ಗುಲ್ಬರ್ಗಾ ಮಿಸ್ಟಿಕ್ಸ್‌ಗೆ ಸುಲಭ ತುತ್ತಾದ ಲಯನ್ಸ್

gm
Published on

ಬೆಂಗಳೂರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ಎದುರು 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ವೈಶಾಕ್ ವಿಜಯ್ ಕುಮಾರ್ ಪಡೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ವೈಶಾಕ್ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ನಡೆಸಿದ ಶಿವಮೊಗ್ಗ ಲಯನ್ಸ್ ಹಾರ್ದಿಕ್ ರಾಜ್ (27ಕ್ಕೆ3) ಹಾಗೂ ವೈಶಾಕ್ (9ಕ್ಕೆ2) ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿ 17.4 ಓವರ್‌ಗಳಲ್ಲಿ 121 ರನ್‌ಗಳಿಗೆ ಸರ್ವಪತನ ಕಂಡಿತು. ಸಾಧಾರಣ ಮೊತ್ತ ಬೆನ್ನತ್ತಿದ್ದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಆರಂಭಿಕ ಎಲ್‌ಆರ್ ಚೇತನ್ (58* ರನ್, 31 ಎಸೆತ, 4 ಬೌಂಡರಿ, 4 ಸಿಕ್ಸರ್) ಅರ್ಧಶತಕ ನೆರವಿನಿಂದ 12.4 ಓವರ್‌ಗಳಲ್ಲಿ 1 ವಿಕೆಟ್‌ಗೆ 126 ರನ್‌ಗಳಿಸಿ ಸುಲಭ ಗೆಲುವು ದಾಖಲಿಸಿತು.

ಶಿವಮೊಗ್ಗ ಲಯನ್ಸ್: 17.4 ಓವರ್‌ಗಳಲ್ಲಿ 121 (ರೋಹನ್ ಕದಂ 0, ನಿಹಾಲ್ 15, ರೋಹನ್ ನವೀನ್ 23, ಕೆ. ರೋಹಿತ್ 25, ಅಭಿನವ್ 0,ಶ್ರೇಯಸ್ ಗೋಪಾಲ್ 16, ಪ್ರಣವ್ 19, ಅಭಿಲಾಷ್ 21ಕ್ಕೆ2, ವೈಶಾಕ್ 9ಕ್ಕೆ2, ಹಾರ್ದಿಕ್ ರಾಜ್ 27ಕ್ಕೆ3).
ಗುಲ್ಬರ್ಗಾ ಮಿಸ್ಟಿಕ್ಸ್: 12.4 ಓವರ್‌ಗಳಲ್ಲಿ 1 ವಿಕೆಟ್‌ಗೆ 126 (ಎಲ್‌ಆರ್ ಚೇತನ್ 58*, ಆದರ್ಶ ಪ್ರಜ್ವಲ್ 37, ಮ್ಯಾಕ್ನೀಲ್ 27*, ಶ್ರೇಯಸ್ ಗೋಪಾಲ್ 40ಕ್ಕೆ1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net