

ಬುಡಾಪೆಸ್ಟ್: ಐದು ಬಾರಿಯ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್ ಬರೋಬ್ಬರಿ 15 ವರ್ಷಗಳ ಬಳಿಕ ಫಿಡೆ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ ಪಟ್ಟವನ್ನು ಕಳೆದುಕೊಳ್ಳುವ ಭೀತಿ ಎದುರಿಸಿದ್ದಾರೆ.
ಟೋಟಲ್ ಚೆಸ್ ವಿಶ್ವ ಚಾಂಪಿಯನ್ಷಿಪ್ ಟೂರ್ ಪೈಲಟ್ ಟೂರ್ನಿಯ 3ನೇ ದಿನ ಕ್ಲಾಸಿಕಲ್ ಪಂದ್ಯದಲ್ಲಿ ಅಮೇರ್ನಿಯಾದ ಹೈಕ್ ಮಾರ್ಟಿರೋಸ್ಯಾನ್ ವಿರುದ್ಧ ಆಘಾತಕಾರಿ ಸೋಲು ಕಂಡಿರುವುದು ಇದಕ್ಕೆ ಕಾರಣವಾಗಿದೆ. ಇದಕ್ಕೆ ಮುನ್ನ 5 ಡ್ರಾ ಕಂಡಿದ್ದ ಅವರು 15.8 ಅಂಕ ಕಳೆದುಕೊಂಡಿದ್ದು, ಲೈವ್ ರೇಟಿಂಗ್ಸ್ನಲ್ಲಿ 2,807.2 ಅಂಕಕ್ಕೆ ಕುಸಿದಿದ್ದಾರೆ.
ಭರ್ಜರಿ ಫಾರ್ಮ್ನಲ್ಲಿರುವ ಅಮೆರಿಕದ ಫ್ಯ್ಯಾಬಿಯಾನೊ ಕರುವಾನಾ (2,800) ಕೇವಲ 7.2 ಅಂಕಗಳ ಹಿನ್ನಡೆಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 35 ವರ್ಷದ ಕಾರ್ಲ್ಸೆನ್ 2011ರ ಜುಲೈನಿಂದಲೂ ವಿಶ್ವ ನಂ. 1 ಪಟ್ಟದಲ್ಲಿದ್ದಾರೆ.