವಾಲು ಎದುರಿಸಲಿದೆ. ಅರ್ಜೆಂಟೀನಾ ತಂಡ 2021ರ ಕೋಪಾ ಅಮೆರಿಕ ಮತ್ತು 2022ರ ಫಿಾ ವಿಶ್ವಕಪ್ ಬಳಿಕ ಸತತ 3ನೇ ಮೇಜರ್ ುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ನಿರೀಕ್ಷೆಯಲ್ಲಿದೆ.

ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಆರಂಭದಿಂದಲೂ ಪ್ರಾಬಲ್ಯ ಪ್ರದರ್ಶಿಸಿದ ಅರ್ಜೆಂಟೀನಾ ಪರ ಫಾರ್ವರ್ಡ್ ಆಟಗಾರ ಜೂಲಿಯನ್ ಅಲ್ವಾರೆಜ್, ಕೆನಡಾದ ರಕ್ಷಣಾ ಕೋಟೆಯನ್ನು ಭೇದಿಸಿ 22ನೇ ನಿಮಿಷದಲ್ಲಿ ಮುನ್ನಡೆ ಒದಗಿಸಿದರು. ಲಿಯೋನೆಲ್ ಮೆಸ್ಸಿ 51ನೇ ನಿಮಿಷದಲ್ಲಿ ಗೋಲು ಸಿಡಿಸಿ ಅಂತರ ಹಿಗ್ಗಿಸಿದರು. ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡ ಅರ್ಜೆಂಟೀನಾ 16ನೇ ಪ್ರಶಸ್ತಿ ಜಯಿಸುವತ್ತ ದಾಪುಗಾಲಿಟ್ಟಿದೆ. ಹಾಲಿ ಆವೃತ್ತಿಯಲ್ಲಿ ಮೊದಲು ಗೋಲು ಸಿಡಿಸಿದ ಮೆಸ್ಸಿ, ಕೋಪಾ ಅಮೆರಿಕದ ಆರು ಆವೃತ್ತಿಗಳಲ್ಲಿ ಗೋಲುಗಳಿಸಿದ 2ನೇ ಆಟಗಾರ ಎನಿಸಿದರು. ಬ್ರೆಜಿಲ್‌ನ ಜಿಝಿನ್ಹೋ ಮೊದಲಿಗರು.

2007, 2015, 2016, 2019 ಮತ್ತು 2021ರ ಆವೃತ್ತಿಗಳಲ್ಲಿ ಮೆಸ್ಸಿ ಪರ ಗೋಲು ದಾಖಲಿಸಿದ್ದಾರೆ. 2011ರ ಆವೃತ್ತಿಯಲ್ಲಿ ಮಾತ್ರ ಮೆಸ್ಸಿ ಗೋಲುಗಳಿಸಲು ವಿಲರಾದರು ಜತೆಗೆ ಅರ್ಜೆಂಟೀನಾ ಸಹ ಸೆಮಿಫೈನಲ್ಗೇರದೆ ಟೂರ್ನಿಯಿಂದ ನಿರ್ಗಮಿಸಿತ್ತು.

2021ರಲ್ಲಿ ಕೋಪಾ ಅಮೆರಿಕ, 2022ರಲ್ಲಿ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿರುವ ಮೆಸ್ಸಿ ಪಡೆ ಸತತ 3 ಪ್ರಮುಖ ಟ್ರೋಫಿ ಗೆದ್ದ 2ನೇ ತಂಡ ಎನಿಸುವ ಅವಕಾಶ ಹೊಂದಿದ್ದು, ಸ್ಪೇನ್ ತಂಡ ಮಾತ್ರ ಇದುವರೆಗೂ ಪ್ರಮುಖ ಮೂರು ುಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿರುವ ಏಕೈಕ ತಂಡ ಎನಿಸಿದೆ. 2010ರಲ್ಲಿ ಫಿಾ ವಿಶ್ವಕಪ್ ಗೆದ್ದಾಗ ಸ್ಪೇನ್ ಈ ದಾಖಲೆ ಬರೆಯಿತು. ಇದಕ್ಕೂ ಮುನ್ನ 2008 ಮತ್ತು 2012ರ ಯುರೋ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

2. ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಗರಿಷ್ಠ ಗೋಲು ಸಿಡಿಸಿದ 2ನೇ ಆಟಗಾರ ಎನಿಸಿದರು. ಕ್ರಿಶ್ಚಿಯಾನೊ ರೊನಾಲ್ಡೊ (130) ಅಗ್ರಸ್ಥಾನದಲ್ಲಿದ್ದು, ಇರಾನ್ ಅಲಿ ಡೇಯ್ (108), ಸುನೀಲ್ ಛೇಟ್ರಿ (94) ಕ್ರಮವಾಗಿ 3,4ನೇ ಸ್ಥಾನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net