ಐಪಿಎಲ್‌ನ ಹೊಸ ತಂಡ ಲಖನೌಗೆ ಕ್ರಿಕೆಟ್ ಪ್ರೇಮಿಗಳೇ ನೆಚ್ಚಿನ ಹೆಸರು ಸೂಚಿಸುವ ಅವಕಾಶ!

ipl lacknow web
Published on

ನವದೆಹಲಿ: ಐಪಿಎಲ್‌ಗೆ ಇತ್ತೀಚೆಗೆ ಹೊಸದಾಗಿ ಸೇರ್ಪಡೆಯಾಗಿರುವ ಲಖನೌ ತಂಡದ ಹೆಸರು ಏನಿರಬಹುದು ಎಂಬ ಕುತೂಹಲ ಈಗಾಗಲೆ ಸಾಕಷ್ಟು ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿದೆ. ಈ ಕುತೂಹಲಕ್ಕೆ ಇದೀಗ ಲಖನೌ ತಂಡ ವಿಶೇಷ ಟ್ವಿಸ್ಟ್ ನೀಡಿದೆ. ಇದರನ್ವಯ, ಲಖನೌ ತಂಡಕ್ಕೆ ಸೂಕ್ತವಾದ ಹೆಸರನ್ನು ಸೂಚಿಸುವ ಅವಕಾಶವನ್ನು ಅಭಿಮಾನಿಗಳಿಗೇ ನೀಡಲಾಗಿದೆ!

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡವೊಂದಕ್ಕೆ ಅಭಿಮಾನಿಗಳೇ ಹೆಸರು ನೀಡುವ ವಿಶೇಷ ಸಂದರ್ಭ ಇದಾಗಿರಲಿದೆ. ಅಭಿಮಾನಿಗಳು ನೀಡಿದ ಹೆಸರುಗಳಿಂದ ಅಂತಿಮವಾಗಿ ಆಯ್ಕೆಯಾದ ಹೆಸರನ್ನು ಯಾವಾಗ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿಲ್ಲ.

ಉತ್ತರ ಪ್ರದೇಶದ ಲಖನೌ ತಂಡದ ಅಧಿಕೃತ ಹೆಸರು ಘೋಷಣೆಯಾಗುವುದಕ್ಕೆ ಮುನ್ನವೇ ಈಗಾಗಲೆ ಗೌತಮ್ ಗಂಭೀರ್‌ರನ್ನು ಮೆಂಟರ್ ಮತ್ತು ಜಿಂಬಾಬ್ವೆಯ ಆಂಡಿ ್ಲವರ್‌ರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಕನ್ನಡಿಗ ಕೆಎಲ್ ರಾಹುಲ್ ಲಖನೌ ತಂಡದ ನಾಯಕರಾಗಲಿದ್ದಾರೆ ಎಂದು ಈಗಾಗಲೆ ವರದಿಯಾಗಿದೆ.

ಲಖನೌ ತಂಡದ ಅಧಿಕೃತ ಖಾತೆ ಟ್ವಿಟರ್‌ನಲ್ಲಿ ಆರಂಭಗೊಂಡ ಬೆನ್ನಲ್ಲೇ 30 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಪಡೆದುಕೊಂಡಿದೆ. ಉದ್ಯಮಿ ಸಂಜೀವ್ ಗೋಯೆಂಕಾ ಒಡೆತನದ ಎಸ್‌ಪಿಜಿ ಗ್ರೂಪ್ ಕಳೆದ ಅಕ್ಟೋಬರ್‌ನಲ್ಲಿ ದಾಖಲೆಯ 7,090 ಕೋಟಿ ರೂ. ಬಿಡ್ ಸಲ್ಲಿಸಿ ತಂಡವನ್ನು ಗೆದ್ದಿತ್ತು.

ನವಾಬ್ಸ್ ಆ್ ಲಖನೌ, ಲಖನೌ ನವಾಬ್ಸ್, ಲಖನೌ ಸ್ಟೀಲರ್ಸ್‌, ಲಖನೌ ಫೈಟರ್ಸ್‌, ಲಖನೌ ಪ್ಯಾಟ್ರಿಯಾಟ್ಸ್, ಲಖನೌ ಲ್ಯಾನ್ಸರ್ಸ್‌, ಲಖನೌ ಲಯನ್ಸ್, ಲಖನೌ ವಾರಿಯರ್ಸ್‌, ಲಖನೌ ಬ್ಲಾಸ್ಟರ್ಸ್‌ ಯುಪಿ ಇಲೆವೆನ್, ಲಖನೌ ಕಿಂಗ್ಸ್ ಮುಂತಾದ ಹೆಸರುಗಳನ್ನು ಕೆಲ ಅಭಿಮಾನಿಗಳು ಈಗಾಗಲೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net