ಸೂಪರ್-8 ಹಂತಕ್ಕೆ ಲಗ್ಗೆಯಿಟ್ಟ ಆಫ್ಘನ್: ಕಿವೀಸ್‌ಗೆ ಆಘಾತ

New-Project-1-2
Published on

ತರೌಬ: ಎಡಗೈ ವೇಗಿ ಫಜಲ್ಹೂಕ್ ಫಾರೂಖಿ (16ಕ್ಕೆ3) ಬಿಗಿ ಬೌಲಿಂಗ್ ಹಾಗೂ ಗುಲ್ಬದಿನ್ ನೈಬ್ (49*ರನ್, 36 ಎಸೆತ, 4 ಬೌಂಡರಿ, 2 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಅಫ್ಘಾನಿಸ್ತಾನ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಸೂಪರ್-8 ಹಂತಕ್ಕೆ ಪ್ರವೇಶಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಅ್ಘಾನಿಸ್ತಾನ ತಂಡ ದುರ್ಬಲ ಪಪುವಾ ನ್ಯೂಗಿನಿ ಎದುರು 7 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಈ ಲಿತಾಂಶದೊಂದಿಗೆ ಸಿ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ಮರಳಿದ ರಶೀದ್ ಖಾನ್ ಪಡೆ ಗ್ರೂಪ್‌ನ 2ನೇ ತಂಡವಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದೆ.

ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಪಪುವಾ ನ್ಯೂಗಿನಿ, ಹೊಸ ಚೆಂಡಿನಲ್ಲಿ ಜಲ್ಹೂಕ್ ಾರೂಖಿ ಹಾಗೂ ನವೀನ್ ಉಲ್ ಹಕ್ (4ಕ್ಕೆ 2) ದಾಳಿಗೆ ನಲುಗಿ 19.5 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್ ಆಯಿತು. ಇದರಲ್ಲಿ 25 ರನ್‌ಗಳು ಇತರ ರೂಪದಲ್ಲಿ ದೊರಕಿವೆ. ಪ್ರತಿಯಾಗಿ ಆರಂಭಿಕ ಆಘಾತ ಕಂಡ ಅ್ಘಾನಿಸ್ತಾನ, ಗುಲ್ಬದಿನ್ ನೈಬ್ ಆಸರೆಯ ಬಲದಿಂದ 15.1 ಓವರ್‌ಗಳಲ್ಲಿ 3 ವಿಕೆಟ್‌ಗೆ 101 ರನ್‌ಗಳಿಸಿ ಗೆಲುವಿನ ಸಂಭ್ರಮ ಕಂಡಿತು.

ಪಪುವಾ ನ್ಯೂಗಿನಿ: 19.5 ಓವರ್‌ಗಳಲ್ಲಿ 95 (ಟೋನಿ 11, ಅಸಾದ್ 3, ಚಾಡ್ ಸೊಪರ್ 9, ಕಿಪ್ಲಿನ್ ಡೊರಿಗಾ 27, ಅಲಿ ನಾವೊ 13, ಾರೂಖಿ 16ಕ್ಕೆ 3, ನವೀನ್ 4ಕ್ಕೆ 2, ನೂರ್ ಅಹ್ಮದ್ 14ಕ್ಕೆ 1).

ಅಫ್ಘಾನಿಸ್ತಾನ: 15.1 ಓವರ್‌ಗಳಲ್ಲಿ 3 ವಿಕೆಟ್‌ಗೆ 101 (ಗುರ್ಬಜ್ 11, ಇಬ್ರಾಹಿಂ 0, ಗುಲ್ಬದಿನ್ 49*, ಅಜ್ಮತ್‌ಉಲ್ಲಾ 13, ನಬೀ 16*, ಸೆಮೊ ಕಾಮಿಯಾ 16ಕ್ಕೆ 1, ನಾರ್ಮನ್ ವನುವಾ 18ಕ್ಕೆ 1). ಪಂದ್ಯಶ್ರೇಷ್ಠ: ಫಜಲ್ಹೂಕ್ ಫಾರೂಖಿ.

9. 2024ರ ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ಬಾರಿ ತಂಡಗಳು 100 ಅದಕ್ಕಿಂಯ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿವೆ. 2014 ಹಾಗೂ 2021ರಲ್ಲಿ ತಲಾ 8 ಬಾರಿ ದೃಷ್ಟಾಂತ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net