ಡಿ.15ರಂದು ಬೆಂಗಳೂರು ಆವೃತ್ತಿಯ ಮಾರುತಿ ಸುಜುಕಿ ಅರೆನಾ ಡೆವಿಲ್ಸ್ ಸರ್ಕ್ಯೂಟ್ ಆಯೋಜನೆ

MS Devil
Published on

ಬೆಂಗಳೂರು: ದೇಶದ ಅತಿದೊಡ್ಡ ಅಬ್ ಸ್ಟಾಕಲ್ ರೇಸ್ ನ 12ನೇ ಆವೃತ್ತಿಗೆ ಬೆಂಗಳೂರು ಸಜ್ಜಾಗಿದೆ. ನೀವು ಕೂಡ ಈ ರೋಮಾಂಚಕ ರೇಸ್ ಗೆ ಸಾಕ್ಷಿಯಾಗಲು ಸಿದ್ಧರಾಗಿ. ಮಾರುತಿ ಸುಜುಕಿ ಅರೆನಾ ಡೆವಿಲ್ಸ್ ಸರ್ಕ್ಯೂಟ್ ಎಂಬ ಮನಮೋಹಕ ರೇಸ್ ಬೆಂಗಳೂರಿನಲ್ಲಿ ನಡೆಯಲ್ಲಿದ್ದು, ಈ ರೇಸ್ ನಲ್ಲಿ 5 ಕಿಮೀ ದೂರವನ್ನು ಕ್ರಮಿಸಬೇಕಾಗುತ್ತದೆ.

ಈ ದಾರಿ ಮಧ್ಯದಲ್ಲಿ ಮಿಲಿಟರಿ-ಶೈಲಿಯ 15 ಅಡೆತಡೆಗಳನ್ನು ರೇಸರ್ ಗಳು ಎದುರಿಸುತ್ತಾರೆ. ಅವನ್ನೆಲ್ಲಾ ನಿವಾರಿಸಿಕೊಂಡು ಮುಂದೆ ಸಾಗಿ ಜಯಿಸುವುದು ಬಹಳ ದೊಡ್ಡ ಸವಾಲಾಗಿದೆ. ಈ ರೇಸ್ ಗೆದ್ದು ಡೆವಿಲ್ ಸ್ಲೇಯರ್ ಕಿರೀಟವನ್ನು ಧರಿಸಲಿರುವ ರೇಸರ್ ರನ್ನು ಭೇಟಿಯಾಗಲು, ಮನಮೋಹಕ ರೇಸ್ ಗೆ ಸಾಕ್ಷಿಯಾಗಲು ಎಲ್ಲರಿಗೂ ಈ ಮೂಲಕ ಆಹ್ವಾನ ನೀಡಲಾಗುತ್ತಿದೆ.

ಕಾರ್ಯಕ್ರಮ ವಿವರ:

ದಿನಾಂಕ: 15ನೇ ಡಿಸೆಂಬರ್ 2024

ಸಮಯ: ಬೆಳಿಗ್ಗೆ 8:00 ಗಂಟೆಗೆ

ಸ್ಥಳ: ಸೆಂಚುರಿ ವೈಟ್‌ಫೀಲ್ಡ್, ಬೆಂಗಳೂರು - 560049, ಕರ್ನಾಟಕ

ಹೆಚ್ಚಿನ ಮಾಹಿತಿಗೆ: www.devilscircuit.com

MS Devil
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net