ಮಾಸ್ಕ್ ಧರಿಸಿ ಬ್ರಾ ತ್ಯಜಿಸಿ, ಕರೊನಾಗೆ ಗಾಲ್ಫ್ ಆಟಗಾರ್ತಿ ಮದ್ದು!

Paige Spiranac3
Published on

ನ್ಯೂಯಾರ್ಕ್: ಕರೊನಾ ಸೋಂಕಿಗೆ ಸಮರ್ಥ ಮದ್ದು ಕಂಡು ಹಿಡಿಯಲಾಗದೆ ಜಗತ್ತೇ ಪರದಾಡುತ್ತಿರುವ ನಡುವೆ ಅಮೆರಿಕದ ಗಾಲ್ಫ್ ಆಟಗಾರ್ತಿಯೊಬ್ಬಳು ಒಂದು ವಿಶೇಷ ಮದ್ದು ಪತ್ತೆ ಹಚ್ಚಿದ್ದಾಳೆ. ಅದೇನು ಗೊತ್ತೇ?

ಅಮೆರಿಕದಲ್ಲಿ ಕರೊನಾ ಹಾವಳಿ ಭಾರಿ ಪ್ರಮಾಣದಲ್ಲಿರುವ ಕಾರಣ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಆದರೂ ಜನ ಅದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಕಿಡಿ ಕಾರಿರುವ ವೃತ್ತಿಪರ ಗಾಲ್ಫ್ ಆಟಗಾರ್ತಿ ಪೈಗ್ ಸ್ಪಿರನಾಕ್, 'ಹುಡುಗರು ಮಾಸ್ಕ್ ಧರಿಸದೆ ಸುತ್ತಾಡುತ್ತಿದ್ದಾರೆ, ಆದರೆ ಬ್ರಾಲೆಸ್ ಆಗಿ ಶರ್ಟ್ ಧರಿಸಿ ಓಡಾಡುವ ಮಹಿಳೆಯರಿಗೆ ಅಪಮಾನ ಮಾಡುತ್ತಾರೆ' ಎಂದು ಟೀಕಿಸಿದ್ದಾರೆ. ಅವರ ಈ ಟ್ವೀಟ್​ಗೆ ಭಾರಿ ಪ್ರಶಂಸೆ ವ್ಯಕ್ತವಾದ ಬೆನ್ನಲ್ಲೇ, 'ಒಮ್ಮತಾಭಿಪ್ರಾಯ ಏನೆಂದರೆ, ಮಾಸ್ಕ್ ಧರಿಸಿ ಬ್ರಾ ತ್ಯಜಿಸಿ' ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಗಂಡಸರು ಮಾಸ್ಕ್ ಧರಿಸುವುದಾದರೆ, ಮಹಿಳೆಯರು ಬ್ರಾ ತ್ಯಜಿಸುತ್ತಾರೆ ಎಂಬ ಅವರ ವಾದ ಅಮೆರಿಕದಲ್ಲಿ ಭಾರಿ ಜನಪ್ರಿಯತೆ ಪಡೆದಿದೆ. ಜತೆಗೆ ಬ್ರಾಗೆ ಬಳಸುವ ಬಟ್ಟೆಯನ್ನೆಲ್ಲ ಮಾಸ್ಕ್ ತಯಾರಿಸಲು ಬಳಸಬಹುದು ಎಂದು ಮತ್ತೊಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

27 ವರ್ಷದ ಪೈಗ್ ಸ್ಪಿರನಾಕ್ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಜನಪ್ರಿಯರಾಗಿದ್ದು, ಅವರ ಈ ಟ್ವೀಟ್​ಗೆ ಮತ್ತು ಅವರ 'ಕರೋನಾ ಮದ್ದು' ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಅವರು ಒಳಉಡುಪುಗಳನ್ನು ತ್ಯಜಿಸುವ ಬಗ್ಗೆ ಮಾತನಾಡಿದ್ದು ಇದೆ ಮೊದಲಲ್ಲ! ಈ ಹಿಂದೆ ಅವರು, ಗಾಲ್ಫ್ ಆಟ ಆಡುವ ವೇಳೆಯೂ ನಾನು ಒಳಉಡುಪು ಧರಿಸಲು ಇಷ್ಟ ಪಡುವುದಿಲ್ಲ ಎಂದಿದ್ದರು. 'ಸಾಮಾನ್ಯವಾಗಿ ನಾನು ಒಳಉಡುಪು ಧರಿಸಲು ಇಷ್ಟ ಪಡುವುದಿಲ್ಲ. ನನ್ನ ಶಾರ್ಟ್ಸ್ ಹಲವು ಪದರಗಳನ್ನು ಹೊಂದಿರುತ್ತವೆ. ನನ್ನ ಹೆಚ್ಚಿನ ಸ್ಕರ್ಟ್​ಗಳು ಶಾರ್ಟ್ಸ್ ಒಳಗೊಂಡಿರುತ್ತವೆ. ಹೀಗಾಗಿ ಒಳಉಡುಪು ಅಗತ್ಯ ಬರುವುದಿಲ್ಲ' ಎಂದಿದ್ದರು.

ಪೈಗ್ ಇತ್ತೀಚೆಗೆ ತಾವು ನಿಜವಾದ ಪ್ರೀತಿ ಕಂಡುಕೊಳ್ಳಲು ವಿಫಲರಾಗಿರುವ ಬಗ್ಗೆಯೂ ಹೇಳಿಕೊಂಡಿದ್ದರು. ಅವರ ಪ್ರಕಾರ, ಪುರುಷರು ಅವರನ್ನು ಗಾಲ್ಫ್ ಆಟದ ಟಿಪ್ಸ್ ಪಡೆದುಕೊಳ್ಳಲು ಮಾತ್ರ ಬಳಸಿಕೊಳ್ಳುತ್ತಾರಂತೆ. 'ನಾನೂ ಗಾಲ್ಫ್ ಆಡುತ್ತೇನೆ' ಎಂದ ಬಳಿಕ ಅವರಿಂದ ಟಿಪ್ಸ್ ಪಡೆದುಕೊಂಡು ದೂರವಾಗುತ್ತಾರೆ ಎಂದು ದೂರಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಅವರ ಹಾಟ್ ಫೋಟೋಗಳು ಸಾಕಷ್ಟು ಅಭಿಮಾನಿಗಳನ್ನು ಹೊಂದಿವೆ. ಇನ್​ಸ್ಟಾಗ್ರಾಂನಲ್ಲಿ ಅವರಿಗೆ 27 ಲಕ್ಷ ಅನುಯಾಯಿಗಳಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಗಾಲ್ಫ್ ಆಟದ ಟಿಪ್ಸ್​ಗಳನ್ನೂ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net