ವಿಟಿಯು ಕ್ರೀಡಾಕೂಟದಲ್ಲಿ ಮಂಗಳೂರು ಪಾರಮ್ಯ

VTU Games
ಶಿವಮೊಗ್ಗ ಜೆಎನ್‌ಎನ್‌ಸಿಇ ಮೈದಾನದಲ್ಲಿ ವಿಟಿಯು ಅಂತರ ಕಾಲೇಜು ಅಥ್ಲೆಟಿಕ್‌ನ ಮಹಿಳಾ ವಿಭಾಗದ 100 ಮೀ.ಹರ್ಡಲ್ಸ್‌ನಲ್ಲಿ ಪಾಲ್ಗೊಂಡಿದ್ದ ಸ್ಪರ್ಧಾಳುಗಳು.
Published on

ಶಿವಮೊಗ್ಗ: ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ 26ನೇ ರಾಜ್ಯಮಟ್ಟದ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟ ಸದೃಡ-2.0 ಎರಡನೇ ದಿನವೂ ವಿದ್ಯಾರ್ಥಿಗಳು ಉತ್ಸುಕರಾಗಿ ಭಾಗವಹಿಸಿದ್ದು, ಮಂಗಳೂರು ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು ಪಾರಮ್ಯ ಮೆರೆದರು.

ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕಿ ಸ್ವರೂಪ ರಾಣಿ, ಕೆನರಾ ಜೆಎನ್‌ಎನ್‌ಸಿ ಶಾಖೆಯ ವ್ಯವಸ್ಥಾಪಕಿ ಪಲ್ಲವಿ, ಅಂತರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಡಾ. ಎಚ್.ಟಿ.ರಾಧಾಕೃಷ್ಣ, ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ವಿಜೇತರಿಗೆ ಪದಕ ವಿತರಿಸಿದರು.

ಪುರುಷರ ವಿಭಾಗ

* ಟ್ರಿಪಲ್ ಜಂಪ್: 1.ಧನುಷ್ ಎಸ್.ಗೌಡ, ಬೆಂಗಳೂರು ಎಂಎಸ್‌ಆರ್‌ಐಟಿ, 2.ವಿನಾಯಕ, ಮೂಡಬಿದರೆ ಆಳ್ವಾಸ್ ಕಾಲೇಜು, 3.ತಿಲಕ್ ನಾಯ್ಡು, ಬೆಂಗಳೂರು ಬಿಎನ್‌ಎಂಐಟಿ.

* 20 ಕಿ.ಮೀ. ನಡಿಗೆ: 1.ಬಿ.ಎನ್.ಅನ್ವಿತ್, ಪುತ್ತೂರು ವಿಸಿಇಟಿ, 2. ಪ್ರವಿತ್, ಮಂಗಳೂರು ಸಹ್ಯಾದ್ರಿ ಕಾಲೇಜು, 3.ಅಜಿತ್ ಕುಮಾರ್, ಪುತ್ತೂರು ವಿಸಿಇಟಿ.

* ಡಿಸ್ಕಸ್ ಥ್ರೋ: 1.ನಿರೀಕ್ಷಿತ್ ಸಂತೋಷ ನಾಯಕ್, ಮೂಡಬಿದರೆ ಆಳ್ವಾಸ್ ಕಾಲೇಜು, 2.ಸಂಪತ್ ಹೆಗಡೆ, ಬೆಂಗಳೂರು ಎಂಎಸ್‌ಆರ್‌ಐಟಿ, ಮಣಿಕಂಠ, ಬೆಂಗಳೂರು ಬಿಐಟಿ.

* 100 ಮೀ. ಓಟ: 1. ಚಿರಂಜೀವಿ ಗೌಡ, ಮೈಸೂರು ವಿವಿಸಿಇ, 2.ಆರ್ಯನ್ ನಾಡಿಗ್, ಮುಧೋಳ ವಿಜಿಎಂಐಟಿ, 3.ಆರ್.ಎಸ್.ಅಮೋಘ, ಬೆಳಗಾವಿ ಅಂಗಡಿ ಐಟಿಎಂ ಕಾಲೇಜು.

