

ಗುವಾಹಟಿ: ಯುವ ಬ್ಯಾಟರ್ ಕೆವಿ ಅನೀಶ್ (142*ರನ್, 248 ಎಸೆತ, 10 ಬೌಂಡರಿ, 2 ಸಿಕ್ಸರ್) ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಿಡಿಸಿದ ಚೊಚ್ಚಲ ಶತಕದ ಜತೆಗೆ ಎಡಗೈ ಬ್ಯಾಟರ್ ಅನೀಶ್ವರ್ ಗೌತಮ್ (83 ರನ್, 125 ಎಸೆತ, 9 ಬೌಂಡರಿ, 3 ಸಿಕ್ಸರ್) ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ರೆಡ್ ಬಾಲ್ ಟೂರ್ನಿಯ ತನ್ನ 4ನೇ ಪಂದ್ಯದಲ್ಲಿ ಆತಿಥೇಯ ಅಸ್ಸಾಂ ಎದುರು ಭಾರಿ ಮುನ್ನಡೆಯೊಂದಿಗೆ ಬಿಗಿ ಹಿಡಿತ ಸಾಧಿಸಿದೆ. ಈ ಮೂಲಕ ನಾಕೌಟ್ಗೇರುವ ಅವಕಾಶ ವೃದ್ಧಿಸಿಕೊಳ್ಳುವ ಕನಸಿಗೆ ಬಲ ಸಿಕ್ಕಿದೆ.
ರ್ಬಸಾಪುರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಮಂಗಳವಾರ 2 ವಿಕೆಟ್ಗೆ 180 ರನ್ಗಳಿಂದ ಎರಡನೇ ದಿನದಾಟ ಆರಂಭಿಸಿದ ಕರ್ನಾಟಕ ಮತ್ತೆ 316 ರನ್ ಸೇರಿಸಿತು. ಉತ್ತಮ ಲಯದಲ್ಲಿರುವ ಕೆವಿ ಅನೀಶ್ ಹಾಗೂ ಚಿಕ್ಕಮಗಳೂರಿನ ಅನೀಶ್ವರ್ ಗೌತಮ್ ಜೋಡಿ ಐದನೇ ವಿಕೆಟ್ಗೆ 239 ಎಸೆತಗಳಲ್ಲಿ 148 ರನ್ ಸೇರಿಸಿ ಚಹಾ ವಿರಾಮದ ನಂತರ ಬೇರ್ಪಟ್ಟಿತು. ಕರ್ನಾಟಕ ತಂಡ ದಿನದಂತ್ಯಕ್ಕೆ 117 ಓವರ್ಗಳಲ್ಲಿ 5 ವಿಕೆಟ್ಗೆ 496 ರನ್ ಕಲೆಹಾಕಿದ್ದು, 361 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ. ಶತಕವೀರ ಅನೀಶ್ ಜತೆಗೆ ಹಿಂದಿನ ಪಂದ್ಯದ ಹೀರೋ ಮನ್ವಂತ್ ಕುಮಾರ್ (53* ರನ್, 63 ಎಸೆತ, 5 ಬೌಂಡರಿ, 2 ಸಿಕ್ಸರ್) ಮುರಿಯದ ಆರನೇ ವಿಕೆಟ್ಗೆ 136 ಎಸೆತಗಳಲ್ಲಿ 95 ರನ್ಗಳಿಸಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಬುಧವಾರ ಭೋಜನ ವಿರಾಮಕ್ಕೆ ಕರ್ನಾಟಕ ತಂಡ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವುದರ ಜತೆಗೆ ಉಳಿದ ಒಂದೂವರೆ ದಿನದೊಳಗೆ ಅಸ್ಸಾಂ ತಂಡವನ್ನು ಎರಡನೇ ಇನಿಂಗ್ಸ್ನಲ್ಲಿ ಬೇಗನೇ ಕಟ್ಟಿಹಾಕಿದರೆ, ಇನಿಂಗ್ಸ್ ಗೆಲುವಿನೊಂದಿಗೆ ಬೋನಸ್ ಸಹಿತ 7 ಅಂಕ ಸಂಪಾದಿಸುವ ನಿರೀೆ ಹರಡಿದೆ.
