

ನವದೆಹಲಿ: ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಐಪಿಎಲ್‌ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಹುದ್ದೆ ತೊರೆಯಲಿದ್ದಾರೆ ಎನ್ನಲಾಗಿದೆ.
ಮುಂಬರುವ ಐಪಿಎಲ್ ಆವೃತ್ತಿಗೆ ಹಲವು ತಂಡಗಳು ಈಗಾಗಲೆ ತರಬೇತಿ ಸಿಬ್ಬಂದಿಯ ಬದಲಾವಣೆ ಜತೆಗೆ ಮುಖ್ಯ ಕೋಚ್‌ಗಳ ಬದಲಾಯಿಸುತ್ತಿದ್ದು, ಇತ್ತೀಚೆಗೆ ಆಂಡಿ ಪ್ಲೆಂಚರ್ ಬದಲಿಗೆ ಆಸ್ಟ್ರೇಲಿಯಾ ಜಸ್ಟಿನ್ ಲ್ಯಾಂಗರ್ ಅವರನ್ನು ಮುಖ್ಯ ಕೋಚ್ ಆಗಿ ಲಖನೌ ಪ್ರಾಂಚೈಸಿ ನೇಮಕ ಮಾಡಿತ್ತು. ಬಳಿಕ ಟೀಮ್ ಇಂಡಿಯಾ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಅವರನ್ನು ಕಾರ್ಯತಂತ್ರದ ಸಲಹೆಗಾರನಾಗಿ ನೇಮಕ ಮಾಡಿಕೊಂಡಿದೆ.
ಆಂಡಿ ್ಲವರ್ ಲಖನೌ ತಂಡದಿಂದ ಹೊರಗುಳಿದ ಬಳಿಕ ಗೌತಮ್ ಗಂಭೀರ್ ಸಹ ತಂಡ ತೊರೆಯಲಿದ್ದು,ಕೋಲ್ಕತ ನೈಟ್ ರೈಡರ್ಸ್ ತಂಡಕ್ಕೆ ಮುಖ್ಯ ಕೋಚ್ ಆಗಿ ಸೇರ್ಪಡೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿತ್ತು.
ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಪರ್ದಾಪಣೆ ಮಾಡಿದ ಬಳಿಕ 2021ರ ಹರಾಜಿನಲ್ಲಿ ಗಂಭೀರ್ ಅವರನ್ನು ಕೆಕೆಆರ್ ್ರಾಂಚೈಸಿ ಖರೀದಿಸಿತ್ತು. 4 ಆವೃತ್ತಿಗಳಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಿದ್ದ ಗಂಭೀರ್, 2021 ಹಾಗೂ 2014ರಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 2011 ಏಕದಿನ ವಿಶ್ವಕಪ್ ೈನಲ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಗಂಭೀರ್, 2018ರಲ್ಲಿ ಐಪಿಎಲ್‌ಗೆ ನಿವೃತ್ತಿ ೋಷಿಸಿದರು. ಪ್ರಸ್ತುತ ಯುಎಸ್ ಮಾಸ್ಟರ್ಸ್ ಟಿ10 ಲೀಗ್‌ನಲ್ಲಿ ನ್ಯೂ ಜೆರ್ಸಿ ಟ್ರೈಟಾನ್ಸ್ ಪರ ಆಡಲಿದ್ದಾರೆ.