

ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ 2023ರಲ್ಲಿ 1900 ಕೋಟಿ ರೂಪಾಯಿ ಬ್ರಾ್ಯಂಡ್ ಮೌಲ್ಯದೊಂದಿಗೆ ಭಾರತದ ಅತ್ಯಂತ ಮೌಲ್ಯಯುತ, ಜನಪ್ರಿಯ ಸೆಲೆಬ್ರಿಟಿಯಾಗಿ ಅಗ್ರಸ್ಥಾನವನ್ನು ಮರಳಿ ಪಡೆದಿದ್ದಾರೆ.
2022ರಲ್ಲಿ 1,474 ಕೋಟಿ ರೂ. ಬ್ರಾಂಡ್ ಮೌಲ್ಯ ಹೊಂದಿದ್ದ ಕೊಹ್ಲಿ, ಈ ವರ್ಷದಲ್ಲಿ ಒಟ್ಟಾರೆ ಬ್ರಾಂಡ್ ಮೌಲ್ಯದಲ್ಲಿ ಅಂದಾಜು 29 ಪ್ರತಿಶತದಷ್ಟು ಏರಿಕೆಯನ್ನು ಕಂಡಿದ್ದಾರೆ. 1,692 ಕೋಟಿ ರೂ. ಬ್ರಾಂಡ್ ಮೌಲ್ಯದೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿರುವ ನಟ ರಣವೀರ್ ಸಿಂಗ್ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ ಎಂದು ಕನ್ಸಲ್ಟೆನ್ಸಿ ಸಂಸ್ಥೆ ಕ್ರೋಲ್ ವರದಿ ತಿಳಿಸಿದೆ.
ಕ್ರೋಲ್ನ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ವರದಿ 2023ರ ಪ್ರಕಾರ, ಕೊಹ್ಲಿಯ ಬ್ರಾ್ಯಂಡ್ ಮೌಲ್ಯವು 2020ರಲ್ಲಿ ಕಂಡುಬಂದ 1,982 ಕೋಟಿ ರೂ. ಮಟ್ಟವನ್ನು ತಲುಪಿಲ್ಲ. 58 ವರ್ಷದ ನಟ ಶಾರುಖ್ ಖಾನ್ 2023ರಲ್ಲಿ 1,006 ಕೋಟಿ ರೂ.ಗಳ ಒಟ್ಟು ಬ್ರಾ್ಯಂಡ್ ಮೌಲ್ಯದೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ 930 ಕೋಟಿ ರೂ. ಮೌಲ್ಯದೊಂದಿಗೆ 2022ರಲ್ಲಿನ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ಆಲಿಯಾ ಭಟ್ 842 ಕೋಟಿ ರೂ. ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಮತ್ತು ದೀಪಿಕಾ ಪಡುಕೋಣೆ 800 ಕೋಟಿ ರೂ. ಮೌಲ್ಯದೊಂದಿಗೆ 6ನೇ ಸ್ಥಾನ ತಲುಪಿದ್ದಾರೆ. 2022ರಲ್ಲಿ ದೀಪಿಕಾ ಐದನೇ ಸ್ಥಾನದಲ್ಲಿದ್ದರು.
ನಿವೃತ್ತ ಕ್ರಿಕೆಟಿಗ ಎಂಎಸ್ ಧೋನಿ 799 ಕೋಟಿ ರೂ. ಮೌಲ್ಯದೊಂದಿಗೆ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಮತ್ತೊಬ್ಬ ನಿವೃತ್ತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ 760 ಕೋಟಿ ರೂ. ಬ್ರಾಂಡ್ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಸಲ್ಮಾನ್ ಖಾನ್ 680 ಕೋಟಿ ರೂ. ಮೌಲ್ಯದೊಂದಿಗೆ 2023ರಲ್ಲಿ ಹತ್ತನೇ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಬ್ರಾ್ಯಂಡ್ ಆಗಿದ್ದಾರೆ. ದೇಶದ ಟಾಪ್ 25 ಸೆಲೆಬ್ರಿಟಿ ಬ್ರಾ್ಯಂಡ್ಗಳ ಒಟ್ಟಾರೆ ಮೌಲ್ಯ 2023ರಲ್ಲಿ 15,832 ಕೋಟಿ ರೂ. ಆಗಿದೆ. ಇದು ವರ್ಷದ ಹಿಂದಿನ ಅವಧಿಗಿಂತ ಶೇಕಡ 15.5 ಹೆಚ್ಚಾಗಿದೆ. ಟಾಪ್ 25ರಲ್ಲಿರುವ ಇತರರಲ್ಲಿ, ನಟಿ ಕಿಯಾರಾ ಆಡ್ವಾಣಿ 12ನೇ ಶ್ರೇಯಾಂಕಕ್ಕೆ ಏರಿಕೆ ಕಂಡಿದ್ದಾರೆ. ನಟಿ ಕತ್ರಿನಾ ಕೈಫ್ 25ನೇ ಸ್ಥಾನದಲ್ಲಿದ್ದಾರೆ.