ಅಸ್ಸಾಂ: 48.1 ಓವರ್ಗಳಲ್ಲಿ 135. ಕರ್ನಾಟಕ:117 ಓವರ್ಗಳಲ್ಲಿ 5 ವಿಕೆಟ್ಗೆ 496 (ಮಯಾಂಕ್ ಅಗರ್ವಾಲ್ 72, ಕೆವಿ ಅನೀಶ್ 142*, ಕರುಣ್ ನಾಯರ್ 21, ಅನೀಶ್ವರ್ ಗೌತಮ್ 83, ಮನ್ವಂತ್ ಕುಮಾರ್ 53*, ರೋಶನ್ 126ಕ್ಕೆ 2, ಮೋಹಿತ್ 92ಕ್ಕೆ 1).
ಅನೀಶ್-ಅನೀಶ್ವರ್ ಶತಕದ ಜತೆಯಾಟ
ಬೆಳಗ್ಗೆ ವೈಯಕ್ತಿಕ 53 ರನ್ನಿಂದ ಆಟ ಮುಂದುವರಿಸಿದ ಮಯಾಂಕ್ ಅಗರ್ವಾಲ್ (72) ಬೇಗನೆ ಔಟಾದರು. ಆಗ, ಅನೀಶ್ ಜತೆಗೂಡಿದ ಅನುಭವಿ ಕರುಣ್ ನಾಯರ್ (21) 4ನೇ ವಿಕೆಟ್ಗೆ 70 ಎಸೆತಗಳಲ್ಲಿ 46 ರನ್ ಸೇರಿಸಿ ಔಟಾದರು. ನಂತರ ಅಸ್ಸಾಂ ಬೌಲರ್ಗಳ ಎದುರು ದಿಟ್ಟ ಬ್ಯಾಟಿಂಗ್ ನಡೆಸಿದ ಅನೀಶ್&ಅನೀಶ್ವರ್ ಭೋಜನ ವಿರಾಮದಿಂದ ಚಹಾ ಬ್ರೇಕ್ವರೆಗೂ ವಿಕೆಟ್ ಕಾಯ್ದುಕೊಂಡು ಮುನ್ನಡೆ ಹಿಗ್ಗಿಸಿದರು. ಹಿಂದಿನ ಬಾರಿ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಲು ವಿಲವಾಗುತ್ತಿದ್ದ ಅನೀಶ್ 168 ಎಸೆತಗಳಲ್ಲಿ ಮೂರಂಕಿಯ ಮೈಲಿಗಲ್ಲು ಸ್ಥಾಪಿಸಿದರು. ಇವರಿಬ್ಬರು ರಾಜ್ಯದ ಮುನ್ನಡೆಯನ್ನು 250 ಪ್ಲಸ್ಗೆ ಏರಿಸಿದರು. ಅನೀಶ್ವರ್ ನಿರ್ಗಮನದ ನಂತರ ಅನೀಶ್ಗೆ ಉತ್ತಮ ಬೆಂಬಲ ನೀಡಿದ ಮನ್ವಂತ್ ಕುಮಾರ್ ಮೊತ್ತ ಏರಿಸಲು ನೆರವಾದರು. ಪಂದ್ಯದಲ್ಲಿ ಇದುವರೆಗೆ ಪತನಗೊಂಡಿರುವ 15 ವಿಕೆಟ್ಗಳೂ ಸ್ಪಿನ್ನರ್ಗಳ ಪಾಲಾಗಿದ್ದು, ಬಾಕಿ ಉಳಿದಿರುವ ಎರಡು ದಿನದಾಟದಲ್ಲೂ ಸ್ಪಿನ್ನರ್ಗಳೇ ಪ್ರಾಬಲ್ಯ ಸಾಧಿಸುವ ನಿರೀೆ ಇದೆ.