ಮಹಿಳಾ ಬಿಗ್ ಬಾಷ್‌ಗೆ ಸ್ಮತಿ, ಜೆಮೀಮಾ: ಭಾರತದ 6 ಆಟಗಾರ್ತಿಯರಿಗೆ ಚಾನ್ಸ್

New-Project-1
Published on

ಮೆಲ್ಬೋರ್ನ್: ಭಾರತ ಮಹಿಳಾ ತಂಡದ ನಾಯಕಿ ಹರ್ಮಾನ್‌ಪ್ರೀತ್ ಕೌರ್ ಹಾಗೂ ಕರ್ನಾಟಕ ಶ್ರೇಯಾಂಕಾ ಪಾಟೀಲ್ ಮಹಿಳಾ ಬಿಗ್‌ಬಾಷ್ ಲೀಗ್ 10ನೇ ಆವೃತ್ತಿಯಲ್ಲಿ ್ರಾಂಚೈಸಿ ಒಪ್ಪಂದ ಪಡೆಯುವಲ್ಲಿ ವಿಲರಾಗಿದ್ದಾರೆ. ಸ್ಟಾರ್ ಬ್ಯಾಟರ್ ಸ್ಮತಿ ಮಂದನಾ, ಜೆಮೀಮಾ ರೋಡ್ರಿಗಸ್ ಸೇರಿ ಆರು ಮಹಿಳಾ ಕ್ರಿಕೆಟಿಗರು ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಮಹಿಳಾ ಟಿ20 ವಿಶ್ವಕಪ್ ಬಳಿಕ ಅಕ್ಟೋಬರ್ 27ರಂದು ಟೂರ್ನಿಗೆ ಚಾಲನೆ ದೊರೆಯಲಿದೆ.

35 ವರ್ಷದ ಹರ್ಮಾನ್‌ಪ್ರೀತ್ ಕೌರ್ 2021ರ ಟೂರ್ನಿಯ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರೂ, ಈ ಬಾರಿಯ ಡ್ರ್‌ಟಾನಲ್ಲಿ ಆಯ್ಕೆಮಾಡಲು ್ರಾಂಚೈಸಿಗಳು ಬಿಡ್ ಸಲ್ಲಿಸಲಿಲ್ಲ. ಇತ್ತೀಚೆಗೆ ದಿ ಹಂಡ್ರೆಡ್ (100 ಎಸೆತ) ಟೂರ್ನಿಯ ಡ್ರ್‌ಟಾನಲ್ಲಿ ಸ್ಥಾನ ಪಡೆಯುವಲ್ಲಿಯೂ ಕೌರ್ ವಿಲವಾಗಿದ್ದರು. ಕೆರಿಬಿಯನ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರ್ತಿ ಎನಿಸಿದ್ದ ಶ್ರೇಯಾಂಕಾ ಪಾಟೀಲ್ ಸೇರ್ಪಡೆಗೂ ಯಾವ ತಂಡಗಳು ಆಸಕ್ತಿ ತೋರಲಿಲ್ಲ.

ಭಾರತ ತಂಡದ ಉಪನಾಯಕಿ ಸ್ಮತಿ ಮಂದನಾ ಡ್ರ್‌ಟಾಗೂ ಮುನ್ನವೇ ಅಡಿಲೇಡ್ ಸ್ಟ್ರೈಕರ್ಸ್‌ನೊಂದಿಗೆ ಒಪ್ಪಂದ ಪಡೆದುಕೊಂಡಿದ್ದು, ಡಬ್ಲುೃಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಕೋಚ್ ಆಗಿರುವ ಲ್ಯೂಕ್ ವಿಲಿಯಮ್ಸ್ ಅವರೇ ತಂಡದ ಮುಖ್ಯಕೋಚ್ ಆಗಿದ್ದಾರೆ. ಜತೆಗೆ ಅಡಿಲೇಡ್ ಹಾಲಿ ಚಾಂಪಿಯನ್ ಸಹ ಆಗಿದೆ. ಶನಿವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಜೆಮೀಮಾ ರೋಡ್ರಿಗಸ್, ವೇಗಿ ಶಿಖಾ ಪಾಂಡೆ (ಬ್ರಿಸ್ಬೇನ್ ಹೀಟ್), ದಯಾಳನ್ ಹೇಮಲತಾ (ಪರ್ತ್ ಸ್ಕ್ರಾಚರ್ಸ್‌), ವಿಕೆಟ್ ಕೀಪರ್-ಬ್ಯಾಟರ್ ಯಸ್ತಿಕಾ ಭಾಟಿಯಾ ಹಾಗೂ ಆಲ್ರೌಂಡರ್ ದೀಪ್ತಿ ಶರ್ಮ (ಮೆಲ್ಬೋರ್ನ್ ಸ್ಟಾರ್ಸ್‌) ವಿವಿಧ ್ರಾಂಚೈಸಿಗಳ ಒಪ್ಪಂದ ಪಡೆಯುವಲ್ಲಿ ಯಶಸ್ವಿಯಾದರು. ಶಿಖಾ ಪಾಂಡೆ ಹೊರತುಪಡಿಸಿ ಉಳಿದ ಆಟಗಾರ್ತಿಯರು ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಗೈರಾಗಲಿದ್ದು, ಭಾರತದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಲವಾಗಿರುವ ಶಿಖಾ ಪಾಂಡೆ ಎಲ್ಲ ಪಂದ್ಯಗಳಿಗೆ ಲಭ್ಯರಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net