ವಿರಾಟ್​ ಕೊಹ್ಲಿಗೆ ಇಂದು 35ನೇ ಜನ್ಮದಿನದ ಸಂಭ್ರಮ; ವಿಶ್ವಕಪ್​ನಲ್ಲಿ ದಾಖಲೆಯ ಶತಕ, ಗೆಲುವಿನ ಗಿಫ್ಟ್​ ನಿರೀಕ್ಷೆ

kohli web
Published on

ಕೋಲ್ಕತ: ಟೀಮ್​ ಇಂಡಿಯಾ ಮಾಜಿ ನಾಯಕ ಹಾಗೂ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿಗೆ ಭಾನುವಾರ 35ನೇ ಜನ್ಮದಿನದ ಸಂಭ್ರಮ. ಇದೇ ದಿನ ಏಕದಿನ ವಿಶ್ವಕಪ್​ನಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಈ ವೇಳೆ ಅವರಿಂದ ದಾಖಲೆಯ 49ನೇ ಏಕದಿನ ಶತಕ ದಾಖಲಾಗುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.

ಕೊಹ್ಲಿ ಈಡನ್​ನಲ್ಲಿ ಶತಕ ಸಿಡಿಸಿದರೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಅವರ 49 ಏಕದಿನ ಶತಕಗಳ ವಿಶ್ವದಾಖಲೆ ಸರಿಗಟ್ಟಲಿದ್ದಾರೆ. ನಾಯಕ ರೋಹಿತ್​ ಶರ್ಮಗೂ ಈಡನ್​ ನೆಚ್ಚಿನ ಮೈದಾನವಾಗಿದ್ದು, ಅವರ ವಿಶ್ವದಾಖಲೆಯ 264 ರನ್​ ಸಿಡಿದಿದ್ದು ಇಲ್ಲೇ ಆಗಿದೆ. ಹೀಗಾಗಿ ಕೊಹ್ಲಿ ರ್ಬತ್​ಡೇಗೆ ಗೆಲುವಿನ ಉಡುಗೊರೆಯ ನಿರೀಕ್ಷೆಯೂ ಹೆಚ್ಚಿದೆ.

ಕೊಹ್ಲಿ ಜನ್ಮದಿನವನ್ನು ವಿಶೇಷವಾಗಿ ಸಂಭ್ರಮಿಸಲು ಯೋಜನೆ ರೂಪಿಸಿದ್ದ ಬಂಗಾಳ ಕ್ರಿಕೆಟ್​ ಸಂಸ್ಥೆ (ಸಿಎಬಿ), ವಿವಿಧ ಕಾರಣಗಳಿಂದ ಕೊನೇಕ್ಷಣದಲ್ಲಿ ಅವೆಲ್ಲವನ್ನೂ ರದ್ದುಗೊಳಿಸಿದೆ. ಕೊಹ್ಲಿ ಕೇಕ್​ ಕಟ್ಟಿಂಗ್​ ಕೂಡ ಡ್ರೆಸ್ಸಿಂಗ್​ ರೂಂನಲ್ಲೇ ಮಾಡಲಿದ್ದಾರೆ. ಕೊಹ್ಲಿ ಮಾಸ್ಕ್​ ಧರಿಸುವ ಯೋಜನೆಗೆ ಭದ್ರತಾ ಕಾರಣಗಳಿಂದಾಗಿ ಬಿಸಿಸಿಐ ಅನುಮತಿ ನೀಡಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net