5000 ಮೀ. ಓಟ: 1. ಎ.ಎಂ.ತಿಶಾನ್, ಸುಳ್ಯ ಕೆವಿಜಿಸಿಇ, 2.ರಾಜೇಶ್ ಆರ್.ನಿರ್ವನೇಶ್ವರ್, ಬೆಂಗಳೂರು ದಯಾನಂದ ಸಾಗರ ಕಾಲೇಜು, 3. ಎ.ಆರ್.ಅಕ್ಷಯ್, ಮಂಗಳೂರು ಶ್ರೀನಿವಾಸ ಐಟಿ.

ಮಹಿಳೆಯರ ವಿಭಾಗ

* ಟ್ರಿಪಲ್ ಜಂಪ್ : 1.ವಿ.ವಿನೀತ, ಮಂಗಳೂರು ಶ್ರೀನಿವಾಸ ಐಟಿ, 2.ಜೆ.ಎಸ್.ಪಲ್ಲವಿ, ಮಂಗಳೂರು ಸಹ್ಯಾದ್ರಿ ಕಾಲೇಜು, 3.ಅರ್ಪಿತ ಬಾಲಚಂದ್ರ ನಾಯಕ್, ಪುತ್ತೂರು ವಿಸಿಇಟಿ.

* 20 ಕಿ.ಮೀ. ನಡಿಗೆ: ಎಸ್.ಕೆ.ನಿಖಿತಾ, ಶಿವಮೊಗ್ಗ ಜೆಎನ್‌ಎನ್‌ಸಿಇ, 2. ಡಿ.ಸಿ.ಚಸ್ಮಿತಾ, ಮಂಗಳೂರು ಸಹ್ಯಾದ್ರಿ ಕಾಲೇಜು, 3.ಕೆ.ಪಿ.ಸಾಹಿತ್ಯ, ಮಂಗಳೂರು ಸಹ್ಯಾದ್ರಿ ಕಾಲೇಜು.

* ಡಿಸ್ಕಸ್ ಥ್ರೋ: 1.ಲಿಖಿತ ಯೋಗೇಶ್,ಬೆಂಗಳೂರು ಡಿಎಸ್‌ಸಿಇ, 2.ಎ.ಪ್ರಣಾಂಜಲಿ, ಮಂಗಳೂರು ಸಹ್ಯಾದ್ರಿ ಕಾಲೇಜು, 3.ರಿಕ್ತಾ ಕಿರಣ್, ಮಂಗಳೂರು ಶ್ರೀನಿವಾಸ ಕಾಲೇಜು.

* 100 ಮೀ. ಓಟ: 1ಎಂ.ಎಸ್.ಚೈತನ್ಯ, ಮಂಗಳೂರು ಶ್ರೀದೇವಿ ಕಾಲೇಜು, 2.ಎಸ್.ಧೃತಿ, ಬೆಂಗಳೂರು ಬಿಎಂಎಸ್ ಆರ್ಕ್, 3.ಎಂ.ಧೃವ, ಬೆಂಗಳೂರು ಎಎಂಸಿಇಸಿ.

* 100 ಮೀ. ಹರ್ಡಲ್ಸ್: 1.ಎಂ.ಎಸ್.ಚೈತನ್ಯ,ಮಂಗಳೂರು ಶ್ರೀದೇವಿ ಐಟಿ, 2. ಚೈತನ್ಯ, ಪುತ್ತೂರು ವಿಸಿಇಟಿ, 3.ವಿ.ಎಸ್.ಸಿಂಚನ, ಪುತ್ತೂರು ವಿಸಿಇಟಿ.

* 5000 ಮೀ. ಓಟ: 1.ಎಂ.ಶ್ರೇಯ, ಮಂಗಳೂರು ಶ್ರೀದೇವಿ ಐಟಿ, 2.ನಿಖಿತಾ ರೊಡ್ರಿಗಸ್, ಬೆಂಗಳೂರು ಆರ್.ವಿ.ಕಾಲೇಜು, 3.ಕೆ.ವಿ.ಭಾರ್ಗವಿ, ಬೆಂಗಳೂರು ಆರ್‌ಆರ್‌ಸಿಇ ಕಾಲೇಜು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net