

ಪ್ಯಾರಿಸ್: ಗುಂಪಿನ ತನ್ನ ಮೊದಲ ಪಂದ್ಯದ ಲಿತಾಂಶವನ್ನು ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಿಂದ ತೆಗೆದ ಬಳಿಕ ಎರಡನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಲಕ್ಷ್ಯ ಸೇನ್ ನೇರಗೇಮ್‌ಗಳ ಗೆಲುವಿನೊಂದಿಗೆ ಹೊಸ ಆರಂಭ ಕಂಡಿದ್ದಾರೆ. 22 ವರ್ಷದ ಲಕ್ಷ್ಯಸೇನ್ ಸೋಮವಾರ ನಡೆದ ಎಲ್ ಗುಂಪಿನ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 21-19,21-14 ರಿಂದ ವಿಶ್ವ ನಂ. 52 ಬೆಲ್ಜಿಯಂ ಜೂಲಿಯನ್ ಕಾರ‌್ರಗಿ ಅವರನ್ನು ಮಣಿಸಿದರು.
ಚೊಚ್ಚಲ ಬಾರಿ ಕೂಟದಲ್ಲಿ ಆಡುತ್ತಿರುವ ಲಕ್ಷ್ಯ ಸೇನ್ 43 ನಿಮಿಷಗಳಲ್ಲಿ ಪ್ರಾಬಲ್ಯಮೆರೆದರು. ಇದರೊಂದಿಗೆ ಬೆಲ್ಜಿಯಂ ಆಟಗಾರನ ವಿರುದ್ಧ ಅಜೇಯ ದಾಖಲೆಯನ್ನು 3-0ಗೆ ವಿಸ್ತರಿಸಿದರು. 2022 ಕಾಮನ್ವೆಲ್ತ್ ಚಾಂಪಿಯನ್ ಲಕ್ಷ್ಯ ಸೇನ್ ಅಂತಿಮ ಪಂದ್ಯದಲ್ಲಿ ಬುಧವಾರ ವಿಶ್ವ ನಂ.3 ಇಂಡೋನೇಷ್ಯಾದ ಜೋನಾಥನ್ ಕ್ರಿಸ್ಟಿ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯದ ವಿಜೇತರು ಗುಂಪಿನ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ೈನಲ್‌ಗೇರಿದರೆ, ಎರಡನೇ ಸ್ಥಾನಿ ಪ್ರಿ ಕ್ವಾರ್ಟರ್‌ೈನಲ್ ಆಡಲಿದ್ದಾರೆ.
ಸೇನ್ ಪಂದ್ಯದಲ್ಲಿ ಬದಲಾವಣೆ: ಲಕ್ಷ್ಯ ಸೇನ್ 2ನೇ ಪಂದ್ಯದ ಸೋಮವಾರ ಇಂಡೋನೇಷ್ಯಾದ ಜೋನಾಥನ್ ಕ್ರಿಸ್ಟಿ ಎದುರು ನಿಗದಿಯಾಗಿತ್ತು. ಆದರೆ ಗ್ವಾಟೆಮಾಲಾದ ಕೆವಿನ್ ಕಾರ್ಡನ್ ಎಡ ಮೊಣಕೈ ಗಾಯದಿಂದ ಪ್ಯಾರಿಸ್ ಗೇಮ್ಸ್‌ನಿಂದ ಹಿಂದೆ ಸರಿದ ಕಾರಣ ಲಕ್ಷ್ಯ ಸೇನ್- ಕ್ರಿಸ್ಟಿ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಯಿತು. ಜತೆಗೆ ಗುಂಪಿನ ಇತರ ಪಂದ್ಯಗಳ ವೇಳಾಪಟ್ಟಿಯನ್ನು ಮರುನಿಗದಿಗೊಳಿಸಲಾಯಿತು. ಜತೆಗೆ ಲಕ್ಷ್ಯಸೇನ್ ಅವರ ಗುಂಪಿನ ಮೊದಲ ಪಂದ್ಯದ ಲಿತಾಂಶವನ್ನು ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಿಂದ ತೆಗೆದು ಹಾಕಲಾಗಿದ್ದು, ಗುಂಪಿನ ಮುಂದಿನ 2 ಪಂದ್ಯಗಳ ಲಿತಾಂಶದ ಆಧಾರದಲ್ಲಿ ಕ್ವಾರ್ಟರ್‌ೈನಲ್ ಅರ್ಹತೆ ನಿರ್ಧರಿತವಾಗಲಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ತಿಳಿಸಿದೆ.
