ಮಾನಸಿಕವಾಗಿ... ಬಾಕ್ಸಿಂಗ್​ ಡೇ ಟೆಸ್ಟ್​ ಸೋಲಿನ ಕುರಿತು ನಾಯಕ Rohit Sharma ನೀಡಿದ ಕಾರಣ ಹೀಗಿದೆ

Rohit Sharma
Published on

ಮೆಲ್ಬೋರ್ನ್​​: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್​-ಗವಾಸ್ಕರ್ ಟ್ರೋಫಿ ಟೆಸ್ಟ್​​​​ ಸರಣಿಯ (Border Gavaskar Trophy Test Series) ನಾಲ್ಕನೇ ಪಂದ್ಯದಲ್ಲಿ ಟೀಮ್​ ಇಂಡಿಯಾ (Team India) 184 ರನ್​ಗಳ ಸೋಲುಂಡಿದ್ದು, ಮುಂಬರುವ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಬಹುತೇಕ ಮುಚ್ಚಿಕೊಂಡಿದೆ. ಸರಣಿಯ ಮೊದಲ ಪಂದ್ಯ ಹೊರತುಪಡಿಸಿದರೆ ಉಳಿದ ಮ್ಯಾಚ್​ಗಳಲ್ಲಿ ಕಳಪೆ ಪ್ರದರ್ಶನ ತೋರಿರುವ ಭಾರತ ತಂಡದ ವಿರುದ್ಧ ಫ್ಯಾನ್ಸ್​ ಕಿಡಿಕಾರುತ್ತಿದ್ದು, 2024ಅನ್ನು ಸೋಲಿನ ಮೂಲಕ ಟೀಮ್​ ಇಂಡಿಯಾ ಅಂತ್ಯಗೊಳಿಸಿದೆ.

ಇನ್ನೂ ಬಾಕ್ಸಿಂಗ್​ ಡೇ ಟೆಸ್ಟ್​​ನಲ್ಲಿ ಭಾರತದ ಸೋಲಿನ ಕುರಿತು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (Rohit Sharma) ಮಾತನಾಡಿದ್ದು, ತಂಡವು ಹೋರಾಡಲು ವಿಫಲವಾಗಿದ್ದು, ಮಾನಸಿಕವಾಗಿ ತೊಂದರೆಗೀಡಾಗಿದ್ದೇವೆ ಎಂದು ಹೇಳಿದ್ದಾರೆ.

Rohit Sharma

ಪೋಸ್ಟ್ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಈ ಬಗ್ಗೆ ಮಾತನಾಡಿದ ರೋಹಿತ್​ ಶರ್ಮ (Rohit Sharma), ಈ ಸೋಲು ಸಾಕಷ್ಟು ನಿರಾಶಾದಾಯಕವಾಗಿದೆ. ಪಂದ್ಯಗಳನ್ನು ಗೆಲ್ಲುವ ಮಾರ್ಗಗಳಿದ್ದರು ನಾವು ಅದನ್ನು ಹುಡುಕುವುದರಲ್ಲಿ ವಿಫಲರಾಗಿದ್ಧೇವೆ. ಕೊನೆಯವರೆಗೂ ಹೋರಾಡ ಬೇಕೆಂದುಕೊಂಡಿದ್ದೆವು ದುರಾದೃಷ್ಟವಶಾತ್​ ಅದು ಸಾಧ್ಯವಾಗಲಿಲ್ಲ. ನಾವು ಕಠಿಣ ಕ್ರಿಕೆಟ್​ ಆಡಲು ಬಯಸುತ್ತೇವೆ ಮತ್ತು ಸೋಲಿಗೆ ಕಾರಣವಾದ ಅಂಶಗಳನ್ನು ಹುಡುಕುತ್ತೇವೆ. 

340 ರನ್​ ಗಳಿಸುವುದು ಸುಲಭದ ಮಾತಲ್ಲ ಎಂಬುದು ನಮಗೆ ತಿಳಿದಿತ್ತು. ಕೊನೆಯ ಎರಡು ಸೆಷನ್​ನಲ್ಲಿ ಆಸ್ಟ್ರೇಲಿಯಾದವರು ನಿಜಕ್ಕೂ ಚೆನ್ನಾಗಿ ಬೌಲಿಂಗ್​ ಮಾಡಿದರು. ನಮ್ಮ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಹೀಗಾಗಿ ನಾವು ಸೋಲಬೇಕಾಯಿತು. ಮುಂದಿನ ಪಂದ್ಯದಲ್ಲಿ ಈ ರೀತಿಯ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net