

ರಾಜ್ಕೋಟ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ 2&1 ರಿಂದ ಮುನ್ನಡೆ ಸಾಧಿಸಿರುವ ಭಾರತ ತಂಡಕ್ಕೆ 4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಗುಡ್ನ್ಯೂಸ್ ಸಿಕ್ಕಿದೆ. ೆ. 23ರಂದು ರಾಂಚಿಯಲ್ಲಿ ಆರಂಭವಾಗಲಿರುವ ಪಂದ್ಯಕ್ಕೆ ಬ್ಯಾಟರ್, ಕನ್ನಡಿಗ ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ ಮರಳುವ ಸಾಧ್ಯತೆಗಳಿವೆ. ಉಪನಾಯಕ, ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ನಿರೀೆ ಇದೆ.
ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡ ಕಾರಣ 2ನೇ ಟೆಸ್ಟ್ನಿಂದ ಹೊರಗುಳಿದಿದ್ದ ರಾಹುಲ್, ಪುನಶ್ಚೇತನಕ್ಕಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್ಸಿಎ)ಆಗಮಿಸಿದ್ದರು. ಅಂತಿಮ ಮೂರು ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ರಾಹುಲ್, ಬಲತೊಡೆ ಸ್ನಾಯುವಿನ ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನಲೆ ಮುನ್ನೆಚ್ಚರಿಕೆಯಾಗಿ ರಾಜ್ಕೋಟ್ ಟೆಸ್ಟ್ನಿಂದಲೂ ಹೊರಗುಳಿದರು.
ಈಗ ಬಹುತೇಕ ಫಿಟ್ ಆಗಿರುವ ಕೆಎಲ್ ರಾಹುಲ್ 11ರ ಬಳಗಕ್ಕೆ ಮರಳಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಮಂಗಳವಾರ ಟೀಮ್ ಇಂಡಿಯಾ ರಾಂಚಿಗೆ ಪ್ರಯಾಣಿಸಲಿದ್ದು, ಕೆಎಲ್ ರಾಹುಲ್ ಸಹ ತಂಡ ಸೇರಿಕೊಳ್ಳುವ ನಿರೀೆ ಇದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗೈರಿನ ನಡುವೆಯೂ ಭರ್ಜರಿ ಪ್ರದರ್ಶನ ನೀಡಿರುವ ಯುವ ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಹಾಜರಿ ಇನ್ನಷ್ಟು ಬಲ ತುಂಬಲಿದೆ. ರಾಂಚಿಯಲ್ಲಿ ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿರುವ ಭಾರತ ತಂಡಕ್ಕೆ ಬಾಜ್ಬಾಲ್ ಕಾರ್ಯತಂತ್ರವನ್ನು ಎದುರಿಸಲು ಹೆಚ್ಚಿನ ಶಕ್ತಿ ಸಿಗಲಿದೆ. ರಾಹುಲ್ ಆಡುವ ಬಳಗಕ್ಕೆ ಸೇರ್ಪಡೆಯಾದರೆ ಮಧ್ಯಪ್ರದೇಶದ ರಜತ್ ಪಾಟೀದಾರ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಕೊಹ್ಲಿ, ರಾಹುಲ್ ಅನುಪಸ್ಥಿತಿಯಲ್ಲಿ ಅವಕಾಶ ಪಡೆದ ಪಾಟೀದಾರ್ ನಿರೀೆ ತಕ್ಕ ಬ್ಯಾಟಿಂಗ್ ನಡೆಸಿಲ್ಲ. 4ನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ೆಬ್ರವರಿ 23ರಿಂದ 27ರವರೆಗೆ ನಡೆಯಲಿದ್ದರೆ, 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 7ರಿಂದ 11ರವರೆಗೆ ಧರ್ಮಶಾಲಾದಲ್ಲಿ ನಿಗದಿಯಾಗಿದೆ.