ಎರಡನೇ ಬಾರಿಗೆ ತಂದೆಯಾದ ಕ್ರಿಕೆಟಿಗ ಕೃನಾಲ್ ಪಾಂಡ್ಯ: ಮಗುವಿನ ಹೆಸರು ರಿವೀಲ್..!

krunal
Published on

ಮುಂಬೈ: ಟೀಮ್ ಇಂಡಿಯಾ ಆಲ್‌ರೌಂಡರ್ ಕೃನಾಲ್​ ಪಾಂಡ್ಯಾ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಪಾಂಡ್ಯಾ ಈಗ ತಂದೆಯಾಗಿದ್ದಾರೆ. ಪತ್ನಿ ಪಂಖುರಿ ಶರ್ಮಾ ಅವರು ಶುಕ್ರವಾರ (ಏಪ್ರಿಲ್​ 26) ರಂದು ತಮ್ಮ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಮಗನ ಚಿತ್ರವನ್ನ ತಮ್ಮ ಟ್ವಿಟರ್ ಮತ್ತು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರೋ ಪಾಂಡ್ಯಾ, ನಮ್ಮ ಮನೆಯಲ್ಲಿ ಗಂಡು ಮಗು ಜನಿಸಿದೆ ಎಂದಷ್ಟೇ ಬರೆದುಕೊಂಡಿದ್ದಾರೆ. ಆದ್ರೆ ತಮ್ಮ ಪುತ್ರನ ಮುಖವನ್ನು ಮಾತ್ರ ಮರೆಮಾಚಿದ್ದಾರೆ.

ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ತೆಗೆಸಿರುವ ಫೋಟೋವನ್ನು ಕೃನಾಲ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಹೆಸರು ವಾಯು ಎಂದು ಸಹ ಪಾಂಡ್ಯ ಹೇಳಿಕೊಂಡಿದ್ದಾರೆ. ಈ ಫೋಟೋ ಕಂಡು ಪಾಂಡ್ಯ ಅಭಿಮಾನಿಗಳೂ ಶುಭ ಹಾರೈಸಿದ್ದಾರೆ.

2022ರ ಜುಲೈನಲ್ಲಿ ಕೃನಾಲ್‌ ಮತ್ತು ಪಂಖುರಿ ದಂಪತಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗುವಿನ ಹೆಸರು ಕವಿರ್‌ ಎಂದು ನಾಮಕರಣ ಮಾಡಿದ್ದರು.

ಸದ್ಯ ಐಪಿಎಲ್‌ ಕಣದಲ್ಲಿರುವ ಕೃನಾಲ್‌ ಪಾಂಡ್ಯ ಅವರು ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರವಾಗಿ ಆಡುತ್ತಿದ್ದಾರೆ. ಏಪ್ರಿಲ್ 23ರಂದು ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಅನ್ನು ಸೋಲಿಸಿದ ತಂಡದ ಭಾಗವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net