ವಾಂಖೆಡೆ @50; ಬಾಲ್​ನಲ್ಲಿ ಕಲಾಕೃತಿ ರಚಿಸುವ ಮೂಲಕ ಗಿನ್ನೆಸ್​ ದಾಖಲೆಗೆ ಭಾಜನವಾದ MCA

MCA
Published on

ಮುಂಬೈ: ದೇಶದ ಪ್ರತಿಷ್ಠಿತ ಕ್ರೀಡಾಂಗಣಗಳಲ್ಲಿ ಒಂದಾದ ವಾಂಖೆಡೆ ಕ್ರೀಡಾಂಗಣವು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, 50ನೇ ವರ್ಷದ ಸವಿನೆನಪಿಗಾಗಿ ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ (MCA) ಈಚೆಗೆ ಸಮಾರಂಭವನ್ನು ಆಯೋಜಿಸಿತ್ತು. ಸಮಾರಂಭದಲ್ಲಿ ಮಾಜಿ ಹಾಗೂ ಹಾಲಿ ಕ್ರಿಕೆಟಿಗರನ್ನು ಸನ್ಮಾನಿಸಿದ್ದ ಕ್ರಿಕೆಟ್​ ಮಂಡಳಿಯು ಇದೀಗ ಗಿನ್ನೆಸ್​​ ದಾಖಲೆಗೆ ಭಾಜನರಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ.

50 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಕ್ರಿಕೆಟ್​ ಬಾಲ್​ಗಳನ್ನು ಬಳಸಿ Largest Cricket Ball Sentence ಮಾಡುವ ಮೂಲಕ ಗಿನ್ನೆಸ್​ ದಾಖಲೆಗೆ ಎಂಸಿಎ (MCA) ಭಾಜನವಾಗಿದೆ. ಜನವರಿ 23, 1975ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ವೆಸ್ಟ್​ ಇಂಡೀಸ್​ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಿತ್ತು. ಇಂದಿಗೆ 50 ವರ್ಷಗಳು ತುಂಬಿದ ಹಿನ್ನೆಲೆ ಮಂಡಳಿಯು ಕ್ರಿಕೆಟ್​ ಬಾಲ್​ಗಳನ್ನು ಬಳಸಿ ಈ ಕಲಾಕೃತಿಯನ್ನು ರಚಿಸುವ ಮೂಲಕ ಸ್ಮರಣೀಯವಾಗಿಸಿದೆ. 

Largest Cricket Ball Sentence ಮಾಡಲು 14,505 ಕ್ರಿಕೆಟ್​ ಬಾಲ್​ಗಳನ್ನು ಬಳಸಲಾಗಿತ್ತು. ಎಂಸಿಎ ಈ ದಾಖಲೆಯನ್ನು ಸಾಧಿಸಲು ಬಳಸಿದ ಚೆಂಡುಗಳನ್ನು ನಗರದ ಶಾಲೆಗಳು, ಕ್ಲಬ್‌ಗಳು ಮತ್ತು ಎನ್‌ಜಿಒಗಳ ಮಹತ್ವಾಕಾಂಕ್ಷಿ ಕ್ರಿಕೆಟಿಗರಿಗೆ ನೀಡಿ, ಈ ದಾಖಲೆಯಿಂದ ಸ್ಫೂರ್ತಿ ಪಡೆಯಲು ಮತ್ತು ಅವರ ವೃತ್ತಿಜೀವನದಲ್ಲಿ ಹೆಚ್ಚಿನ ಮೈಲಿಗಲ್ಲುಗಳನ್ನು ಸಾಧಿಸಲು ಪ್ರೋತ್ಸಾಹಿಸುತ್ತದೆ.

MCA
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net