ಇಂದು ಲಂಕಾ-ಪಾಕ್ ಸೆಮಿಫೈನಲ್: ಜಯದ ಒತ್ತಡದಲ್ಲಿ ಉಭಯ ತಂಡಗಳು

New-Project-3-2
Published on

ಕೊಲಂಬೊ: ಟೀಮ್ ಇಂಡಿಯಾ ವಿರುದ್ಧದ ಹೀನಾಯ ಸೋಲಿನ ಬಳಿಕ ಗಾಯದ ಸಮಸ್ಯೆಯಿಂದ ಪ್ರಮುಖ ಆಟಗಾರರ ಅಲಭ್ಯತೆಯ ಸಂಕಷ್ಟ ಎದುರಿಸುತ್ತಿರುವ ಜಂಟಿ-ಆತಿಥೇಯ ಪಾಕಿಸ್ತಾನ ಏಷ್ಯಾಕಪ್ ಏಕದಿನ ಟೂರ್ನಿಯ ಸೂಪರ್-4ನ ತನ್ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ಸವಾಲು ಎದುರಿಸಲಿದೆ. ಗುರವಾರ ನಡೆಯುವ ಈ ಮುಖಾಮುಖಿ ಎರಡು ತಂಡಗಳ ಪಾಲಿಗೆ ಸೆಮಿೈನಲ್ ಪಂದ್ಯ ಎನಿಸಿದೆ. ಇದೇ ವೇಳೆ ಉಭಯ ತಂಡಗಳು ಮಳೆ ಅಡಚಣೆಯ ಸವಾಲನ್ನೂ ಎದುರಿಸಬೇಕಾಗಿದೆ.

ಉಭಯ ತಂಡಗಳು ಸೂಪರ್-4ನಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ತಲಾ ಒಂದು ಸೋಲು, ಗೆಲುವಿನೊಂದಿಗೆ 2 ಅಂಕ ಕಲೆಹಾಕಿವೆ.ವಿಶ್ವಕಪ್ ಅರ್ಹತಾ ಟೂರ್ನಿಯಿಂದ ಸತತ 13 ಗೆಲುವು ದಾಖಲಿಸಿದ್ದ ಲಂಕನ್ನರ ಓಟಕ್ಕೆ ಬ್ರೇಕ್ ಬಿದಿದ್ದು -0.200 ರನ್ ರೇಟ್ ನೊಂದಿಗೆ 2ನೇ ಸ್ಥಾನದಲ್ಲಿದೆ, ಪಾಕಿಸ್ತಾನ ಇಷ್ಟೇ ಅಂಕಗಳೊಂದಿಗೆ -1.892 ಕಳಪೆ ರನ್‌ರೇಟ್‌ನೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಈ ಪಂದ್ಯದ ವಿಜೇತ ತಂಡ ೈನಲ್‌ಗೆ ಅರ್ಹತೆ ಸಂಪಾದಿಸಲಿದೆ. ಒಂದು ವೇಳೆ ಪಂದ್ಯ ಮಳೆಯಿಂದ ರದ್ದುಗೊಂಡು 2 ತಂಡಗಳಿಗೆ ಅಂಕ ಹಂಚಿಕೆಯಾದರೆ ರನ್ ರೇಟ್ ಲೆಕ್ಕಾಚಾರದಲ್ಲಿ ಪಾಕಿಸ್ತಾನ ಸವಾಲು ಅಂತ್ಯಗೊಳ್ಳಲಿದೆ. ಭಾರತ ಈಗಾಗಲೆ ೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ.

ಕೆಲ ಪ್ರಮುಖ ಆಟಗಾರರ ಗೈರಿನಲ್ಲೂ ಲಂಕಾ ತಂಡ ಟೂರ್ನಿಯಲ್ಲಿ ಸರ್ವಾಂಗೀಣ ನಿರ್ವಹಣೆ ತೋರುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಯುವ ಆಟಗಾರರರಿಂದ ಕೂಡಿರುವ ಲಂಕಾ ಬೌಲಿಂಗ್ ವಿಭಾಗ ಹಿಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಈಗ ಅದೇ ಪ್ರದರ್ಶನ ಮರುಕಳಿಸುವ ತವಕದಲ್ಲಿದೆ. ಆರಂಭಿಕರಿಂದ ಉತ್ತಮ ಆರಂಭದ ನಿರೀಕ್ಷೆಯಲ್ಲಿರುವ ಲಂಕಾಗೆ ಕಸುನ್ ರಜಿತ ದುಬಾರಿಯಾಗಿದ್ದಾರೆ. ಮಹತ್ವದ ಪಂದ್ಯದಲ್ಲಿ ತವರಿನ ಅಂಗಣದ ಲಾಭ ಪಡೆಯುವ ನಿರೀಕ್ಷೆಯಲ್ಲಿರುವ ಲಂಕಾ ಸ್ಪಿನ್ನರ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಹಿಂದಿನ ಪಂದ್ಯದ ಆಡುವ ಬಳಗದಿಂದ ಐದು ಬದಲಾವಣೆಯೊಂದಿಗೆ ಪಾಕಿಸ್ತಾನ ಕಣಕ್ಕಿಳಿಯಲಿದ್ದು,ಆರಂಭಿಕರಾದ ಖರ್ ಜಮಾನ್, ಇಮಾಮ್ ಉಲ್ ಹಕ್ ಹಾಗೂ ನಾಯಕ ಬಾಬರ್ ಅಜಮ್ ಅವರನ್ನೇ ನೆಚ್ಚಿಕೊಂಡಿದೆ. ಬ್ಯಾಟಿಂಗ್ ವೈಲ್ಯ ಅನುಭವಿಸಿರುವುದು ತಂಡದ ಪ್ರಮುಖ ಹಿನ್ನಡೆಯಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಮೊಹಮದ್ ರಿಜ್ವಾನ್, ಅಘಾ ಸಲ್ಮಾನ್ ನಿಂದ ಹೆಚ್ಚಿನ ರನ್ ಕೊಡುಗೆ ಬೇಕಿದೆ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಇಫ್ತಿಕರ್ ಮಂಕಾಗಿದ್ದಾರೆ. ಬೌಲಿಂಗ್‌ನಲ್ಲಿ ಪ್ರಮುಖ ಸ್ಟಾರ್ ಬೌಲರ್‌ಗಳು ನಿರ್ಣಾಯಕ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಮೂಡಿಸಿದ್ದು ಪಾಕ್ ಚಿಂತೆಗೀಡು ಮಾಡಿದೆ.

ನಸೀಮ್ ಷಾ ಔಟ್

ಭಾರತದ ವಿರುದ್ಧ ಪಂದ್ಯದಲ್ಲಿ ಬಲ ಭುಜದ ಗಾಯಕ್ಕೆ ತುತ್ತಾಗಿದ್ದ ಪಾಕ್ ವೇಗಿ ನಸೀಮ್ ಷಾ ಟೂರ್ನಿಯಿಂದಲೆ ಹೊರಬಿದ್ದಿದ್ದಾರೆ. ಬದಲಿ ಆಟಗಾರನಾಗಿ ಜಮಾನ್ ಖಾನ್ ತಂಡ ಸೇರ್ಪಡೆಯಾಗಿದ್ದಾರೆ. ಭಾರತ ವಿರುದ್ಧ ಸೋತಿರುವುದು ನಿರಾಸೆ ಮೂಡಿಸಿದ್ದು,ತಂಡವು ಸೋಲಿನಿಂದ ಬಲವಾಗಿ ಮರಳುತ್ತದೆ ಎಂದು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net