

ವಡೋದರ: ನಾಯಕಿ ಮೆಗ್ ಲ್ಯಾನಿಂಗ್ (69 ರನ್, 49 ಎಸೆತ, 12 ಬೌಂಡರಿ) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲುೃಪಿಎಲ್) ಮೂರನೇ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ ಎದುರು 7 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಡೆಲ್ಲಿ ಜಯದ ಹಳಿಗೆ ಮರಳಿದೆ.
ಕೋಟಂಬಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಯುಪಿ ವಾರಿಯರ್ಸ್ ಆರಂಭಿಕ ಬ್ಯಾಟುಗಾರ್ತಿ ಕಿರಣ್ ನವ್‌ಗಿರೆ (51 ರನ್, 27 ಎಸೆತ, 6 ಬೌಂಡರಿ, 3 ಸಿಕ್ಸರ್)ಒದಗಿಸಿದ ಬಿರುಸಿನ ಆರಂಭ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಶ್ವೇತಾ ಸೆಹ್ರಾವತ್ (37 ರನ್, 33 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಚಿನ್ಲೆ ಹೆನ್ರಿ (33* ರನ್, 15 ಎಸೆತ, 3 ಬೌಂಡರಿ, 3 ಸಿಕ್ಸರ್) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗೆ 166 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಮೆಗ್ ಲ್ಯಾನಿಂಗ್ ಹಾಗೂ ಶೆಾಲಿ ವರ್ಮ (26) ಉತ್ತಮ ಆರಂಭದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.5 ಓವರ್‌ಗಳಲ್ಲಿ 3 ವಿಕೆಟ್‌ಗೆ 167 ರನ್‌ಗಳಿಸಿ ಟೂರ್ನಿಯ 2ನೇ ಗೆಲುವು ಕಂಡಿತು.
ಯುಪಿ ವಾರಿಯರ್ಸ್: 7 ವಿಕೆಟ್‌ಗೆ 166 (ಕಿರಣ್ 51, ವೃಂದಾ 16, ದೀಪ್ತಿ 7, ಮೆಕ್‌ಗ್ರಾತ್ 1, ಹ್ಯಾರಿಸ್ 12, ಶ್ವೇತಾ 37, ಚಿನ್ಲೆ ಹೆನ್ರಿ 33*, ಸುದರ್‌ಲ್ಯಾಂಡ್ 26ಕ್ಕೆ 2, ಮಿನ್ನು ಮಣಿ 16ಕ್ಕೆ 1).
ಡೆಲ್ಲಿ ಕ್ಯಾಪಿಟಲ್ಸ್: 19.5 ಓವರ್‌ಗಳಲ್ಲಿ 4 ವಿಕೆಟ್‌ಗೆ 167 (ಲ್ಯಾನಿಂಗ್ 69, ಶೆಾಲಿ 26, ಜೆಮೀಮಾ 0, ಸುದರ್‌ಲ್ಯಾಂಡ್ 41*, ಮಾರಿಜಾನ್ನೆ 29*, ಹ್ಯಾರಿಸ್ 11ಕ್ಕೆ 1, ದೀಪ್ತಿ ಶರ್ಮ 17ಕ್ಕೆ 1).
ಚೇಸಿಂಗ್‌ಗೆ ಲ್ಯಾನಿಂಗ್ ಬಲ
ಹಿಂದಿನ 2 ಪಂದ್ಯಗಳಲ್ಲಿ ರನ್‌ಬರ ಎದುರಿಸಿದ್ದ ಮೆಗ್ ಲ್ಯಾನಿಂಗ್ ಯುಪಿ ಎದುರು ಲಯಕ್ಕೆ ಮರಳಿದರು. ಮೊದಲ ವಿಕೆಟ್‌ಗೆ ಶೆಾಲಿ ವರ್ಮ ಜತೆಯಾಗಿ 41 ಎಸೆತಗಳಲ್ಲಿ 65 ರನ್‌ಗಳ ಬಿರುಸಿನ ಆರಂಭ ಒದಗಿಸಿದರು. ಲ್ಯಾನಿಂಗ್ ಬಿರುಸಿನಾಟಕ್ಕೆ ಶೆಾಲಿ ಬೆಂಬಲ ಒದಗಿಸಿದರು. ಜೆಮೀಮಾ ರೋಡ್ರಿಗಸ್(0) ನಿರಾಸೆ ಮೂಡಿಸಿದರು. ಆಗ ಮೂರನೇ ವಿಕೆಟ್‌ಗೆ ಅನ್ನಾಬೆಲ್ ಸುದರ್‌ಲ್ಯಾಂಡ್ (41*) ಜತೆಯಾಗಿ 34 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಲ್ಯಾನಿಂಗ್ ಚೇಸಿಂಗ್ ಸುಲಭಗೊಳಿಸಿದರು. ಲ್ಯಾನಿಂಗ್ ಹಾಗೂ ಸುದರ್‌ಲ್ಯಾಂಡ್ 43 ಎಸೆತಗಳಲ್ಲಿ 49 ರನ್‌ಗಳಿಸಿದರು. ನಂತರ ಸುದರ್‌ಲ್ಯಾಂಡ್ ಹಾಗೂ ಮಾರಿಜಾನ್ನೆ ಕಾಪ್ (29*) 4ನೇ ವಿಕೆಟ್‌ಗೆ 31 ಎಸೆತಗಳಲ್ಲಿ
48 ರನ್‌ಗಳಿಸಿದರೆ, ತಾಹ್ಲಿಯಾ ಮೆಕ್‌ಗ್ರಾತ್ ಎಸೆದ ಕೊನೇ ಓವರ್‌ನಲ್ಲಿ 11 ಬೇಕಿದ್ದಾಗ ಸತತ ಬೌಂಡರಿ ಸಿಡಿಸಿದ ಸುದರ್‌ಲ್ಯಾಂಡ್ ಡೆಲ್ಲಿಗೆ ಗೆಲುವು ತಂದರು.