ಧೋನಿಗೂ ಶೋಯಿಬ್​ ಮಲಿಕ್​ಗೂ ಸಾಕಷ್ಟು ಸಾಮ್ಯತೆಯಿದೆ ಎಂದ ಸಾನಿಯಾ ಮಿರ್ಜಾ..!

sania dhoni and malik for web
Published on

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ ನಿವೃತ್ತಿ ಘೋಷಿಸಿ ಹಲವು ದಿನಗಳೇ ಕಳೆದಿವೆ. ಆದರೂ ಎಲ್ಲೆಡೆ ಧೋನಿ ಕುರಿತು ಚರ್ಚೆ ಮಾತ್ರ ನಿಂತಿಲ್ಲ. ಕೇವಲ ಕ್ರಿಕೆಟಿಗರಷ್ಟೇ ಅಲ್ಲದೆ, ಇತರ ವಲಯಗಳಿಂದಲೂ ಧೋನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಭಾರತದ ಸ್ಟಾರ್​ ಟೆನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ ಮಾತ್ರ ಧೋನಿ ಅವರಿಗೂ ತಮ್ಮ ಪತಿ ಪಾಕ್​ ಕ್ರಿಕೆಟಿಗ ಶೋಯಿಬ್​ ಮಲಿಕ್​ಗೂ ಸಾಕಷ್ಟು ಸಾಮ್ಯತೆಯಿದೆ ಎಂದು ಹೇಳಿಕೊಂಡಿದ್ದಾರೆ.

ಧೋನಿ-ಶೋಯಿಬ್​ ನಡುವೆ ಹೆಚ್ಚು ವ್ಯತ್ಯಾಸ ಕಾಣುವುದಿಲ್ಲ ಎಂದು ಕ್ರೀಡಾ ವೆಬ್​ಸೈಟ್​ವೊಂದಕ್ಕೆ ಸಾನಿಯಾ ಹೇಳಿದ್ದಾರೆ. ವ್ಯಕ್ತಿಗತವಾಗಿ, ವೃತ್ತಿಪರವಾಗಿ ಸಾಕಷ್ಟು ಸಾಮ್ಯತೆಯಿದ್ದು, ಇಬ್ಬರೂ ಕೂಲ್​ಗೆ ಹೆಸರು ವಾಸಿ. ಹಲವು ವಿಷಯಗಳಲ್ಲಿ ಒಂದೇ ತಕ್ಕಡಿಯಲ್ಲಿ ನಿಲ್ಲಬಲ್ಲರು ಎಂದು ಸಾನಿಯಾ ಮಿರ್ಜಾ ಹೇಳಿಕೊಂಡಿದ್ದಾರೆ. ಆಗಸ್ಟ್​ 15 ರಂದು ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು.

ಭಾರತ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ ಅವರಿಗೆ ದೊಡ್ಡ ಮಟ್ಟದ ಬಿಳ್ಕೊಡುಗೆ ನೀಡಬೇಕು. ನಾನು ಗೌರವಿಸುವಂಥ ಕ್ರಿಕೆಟಿಗ, ಅವರ ವ್ಯಕ್ತಿತ್ವವೇ ಕ್ಯಾಪ್ಟಲ್​ ಕೂಲ್​ ಎಂದು ಹೆಸರು ತಂದುಕೊಟ್ಟಿದೆ. ಭಾರತೀಯ ಕ್ರಿಕೆಟ್​ ಕಂಡ ಅದ್ಭುತ ಪ್ರತಿಭೆ ಧೋನಿ ಎಂದು ಸಾನಿಯಾ ಮಿರ್ಜಾ ತಿಳಿಸಿದ್ದಾರೆ. ಸಾನಿಯಾ ಪತಿ ಶೋಯಿಬ್​ ಮಲಿಕ್​, ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಟಿ20 ಸರಣಿಯಲ್ಲಿ ಆಡುವ ಸಲುವಾಗಿ ಪಾಕಿಸ್ತಾನ ತಂಡದೊಂದಿಗೆ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net