ಕಿಂಗ್ಸ್ ಇಲೆವೆನ್ ಪಂಜಾಬ್ ಸುಂದರಿಯರಿಗೆ ಅಭಿಮಾನಿಗಳು ಫಿದಾ!

kings xi punjab
Published on

ಬೆಂಗಳೂರು: ಭಾರತೀಯ ಕ್ರಿಕೆಟ್‌ನಲ್ಲಿ ಫೇಸ್‌ಆ್ಯಪ್ ಮೂಲಕ ಜೆಂಡರ್ ಸ್ವಾಪ್ ಮಾಡುವುದು ಈಗಾಗಲೆ ಟ್ರೆಂಡಿಂಗ್‌ನಲ್ಲಿದೆ. ಟೀಮ್ ಇಂಡಿಯಾದ ಹಾಲಿ ಮತ್ತು ಮಾಜಿ ಆಟಗಾರರನ್ನು ಹೆಣ್ಣಾಗಿ ಪರಿವರ್ತಿಸಿದ ಚಿತ್ರಗಳನ್ನು ನೋಡಿ ಕ್ರಿಕೆಟ್ ಪ್ರೇಮಿಗಳು ಈಗಾಗಲೆ ಖುಷಿಪಟ್ಟಿದ್ದಾರೆ. ಗುರುವಾರವಷ್ಟೇ ಚೆನ್ನೈ ಸೂಪರ್‌ಕಿಂಗ್ಸ್ ತಂಡ ತನ್ನ ಆಟಗಾರರು ಮತ್ತು ಸಿಬ್ಬಂದಿ ವರ್ಗದವರವ ಜೆಂಡರ್ ಸ್ವಾಪ್ ಚಿತ್ರಗಳನ್ನು ಅಭಿಮಾನಿಗಳ ಜತೆಗೆ ಹಂಚಿಕೊಂಡಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ಶುಕ್ರವಾರ ಅಭಿಮಾನಿಗಳಿಗೆ ಇಂಥದ್ದೇ ಚಿತ್ರದ ಮೂಲಕ ಅಚ್ಚರಿ ನೀಡಿದೆ.

ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ‘ಪಂಜಾಬ್ ದೆ ಪಟೋಲೆ’ (ಪಂಜಾಬ್‌ನ ಸುಂದರಿಯರು) ಎಂಬ ಅಡಿಬರಹದೊಂದಿಗೆ ಆಟಗಾರರು ಹೆಣ್ಣಾಗಿ ಪರಿವರ್ತನೆಗೊಂಡಿರುವ ಚಿತ್ರಗಳನ್ನು ಪ್ರಕಟಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಈ ಆಟಗಾರರನ್ನು ಗುರುತಿಸಿ ಎಂದು ಅಭಿಮಾನಿಗಳಿಗೆ ಸವಾಲನ್ನೂ ಎಸೆದಿದೆ.

ಕೆಎಲ್ ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಗ್ಲೆನ್ ಮ್ಯಾಕ್ಸ್‌ವೆಲ್ ಸಹಿತ ತಂಡದ ಆಟಗಾರರು ಹೆಣ್ಣಾಗಿ ಸೌಂದರ್ಯದಿಂದ ಕಂಗೊಳಿಸುತ್ತಿರುವುದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಕಮೆಂಟ್‌ಗಳು ಬಂದಿವೆ. ಕೆಲವರು ಸರಿಯಾಗಿ ಆಟಗಾರ/ಆಟಗಾರ್ತಿಯನ್ನು ಗುರುತಿಸುವಲ್ಲಿ ಸಲರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net