ಐಸಿಸಿ ಟಿ20 ಆಟಗಾರ್ತಿ ಪ್ರಶಸ್ತಿ ರೇಸ್‌ನಲ್ಲಿ ಭಾರತದ ಸ್ಮತಿ ಮಂದನಾ

srmithi web
Published on

ನವದೆಹಲಿ: ಭಾರತ ತಂಡದ ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮತಿ ಮಂದನಾ ಐಸಿಸಿ ವರ್ಷದ ಟಿ20 ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಇಂಗ್ಲೆಂಡ್‌ನ ಟಾಮಿ ಬೆಯುಮೊಂಟ್, ನಾಟ್ ಸ್ಕೀವರ್ ಮತ್ತು ಐರ್ಲೆಂಡ್‌ನ ಗ್ಯಾಬಿ ಲೆವಿಸ್ ಪ್ರಶಸ್ತಿ ರೇಸ್‌ನಲ್ಲಿರುವ ಇತರ ಆಟಗಾರ್ತಿಯರು.

ಸ್ಮತಿ ಮಂದನಾ 2021ರಲ್ಲಿ ಆಡಿದ 9 ಟಿ20 ಪಂದ್ಯಗಳಲ್ಲಿ 31.87ರ ಸರಾಸರಿಯಲ್ಲಿ 2 ಅರ್ಧಶತಕ ಸಹಿತ 255 ರನ್ ಗಳಿಸಿದ್ದಾರೆ. ಭಾರತ ತಂಡ ಈ 9 ಟಿ20 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದ ನಡುವೆಯೂ ಸ್ಮತಿ ಗಮನಾರ್ಹ ನಿರ್ವಹಣೆ ತೋರಿದ್ದರು. ಪ್ರಶಸ್ತಿ ವಿಜೇತರ ಹೆಸರು ಜನವರಿ 23ರಂದು ಪ್ರಕಟವಾಗಲಿದೆ.

ಏಕದಿನ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಶಕೀಬ್, ಅಜಮ್: ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ಬಾಂಗ್ಲಾದೇಶ ಆಲ್ರೌಂಡರ್ ಶಕೀಬ್ ಅಲ್ ಹಸನ್, ಪಾಕಿಸ್ತಾನ ನಾಯಕ ಬಾಬರ್ ಅಜಮ್, ದಕ್ಷಿಣ ಆಫ್ರಿಕಾ ಬ್ಯಾಟರ್ ಜಾನೆಮನ್ ಮಲಾನ್ ಮತ್ತು ಐರ್ಲೆಂಡ್‌ನ ಪೌಲ್ ಸ್ಟರ್ಲಿಂಗ್ ನಾಮನಿರ್ದೇಶನಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net