ಟೋಕಿಯೋ ಗೇಮ್ಸ್ ಸೆಮಿೈನಲಿಸ್ಟ್ ಕಾರ್ಡನ್ ಹಿಂದೆಸರಿದ ಕಾರಣ ಲಿತಾಂಶವನ್ನು ಗಣನೆಗೆ ತೆಗೆದುಕೊಳ್ಳದಿರಲು ಪ್ರಮುಖ ಕಾರಣ. ಕೆವಿನ್ ಕಾರ್ಡನ್ ವಿರುದ್ಧ ಲಕ್ಷ್ಯಸೇನ್ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದರು. ಇದರ ನಡುವೆಯೂ 22 ವರ್ಷದ ಲಕ್ಷ್ಯಸೇನ್ ಮಾತ್ರ ಗುಂಪಿನಲ್ಲಿ 3 ಪಂದ್ಯ ಆಡಲಿರುವ ಆಟಗಾರ ಎನಿಸಿದ್ದಾರೆ. ಗುಂಪಿನ ಇತರ ಸ್ಪರ್ಧಿಗಳಾದ ಕ್ರಿಸ್ಟಿ, ಬೆಲ್ಜಿಯಂನ ಜೂಲಿಯನ್ ಕಾರ‌್ರಗಿ ಇನ್ನೂ ಕಾರ್ಡನ್ ಎದುರು ಆಡಿರಲಿಲ್ಲ. ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ, ಎಲ್ ಗುಂಪಿನಲ್ಲಿ ಕಾರ್ಡನ್ ಒಳಗೊಂಡಿರುವ ಎಲ್ಲ ಪಂದ್ಯಗಳ ಫಲಿತಾಂಶ ಹಾಗೂ ಇನ್ನು ಆಡಬೇಕಾದ ಪಂದ್ಯದ ಫಲಿತಾಂಶಗಳನ್ನು ಅಳಿಸಲಾಗಿದೆ ಎಂದು ಕೂಟದ ಜಾಗತಿಕ ಆಡಳಿತ ಮಂಡಳಿ ತಿಳಿಸಿದೆ.
ಅಶ್ವಿನಿ-ತನಿಷಾಗೆ ಸತತ 2ನೆ ಸೋಲು: ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ಟೊ ಸತತ ಎರಡನೇ ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ಗುಂಪು ಹಂತದಲ್ಲೇ ನಿರ್ಗಮನ ಕಂಡಿದ್ದಾರೆ. ಸಿ ಗುಂಪಿನ 2ನೇ ಪಂದ್ಯದಲ್ಲಿ ಕನ್ನಡತಿ ಅಶ್ವಿನಿ-ತನಿಷಾ 11-21, 12-21 ನೇರ ಗೇಮ್‌ಗಳಿಂದ ವಿಶ್ವ ನಂ.4 ಜಪಾನ್‌ನ ನಮಿ ಮತ್ಸುಯಾಮಾ- ಚಿಹಾರು ಶಿದಾ ವಿರುದ್ಧ ಪರಾಭವಗೊಂಡರು. ವಿಶ್ವ ನಂ. 19 ಅಶ್ವಿನಿ ತನಿಷಾ ಜೋಡಿ ಪ್ರಸ್ತುತ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದ್ದು, ಜಪಾನ್ ಮತ್ತು ದಕ್ಷಿಣ ಕೊರಿಯ ಜೋಡಿ ಮೊದಲೆರಡು ಸ್ಥಾನದಲ್ಲಿವೆ. ಪ್ರತಿ ಗುಂಪಿನ ಅಗ್ರ ಎರಡು ಜೋಡಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯಲಿವೆ. ಅಶ್ವಿನಿ-ತನಿಷಾ ಜೋಡಿ ಗುಂಪಿನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸೆಟ್ಯಾನಾ ಮಪಾಸಾ- ಏಂಜೆಲಾ ಯು ವಿರುದ್ಧ ಕಣಕ್ಕಿಳಿಯಲಿದೆ.