

ಚೆನ್ನೈ: 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಏರ್ಪಿಸ್ತೂಲ್ ವಿಭಾಗದಲ್ಲಿ ಅವಳಿ ಕಂಚು ಪದಕಗಳನ್ನು ಗೆದ್ದು ಕೊಟ್ಟ ಮನು ಭಾಕರ್ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಒಲಿಂಪಿಕ್ಸ್ನ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದಾರೆ.
ಮನು ಭಾಕರ್ ಅವರ ಸಾಧನೆಯನ್ನು ಮೆಚ್ಚಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಅವರಿಗೆ ಇತ್ತೀಚಿಗೆ ತಮಿಳುನಾಡಿನ ಕಾಲೇಜೊಂದರಲ್ಲಿ ಸನ್ಮಾನ ಸಮಾಂರಭವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಅವರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಯಾರೆಂಬುದೇ ತಮಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ವಿದ್ಯಾರ್ಥಿಯೊಬ್ಬರು ಮನು ಭಾಕರ್ಗೆ ಮಹಾಬಲಿಪುರಂ, ಮೀನಾಕ್ಷಿ ದೇವಸ್ಥಾನ ಹಾಗೂ ಎಂ.ಕೆ. ಸ್ಟಾಲಿನ್ ಬಗ್ಗೆ ಕೇಳಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ನಗುತ್ತಲೇ ಉತ್ತರಿಸುವ ಮನು ಇವರ ಬಗ್ಗೆ ನನಗೆ ತಿಳಿದಿಲ್ಲ. ಚೆಸ್ ಆಟಗಾರ ಆರ್. ಪ್ರಗ್ನಾನಂದ ಮತ್ತು ಪ್ರಸಿದ್ಧ ನಟ ದಳಪತಿ ವಿಜಯ್ ಅವರ ಬಗ್ಗೆ ನನಗೆ ಗೊತ್ತು. ನಾನು ಪ್ರಾಗ್ ಆಟವನ್ನು ಲೈವ್ ಆಗಿ ನೋಡಿದ್ದೇನೆ ಮತ್ತು ವಿಜಯ್ ಬಗ್ಗೆಯೂ ತಿಳಿದಿದೆ ಎಂದು ಹೇಳಿದ್ದಾರೆ.
ಮಹಿಳೆಯರ 10 ಮೀಟರ್ ಏರ್ ಶೂಟರ್ ಸ್ವರ್ಧೆಯಲ್ಲಿ ಮನು ಭಾಕರ್ ಕಂಚು ಗೆಲ್ಲುವ ಮೂಲಕ ಭಾರತದ ಖಾತೆಯನ್ನು ತೆರೆದರು. ನಂತರ ಸರಬ್ಜೋತ್ ಸಿಂಗ್ ಜತೆಗೆ ಮತ್ತೊಂದು ಕಂಚಿನ ಪದಕವನ್ನು ಗೆದಿದ್ದಾರೆ. 25ಮೀ ಏರ್ಪಿಸ್ತೂಲ್ ವಿಭಾಗದಲ್ಲಿ ಅವರು ಹ್ಯಾಟ್ರಿಕ್ ಪದಕ ಸಾಧಿಸುವ ಕನಸು ಸ್ವಲ್ಪದರಲ್ಲೇ ಭಗ್ನಗೊಂಡಿತ್ತು.