ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಭಾರತ

New-Project-1-4
Published on

ಹುಲುನ್‌ಬುಯಿರ್ (ಚೀನಾ): ಅನುಭವಿ ಆಟಗಾರರ ಗೈರಿನಲ್ಲಿಯೂ ಪ್ಯಾರಿಸ್ ಒಲಿಂಪಿಕ್ಸ್‌ನ ಯಶಸ್ವಿ ಓಟವನ್ನು ಮುಂದುವರಿಸಿರುವ ಹಾಲಿ ಚಾಂಪಿಯನ್ ಭಾರತ ಹ್ಯಾಟ್ರಿಕ್ ಗೆಲುವಿನ ಹಂಬಲದಲ್ಲಿದೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಬುಧವಾರ ಹಾಲಿ ರನ್ನರ್ ಅಪ್ ಮಲೇಷ್ಯಾ ತಂಡ ವಿರುದ್ಧ ಕಣಕ್ಕಿಳಿಯಲಿದ್ದು, ಅಜೇಯ ಓಟ ವಿಸ್ತರಿಸುವ ನಿರೀಕ್ಷೆಯಲ್ಲಿದೆ.

ಆರಂಭಿಕ ಎರಡು ಪಂದ್ಯದಲ್ಲಿ ಜಯ ಸಾಧಿಸಿ 6 ಅಂಕ ಕಲೆಹಾಕಿರುವ ಹರ್ಮಾನ್‌ಪ್ರೀತ್ ಸಿಂಗ್ ಪಡೆ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದೆ. ಒಲಿಂಪಿಕ್‌ನಲ್ಲಿ ಫೀಲ್ಡ್ ಗೋಲು ದಾಖಲಿಸಲು ಪ್ರಯಾಸಪಟ್ಟಿದ ಭಾರತ, ಹಾಲಿ ಟೂರ್ನಿಯಲ್ಲಿ ಸಿಡಿಸಿರುವ ಎಂಟು ಗೋಲುಗಳ ಪೈಕಿ 7 ಫೀಲ್ಡ್ ಗೋಲುಗಳಾಗಿವೆ. ಯುವ ಸ್ಟ್ರೈಕರ್ ಸುಖ್‌ಜೀತಗ್ ಸಿಂಗ್ ಮೂರು, ಅಭಿಷೇಕ್ ಮತ್ತು ಉತ್ತಮ್ ಸಿಂಗ್ ತಲಾ ಎರಡು ಗೋಲು ಸಿಡಿಸಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಫಾರ್ವರ್ಡ್‌ನ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡದ್ದಾರೆ. ಇದು ನಾಯಕ ಹರ್ಮಾನ್‌ಪ್ರೀತ್ ಸಿಂಗ್ ಒತ್ತಡವನ್ನು ಕಡಿಮೆ ಮಾಡಿದೆ ಈಗಾಗಲೆ ಟೂರ್ನಿಯಲ್ಲಿ 4 ಬಾರಿ ಚಾಂಪಿಯನ್ ಎನಿಸಿರುವ ಭಾರತ 5ನೇ ಬಾರಿ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡ ಎನಿಸಿದೆ. ಮುಂಬರುವ ಒಲಿಂಪಿಕ್ಸ್ ಅರ್ಹತೆಯಲ್ಲಿ ಈ ಟೂರ್ನಿಯ ಪ್ರದರ್ಶನವೂ ಪ್ರಮುಖ ಭಾಗವಾಗಿದ್ದು, ಉತ್ತಮ ಆರಂಭ ಕಂಡಿರುವ ಭಾರತ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಬೇಕಿದೆ.

ಅನುಭವಿ ಪಿಆರ್ ಶ್ರೀಜೇಶ್ ನಿವೃತ್ತಿಯ ಬಳಿಕ ಭಾರತದ ಗೋಲು ಕೀಪರ್ ಆಗಿರುವ ಕ್ರಿಷನ್ ಬಹದ್ದೂರ್ ಪಾಠಕ್, ಉತ್ತಮ ಆರಂಭ ಕಂಡಿದ್ದು ಟೂರ್ನಿಯಲ್ಲಿ ಇದುವರೆಗೆ 1 ಗೋಲು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಇನ್ನು ಮಲೇಷ್ಯಾ ತಂಡ ಆಡಿರುವ 2 ಪಂದ್ಯಗಳಲ್ಲಿ ಒಂದು ಸೋಲು, ಒಂದು ಡ್ರಾದೊಂದಿಗೆ 5ನೇ ಸ್ಥಾನದಲ್ಲಿದೆ. ಸೆಮಿೈನಲ್ 16ರಂದು ನಡೆಯಲಿದ್ದು, ೈನಲ್ 17ಕ್ಕೆ ನಿಗದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net