VIDEO: ಐಪಿಎಲ್ ಹಿಂದೆ ಓಡುತ್ತಿದ್ದಾರಂತೆ ಕೊಹ್ಲಿ...!

ipl running_web
Published on

ಬೆಂಗಳೂರು: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಫಿಟ್ನೆಸ್ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಲಾಕ್‌ಡೌನ್ ವೇಳೆ ಮನೆಯಲ್ಲೇ ಲಾಕ್ ಆಗಿದ್ದರೂ ದೈಹಿಕ ಕಸರತ್ತಿನಲ್ಲಿ ತೊಡಗಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲೂ ಸಕ್ರಿಯರಾಗಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅವರ ಸ್ಟೇಟಸ್, ವಿಡಿಯೋ, ಸಂದೇಶಗಳಿಗೆ ಅಭಿಮಾನಿಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಭಾನುವಾರ ದೈಹಿಕ ಕಸರತ್ತಿನಲ್ಲಿ ತೊಡಗಿದ್ದ ವಿಡಿಯೋ ಪ್ರಕಟಿಸಿ, ಕ್ಯಾಪ್ಷನ್ ದಿಸ್,,,ಎಂದು ಕೊಹ್ಲಿ ಪ್ರಕಟಿಸಿದ್ದೇ ತಡ, ಅಭಿಮಾನಿಗಳಿಂದ ಟ್ರೋಲ್‌ಗೆ ಒಳಗಾಗಿದ್ದಾರೆ...

ಕೊಹ್ಲಿ ಸಾರಥ್ಯದ ಆರ್‌ಸಿಬಿ ಇದುವರೆಗೂ ಐಪಿಎಲ್ ಜಯಿಸಲು ಸಾಧ್ಯವಾಗಿಲ್ಲ. ಅದರಿಂದಲೇ ಕೊಹ್ಲಿ ಐಪಿಎಲ್ ಟ್ರೋಫಿ ಹಿಂದೆ ಓಡುತ್ತಿದ್ದಾರೆ ಎಂದು ಕೆಲ ಮಂದಿ ಕಾಲೆಳೆದಿದ್ದರೆ, ಕೊಹ್ಲಿ ಓಡುತ್ತಲೇ ಇದ್ದರೆ, ಆದರೂ ಟ್ರೋಫಿ ಸಿಕ್ಕಿಲ್ಲ ಎಂದಿದ್ದಾರೆ. ಕೆಲಮಂದಿ ಕೊಹ್ಲಿ ನೋಡಿ ಇತರರು ಕಲಿಯಬೇಕಿದೆ ಅಂತಾನೂ ಮೆಚ್ಚುಗೆ ಸೂಚಿಸಿದ್ದಾರೆ.ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಿಕ ದಿನಗಳಿಂದಲೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಭಾಗವಾಗಿದ್ದಾರೆ. ಮೂರು ಬಾರಿ ೈನಲ್ ಪ್ರವೇಶಿಸಿದರೂ ಆರ್‌ಸಿಬಿ ಪ್ರಶಸ್ತಿ ಜಯಿಸುವಲ್ಲಿ ಎಡವಿದೆ. ಇದು ಆರ್‌ಸಿಬಿ ಅಭಿಮಾನಿಗಳಲ್ಲಿ ಬೇಸರವನ್ನು ಮೂಡಿಸಿದೆ. 2016ರಲ್ಲಿ ಆರ್‌ಸಿಬಿ ಕಡೇ ಬಾರಿ ಫೈನಲ್ ಪ್ರವೇಶಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net