ಈ ಮೂವರಲ್ಲಿ ಆತ್ಮವಿಶ್ವಾಸ ಕಾಣಿಸಲಿಲ್ಲ! ಸ್ಟಾರ್​ ಬ್ಯಾಟರ್​ಗಳ ವಿರುದ್ಧ ಸಂಜಯ್​ ಮಂಜ್ರೇಕರ್ ಅಸಮಾಧಾನ | Lack Confidence

lack confidence
Published on

ಪುಣೆ: ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಕಡೆಗೂ ವಿಫಲವಾದ ಭಾರತ, ಎರಡು ಪಂದ್ಯದಲ್ಲಿಯೂ ಹೀನಾಯ ಸೋಲು ಕಂಡಿತು. ಮೊದಲ ಟೆಸ್ಟ್​ ಮ್ಯಾಚ್​ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಟೀಮ್ ಇಂಡಿಯಾ, ದ್ವಿತೀಯ ಪಂದ್ಯದಲ್ಲಿ ಉತ್ತಮವಾಗಿ ಗೆಲುವು ಸಾಧಿಸಲಿದೆ ಎಂದೇ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದ್ರೆ, ಆ ಎಲ್ಲಾ ಲೆಕ್ಕಾಚಾರ, ಭರವಸೆಗಳು ಇದೀಗ ತಲೆಕೆಳಗಾಗಿದ್ದು ನೋಡುಗರಲ್ಲಿ ಅತೀವ ಬೇಸರ ಮೂಡಿಸಿದೆ. ಒಂದೆಡೆ ತಂಡದ ಸ್ಪಿನ್ನರ್​ ಹಾಗೂ ವೇಗಿಗಳು ಕಿವೀಸ್​ ಪಡೆಯ ವಿಕೆಟ್​ ಕಬಳಿಸುವಲ್ಲಿ ತಮ್ಮ ಕೈಚಳಕ ತೋರಿದ್ದೇ ಆದರೂ ಸ್ಟಾರ್​ ಬ್ಯಾಟರ್​ಗಳು ಅಬ್ಬರಿಸುವಲ್ಲಿ ಮುಗ್ಗರಿಸಿದ್ದು ಅಚ್ಚರಿಯುಂಟು ಮಾಡಿದೆ (Lack Confidence).

ಸದ್ಯ ಈ ಸಾಲಿನಲ್ಲಿ ಮೊದಲಿಗಿರುವುದು ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮ ಮತ್ತು 'ರನ್​ ಮಷಿನ್' ವಿರಾಟ್​ ಕೊಹ್ಲಿ. ಈ ಇಬ್ಬರು ಬ್ಯಾಟರ್​ಗಳ ಮೇಲೆ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಎಂದಿನಂತೆ ಭಾರೀ ನಿರೀಕ್ಷೆಯಿತ್ತು. ಆದರೆ, ಅದೆಲ್ಲವೂ ಹುಸಿಯಾಯಿತು. ಇಬ್ಬರು ದಿಗ್ಗಜ ಆಟಗಾರರ ಕಳಪೆ ಪ್ರದರ್ಶನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿ ಮಾತನಾಡಿರುವ ಭಾರತದ ಮಾಜಿ ಹಿರಿಯ ಆಟಗಾರ ಸಂಜಯ್​ ಮಂಜ್ರೇಕರ್​, "ಕೀವಿಸ್​ ಪಡೆಯ ಸ್ಪಿನ್ನರ್​​ಗಳ ವಿರುದ್ಧ ಅಬ್ಬರಿಸುವಲ್ಲಿ ವಿರಾಟ್​, ರೋಹಿತ್​ ಮತ್ತು ಶುಭಮನ್ ಗಿಲ್​ ಎಡವಿದ್ದಾರೆ" ಎಂದು ನೇರವಾಗಿ ಹೇಳಿದರು.

"ಶುಭಮನ್ ಗಿಲ್​, ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮ ಈ ಮೂವರು ಸ್ಟಾರ್​ ಬ್ಯಾಟರ್​ಗಳು ಕಿವೀಸ್​ ನೀಡಿದ್ದ ಗುರಿಯನ್ನು ಕಲೆಹಾಕುವಲ್ಲಿ ಯಶಸ್ವಿಯಾಗಬಹುದಿತ್ತು. ಆದರೆ, ಇವರಲ್ಲಿನ ಆತ್ಮವಿಶ್ವಾಸ ಕುಸಿದ ಕಾರಣವೇ ನ್ಯೂಜಿಲೆಂಡ್​ ಸ್ಪಿನ್ನರ್​ಗಳಿ​ಗೆ ಆಡಲು ಹೆಣಗಾಡಿದರು. ಟರ್ನಿಂಗ್ ಟ್ರ್ಯಾಕ್‌ಗಳಲ್ಲಿ ಸ್ಪಿನ್ನರ್‌ಗಳನ್ನು ಹೇಗೆ ಆಡಬೇಕೆಂದು ಗಿಲ್‌ಗೆ ತಿಳಿದಿಲ್ಲ. ಬಾಲ್​ ಹೇಗೆ ತಿರುಗಬಹುದು ಎಂಬ ಸುಳಿವೇ ಆತನಿಗಿಲ್ಲ. ಇವರನ್ನು ಹೊರತುಪಡಿಸಿದರೆ ವಿರಾಟ್ ಮತ್ತು ರೋಹಿತ್ ಕೂಡ ಪ್ರಭಾವಿಯಾಗಿರಲಿಲ್ಲ. ಸ್ಪಿನ್ ವಿರುದ್ಧ ಆತ್ಮವಿಶ್ವಾಸದ ಕೊರತೆಯಿದ್ದರೆ, ಭಾರೀ ಬೆಲೆಯನ್ನು ತೆರಬೇಕಾಗುತ್ತದೆ ಎಂಬುದಕ್ಕೆ ಈ ಸೋಲೇ ಸಾಕ್ಷಿ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net