ಡಬ್ಲ್ಯುಪಿಎಲ್​-ಐಪಿಎಲ್ ಫೈನಲ್​ ಪಂದ್ಯಗಳ ನಡುವೆ ಹಲವು ಸಾಮ್ಯತೆ!

web wpl ipl
Published on

ಬೆಂಗಳೂರು: ಆರ್​ಸಿಬಿ ಮಹಿಳಾ ತಂಡದಂತೆ ಪುರುಷರ ತಂಡವೂ ಪ್ರಶಸ್ತಿ ಗೆಲ್ಲುತ್ತದೆ ಎಂಬ ನಿರೀಕ್ಷೆ ನಿಜವಾಗಲಿಲ್ಲ. ಆದರೂ ಡಬ್ಲ್ಯುಪಿಎಲ್​-ಐಪಿಎಲ್​ ನಡುವೆ ಸಾಮ್ಯತೆ ಕಾಣಿಸಿದೆ! ಉಭಯ ಟೂರ್ನಿಗಳ ಫೈನಲ್​ ಪಂದ್ಯದ ನಡುವೆ ಹಲವು ಸಾಮ್ಯತೆಗಳಿವೆ.

ಡಬ್ಲ್ಯುಪಿಎಲ್​ ಫೈನಲ್​ನಲ್ಲೂ ಮೊದಲು ಬ್ಯಾಟಿಂಗ್​ ಮಾಡಿದ ಡೆಲ್ಲಿ ತಂಡ 18.3 ಓವರ್​ಗಳಲ್ಲೇ 113 ರನ್​ಗಳಿಗೇ ಆಲೌಟ್​ ಆಗಿತ್ತು. ಚೇಸಿಂಗ್​ ಮಾಡಿದ ಆರ್​ಸಿಬಿ ತಂಡ 8 ವಿಕೆಟ್​ಗಳಿಂದಲೇ ಗೆದ್ದಿತ್ತು. ಐಪಿಎಲ್ ಫೈನಲ್​ನಲ್ಲೂ ಸನ್​ರೈಸರ್ಸ್​ 18.3 ಓವರ್​ಗಳಲ್ಲೇ 113 ರನ್​ಗಳಿಗೆ ಆಲೌಟ್​ ಆಗಿದ್ದರೆ, ಕೆಕೆಆರ್​ 8 ವಿಕೆಟ್​ಗಳಿಂದಲೇ ಜಯಿಸಿತು.

ಡಬ್ಲ್ಯುಪಿಎಲ್​ನಲ್ಲೂ ಮುಂಬೈ ಆಟಗಾರ್ತಿ (ಸ್ಮೃತಿ ಮಂದನಾ) ಸಾರಥ್ಯದ ತಂಡವೇ ಗೆದ್ದಿದ್ದರೆ, ಐಪಿಎಲ್​ನಲ್ಲೂ ಮುಂಬೈ ಆಟಗಾರನ (ಶ್ರೇಯಸ್​ ಅಯ್ಯರ್​) ಸಾರಥ್ಯದ ತಂಡವೇ ಗೆದ್ದಿತು. ಎರಡೂ ಫೈನಲ್​ಗಳಲ್ಲಿ ಸೋತ ತಂಡಕ್ಕೆ ಆಸ್ಟ್ರೆಲಿಯನ್ನರೇ (ಮೆಗ್​ ಲ್ಯಾನಿಂಗ್​, ಪ್ಯಾಟ್​ ಕಮ್ಮಿನ್ಸ್​) ನಾಯಕರಾಗಿದ್ದರು. ಎರಡೂ ಫೈನಲ್​ಗಳಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ತಂಡವೇ ಸೋತಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net