

ಬ್ಲೋಮ ಫಾಂಟೇನ್: ಉಯೋನ್ಮುಖ ಬ್ಯಾಟರ್ ಆದರ್ಶ್ ಸಿಂಗ್ (76 ರನ್, 96 ಎಸೆತ, 6 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ಹಾಗೂ ಸೌಮಿ ಪಾಂಡೆ (24ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ 19 ವಯೋಮಿತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 84 ರನ್ಗಳಿಂದ ಗೆದ್ದು ಶುಭಾರಂಭ ಕಂಡಿದೆ.
ಮಂಗೌಂಗ್ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ, ಆರಂಭಿಕ ಆಘಾತದ ನಡುವೆಯೂ, ಆದರ್ಶ್ ಸಿಂಗ್ & ನಾಯಕ ಉದಯ್ ಸಹರಾನ್ (64 ರನ್, 94 ಎಸೆತ, 4 ಬೌಂಡರಿ) ಜೋಡಿ 3ನೇ ವಿಕೆಟ್ಗೆ ನಡೆಸಿದ 116 ರನ್ಗಳ ಜತೆಯಾಟದ ಬಲದಿಂದ 7 ವಿಕೆಟ್ಗೆ 251 ರನ್ಗಳ ಸ್ಫರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ಸೌಮಿ ಪಾಂಡೆ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ, 45.5 ಓವರ್ಗಳಲ್ಲಿ 167 ರನ್ಗಳಿಗೆ ಸರ್ವಪತನ ಕಂಡಿತು.
ಭಾರತ: 7 ವಿಕೆಟ್ಗೆ 251 (ಆದರ್ಶ್ ಸಿಂಗ್ 76, ಅರ್ಶೀನ್ 7, ಉದಯ್ 64, ಪ್ರಿಯಾಂಶು 23, ಅವಿನಾಶ್ 23, ಸಚಿನ್ 26, ಮರ್ೂ 43ಕ್ಕೆ 5, ರಿಜ್ವಾನ್ 23ಕ್ಕೆ 1). ಬಾಂಗ್ಲಾದೇಶ: 45.5 ಓವರ್ಗಳಲ್ಲಿ 167 (ಅಶಿಕುರ್ 14, ಜಿಶಾನ್ 14,ಅರಿುಲ್ 41, ಮೊಹಮದ್ ಶಿಹಾಬ್ 54, ಶೇಕ್ ೇವೆಜ್ 15, ಸೌಮಿ ಪಾಂಡೆ 24ಕ್ಕೆ 4,ಮುಶೀರ್ ಖಾನ್ 35ಕ್ಕೆ 2). ಪಂದ್ಯಶ್ರೇಷ್ಠ: ಆದರ್ಶ್ ಸಿಂಗ್.