ಬಾಂಗ್ಲಾಗೆ ಐತಿಹಾಸಿಕ ಟೆಸ್ಟ್ ಗೆಲುವು: ಮಾಜಿ ವಿಶ್ವ ಟೆಸ್ಟ್ ಚಾಂಪಿಯನ್ನರಿಗೆ ಮುಖಭಂಗ

New-Project-10
Published on

ಸಿಲ್ಹೆಟ್: ತೈಜುಲ್ ಇಸ್ಲಾಂ (75ಕ್ಕೆ6) ಮಾರಕ ಸ್ಪಿನ್ ದಾಳಿಯ ನೆರವಿನಿಂದ ಆತಿಥೇಯ ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾಜಿ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ತಂಡಕ್ಕೆ 150 ರನ್‌ಗಳಿಂದ ಆಘಾತಕಾರಿ ಸೋಲುಣಿಸಿದೆ. ತವರಿನಲ್ಲಿ ಮೊದಲ ಬಾರಿಗೆ ಕಿವೀಸ್ ತಂಡವನ್ನು ಮಣಿಸಿದ ನಜ್ಮೂಲ್ ಹೊಸೈನ್ ಶಾಂಟೋ ಪಡೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಬುಧವಾರ ಆರಂಭವಾಗಲಿದೆ.

332 ರನ್ ಸವಾಲಿಗೆ ಪ್ರತಿಯಾಗಿ ಅಂತಿಮ ದಿನವಾದ ಶನಿವಾರ 7 ವಿಕೆಟ್‌ಗೆ 117 ರನ್‌ಗಳಿಂದ ದಿನದಾಟ ಮುಂದುವರಿಸಿದ ಕಿವೀಸ್, ಭೋಜನ ವಿರಾಮಕ್ಕೂ ಮುನ್ನವೇ 71.1 ಓವರ್‌ಗಳಲ್ಲಿ 181 ರನ್‌ಗಳಿಗೆ ಸರ್ವಪತನ ಕಂಡಿತು. ಬಾಂಗ್ಲಾದೇಶ: 310 ಮತ್ತು 338. ನ್ಯೂಜಿಲೆಂಡ್: 317 ಮತ್ತು 71.1 ಓವರ್‌ಗಳಲ್ಲಿ 181 (ಡೆರಿಲ್ 58, ಇಶ್ ಸೋಧಿ 22, ಸೌಥಿ 34, ತೈಜುಲ್ 75ಕ್ಕೆ6).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net