

ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿ ಸಹಭಾಗಿತ್ವದಲ್ಲಿ ಸ್ವರಾಜ್ಯ ಮೈದಾನದಲ್ಲಿ ಗುರುವಾರ ಪ್ರಾರಂಭ ಗೊಂಡ 80ನೇ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ ಚಾಂಪಿಯನ್ಷಿಪ್ನ ಮೊದಲ ದಿನ ಮಂಗಳೂರು ವಿವಿ ಪ್ರತಿನಿಧಿಸಿದ ಆಳ್ವಾಸ್ ಅಥ್ಲೀಟ್ ಪ್ರತಾಪ್ ನರೇಂದರ್, 10 ಸಾವಿರ ಮೀಟರ್ ಓಟದಲ್ಲಿ ಕೂಟ ದಾಖಲೆ ಮಾಡಿದ್ದಾರೆ.
ಪುರುಷರ ವಿಭಾಗದ ಸ್ಪರ್ಧೆಯಲ್ಲಿ ನರೇಂದರ್ 29.42:19 ನಿಮಿಷಗಳಲ್ಲಿ ಮುಗಿಸಿ, 2018ರಲ್ಲಿ ಕೂಟ ದಾಖಲೆ ನಿರ್ವಿುಸಿದ ಮಂಗಳೂರು ವಿವಿಯವರೇ ಆದ ರಂಜಿತ್ ಕುಮಾರ್ ಪಟೇಲ್ (29.45:81 ನಿಮಿಷ) ದಾಖಲೆಯನ್ನು ಹಿಂದಿಕ್ಕಿದ್ದಾರೆ. ಮೊದಲ ದಿನದ ಫಲಿತಾಂಶ: ಪುರುಷರ ವಿಭಾಗದ 10,000 ಮೀ. ಓಟ: 1. ಪ್ರತಾಪ್ ನರೇಂದರ್, (ಮಂಗಳೂರು ವಿವಿ), 2. ಕಿಸನ್ ತದ್ವಿ - ಸಾವಿತ್ರಿ ಬಾಯಿ ಫುಲೆ ಪುಣೆ ವಿವಿ, 3. ಯಾದವ್ ಸಂತೋಷ್ (ಯುನಿವರ್ಸಿಟಿ ಆಫ್ ಕೋಲ್ಕತ). ಮಹಿಳೆಯರ ವಿಭಾಗದ 10,000 ಮೀ. ಓಟ: 1. ಸೋನುನ್ ಪೂನಮ್ (ಸಾವಿತ್ರಿಬಾಯಿ ಫುಲೆ ಪುಣೆ ವಿವಿ), 2. ಕೆ.ಎಂ ಅಮೃತ ಪಟೇಲ್ (ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠ ವಾರಣಾಸಿ), 3. ಸೋನಿಕಾ (ಮಹರ್ಷಿ ದಯಾನಂದ ವಿವಿ).
ದಾಖಲೆ ನಿರ್ವಿುಸಿದ್ದು ಖುಷಿ ತಂದಿದೆ. ಕಳೆದ ಬಾರಿಯ ಓಟವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈ ಹಿಂದೆ ಕೂಟ ದಾಖಲೆ ನಿರ್ವಿುಸಿದ ಮಂಗಳೂರು ವಿವಿ ರಂಜಿತ್ ಕುಮಾರ್ ಪಟೇಲ್ ನನ್ನ ಸೀನಿಯರ್ ಹಾಗೂ ರೂಮ್ಮೇಟ್ ಟ್ ಆಗಿದ್ದರು. ವಿಜಯ ಸಿಂಗ್ ಅವರು ನನಗೆ ತರಬೇತಿ ನೀಡಿದ್ದು, ಹೊಸ ದಾಖಲೆ ಮಾಡಿದ್ದು ಹರ್ಷ ತಂದಿದೆ. | ಪ್ರತಾಪ್ ನರೇಂದರ್ ನೂತನ ಕೂಟ ದಾಖಲೆ ಮಾಡಿದ ಓಟಗಾರ