

ಚೆನ್ನೈ: ಭಾರತದ ಗ್ರಾಂಡ್ ಮಾಸ್ಟರ್ ಹಾಗೂ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್ ಕೊನೆರು ಹಂಪಿ ನೂತನ ಮಹಿಳೆಯರ ವಿಶ್ವ ಚೆಸ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಚೀನಾದ ಜು ವೆಂಜುನ್ ಅವರನ್ನು ಹಿಮ್ಮೆಟ್ಟಿಸಿ ಹಂಪಿ ಈ ಸಾಧನೆ ಮಾಡಿದ್ದಾರೆ. ಚೀನಾದ ಯಿಫಾನ್ ಹೌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಹಂಪಿ ಅಂಕ ಗಳಿಕೆ 2586ಕ್ಕೇರಿದ್ದರೆ, ಯಿಫಾನ್ 2658 ಅಂಕಗಳಿಂದ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಮತ್ತೋರ್ವ ಗ್ರಾಂಡ್ವಾಸ್ಟರ್ ಡಿ. ದ್ರೋಣವಲ್ಲಿ 9ನೇ ಸ್ಥಾನದಲ್ಲಿದ್ದಾರೆ.
ಮುಕ್ತ ವಿಭಾಗದ ರ್ಯಾಂಕಿಂಗ್ನ ಅಗ್ರ 10ರಲ್ಲಿ ಯಾವುದೇ ಭಾರತೀಯರಿಲ್ಲ. 16ನೇ ಸ್ಥಾನದಲ್ಲಿರುವ ವಿಶ್ವನಾಥನ್ ಆನಂದ್ ಅಗ್ರ ಶ್ರೇಯಾಂಕಿತ ಭಾರತೀಯರಾಗಿದ್ದಾರೆ.