ಐಪಿಎಲ್​ನಲ್ಲಿ ಮರಳಿ ಕಣಕ್ಕಿಳಿಯಲು ಫಿಟ್​ ಆದ ಮಿಂಚಿನ ವೇಗಿ ಮಯಾಂಕ್​ ಯಾದವ್!

web mayank
Published on

ನವದೆಹಲಿ: ಐಪಿಎಲ್​ ಇತಿಹಾಸದ ಅತಿವೇಗದ ಎಸೆತ ಎಸೆದ ದಾಖಲೆ ಹೊಂದಿರುವ ಲಖನೌ ಸೂಪರ್​ಜೈಂಟ್ಸ್​ ತಂಡದ ಮಿಂಚಿನ ವೇಗಿ ಮಯಾಂಕ್​ ಯಾದವ್​ ಸಂಪೂರ್ಣ ಫಿಟ್​ ಆಗಿದ್ದಾರೆ ಎಂದು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರ (ಸಿಒಇ) ಗ್ರೀನ್​ ಸಿಗ್ನಲ್​ ನೀಡಿದೆ. ಇದರಿಂದ ಮಯಾಂಕ್​ ಹಾಲಿ ಐಪಿಎಲ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದು, ಏಪ್ರಿಲ್​ 19ರಂದು ರಾಜಸ್ಥಾನ ವಿರುದ್ಧ ಜೈಪುರದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅವರು ಮೊದಲ ಬಾರಿ ಆಡುವ ನಿರೀಕ್ಷೆ ಇದೆ.

ಮಯಾಂಕ್​ ಬೆನ್ನು ಮತ್ತು ಕಾಲ್ಬೆರಳು ಗಾಯದಿಂದ ಚೇತರಿಕೆ ಹೊಂದಿದ್ದಾರೆ. 22 ವರ್ಷದ ಮಯಾಂಕ್​ ಸೇರ್ಪಡೆಯಿಂದ ಲಖನೌ ಬೌಲಿಂಗ್​ ವಿಭಾಗ ಹೆಚ್ಚಿನ ಬಲ ಪಡೆದುಕೊಳ್ಳಲಿದೆ. ಮಯಾಂಕ್​ ಕಳೆದ ವರ್ಷ ಗಂಟೆಗೆ 157 ಕಿಲೋಮೀಟರ್​ ವೇಗದ ಚೆಂಡೆಸೆದು ದಾಖಲೆ ಬರೆದಿದ್ದರು. ಐಪಿಎಲ್​ನಲ್ಲಿ ಆಡಿದ 4 ಪಂದ್ಯಗಳಲ್ಲಿ 7 ವಿಕೆಟ್​ ಕಬಳಿಸಿರುವ ಅವರು, 2ರಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಕಳೆದ ವರ್ಷ ಭಾರತ ಪರವೂ 3 ಟಿ20 ಪಂದ್ಯ ಆಡಿ 4 ವಿಕೆಟ್​ ಕಬಳಿಸಿದ್ದರು. ಲಖನೌ 11 ಕೋಟಿ ರೂ.ಗೆ ಮಯಾಂಕ್​ರನ್ನು ರಿಟೇನ್​ ಮಾಡಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net