ಎಡು-ಫಿನ್ಟೆಕ್ನಲ್ಲಿ ರೋಹಿತ್ ಹೂಡಿಕೆ: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಂದ ಮಹತ್ವದ ಹೂಡಿಕೆಯನ್ನು ಪಡೆದುಕೊಂಡಿರುವುದಾಗಿ ಎಡು-ಫಿನ್ಟೆಕ್ ಸ್ಟಾರ್ಟಪ್ ಲಿಯೊ1 ಮಂಗಳವಾರ ತಿಳಿಸಿದೆ. ಆದರೆ, ಹೂಡಿಕೆಯ ಮೊತ್ತ ಮತ್ತು ಮೌಲ್ಯಮಾಪನವನ್ನು ಅದು ಬಹಿರಂಗ ಪಡಿಸಿಲ್ಲ. ‘ಕಲಿಕೆಯಲ್ಲಿ ಕ್ರಾಂತಿಯನ್ನುಂಟು ಮಾಡುವ ಮತ್ತು ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಉದ್ದೇಶದಲ್ಲಿ ಲಿಯೊ1 ಅನ್ನು ಬೆಂಬಲಿಸಲು ನಾನು ರೋಮಾಂಚನಗೊಂಡಿದ್ದೇನೆ’ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಕೋಲ್ಕತಾ: ಅಸ್ಸಾಂ ಸಿಟಿಸಿ ಚಹಾವು 1ಕಿಲೋಗ್ರಾಂ 1,506 ರೂ.ಗೆ ಮಾರಾಟ ವಾಗುವುದರೊಂದಿಗೆ ಇದುವರೆಗಿನ ಅತ್ಯಧಿಕ ಹರಾಜು ಬೆಲೆಯನ್ನು ಪಡೆದುಕೊಂಡಿದೆ. ಹರಾಜುದಾರರಾದ ಅಸ್ಸಾಂ ಟೀ ಬ್ರೋಕರ್ಸ್ ಪ್ರೖೆವೇಟ್ ಲಿಮಿಟೆಡ್ನ ನಿರ್ದೇಶಕ ನಿಶೀತ್ ಬಿಜಾವತ್ ಮಾತನಾಡಿ, ‘ಈ ನಿರ್ದಿಷ್ಟ ಮಾರಾಟವು ಜೂನ್ 11ರಂದು ಕೋಲ್ಕತಾದ ಹರಾಜಿನಲ್ಲಿ ನಡೆದಿದೆ. ಹೈದರಾಬಾದ್ನಲ್ಲಿ ನಮ್ಮ ಗ್ರಾಹಕರಾದ ಮಿಹಿರ್ ಗೋಲ್ಡ್ ಪರವಾಗಿ ಇದನ್ನು ಖರೀದಿಸಲಾಗಿದೆ’ ಎಂದು ತಿಳಿಸಿದ್ದಾರೆ.
ನವದೆಹಲಿ: ಜಾಗತಿಕ ರೇಟಿಂಗ್ಸ್ ಸಂಸ್ಥೆಯಾದ ಫಿಚ್ ರೇಟಿಂಗ್ಸ್ ಮಂಗಳವಾರದಂದು ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡ 7.2ಕ್ಕೆ ಏರಿಸಿದೆ. ಮಾರ್ಚ್ನಲ್ಲಿ ಈ ಬೆಳವಣಿಗೆ ದರ ಶೇ.7 ಎಂದು ಫಿಚ್ ಅಂದಾಜಿಸಿತ್ತು. ಗ್ರಾಹಕರ ವೆಚ್ಚದಲ್ಲಿ ಚೇತರಿಕೆ ಮತ್ತು ಹೆಚ್ಚಿದ ಹೂಡಿಕೆ ಕಾರಣದಿಂದಾಗಿ ಈ ಏರಿಕೆಯನ್ನು ಅದು ಮಾಡಿದೆ. 2025-26 ಮತ್ತು 2026-27ರ ಹಣಕಾಸು ವರ್ಷಗಳಿಗೆ, ಫಿಚ್ ಅನುಕ್ರಮವಾಗಿ ಶೇ.6.5 ಮತ್ತು ಶೇ.6.2 ಬೆಳವಣಿಗೆ ದರಗಳನ್ನು ಅಂದಾಜಿಸಿದೆ. ‘ಹಣಕಾಸು ವರ್ಷದ 2024-25ರಲ್ಲಿ ಭಾರತದ ಆರ್ಥಿಕತೆ ಪ್ರಬಲವಾದ 7.2 ಪ್ರತಿಶತದಷ್ಟು ವಿಸ್ತರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ’ ಎಂದು ಫಿಚ್ ತನ್ನ ಜಾಗತಿಕ ಆರ್ಥಿಕ ದೃಷ್ಟಿಕೋನ ವರದಿಯಲ್ಲಿ ಹೇಳಿದೆ. ಫಿಚ್ನ ಅಂದಾಜುಗಳು ಆರ್ಬಿಐ ನಿರೀಕ್ಷಿಗೆ ಅನುಗುಣವಾಗಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆ ಶೇ.7.2ರಷ್ಟು ವಿಸ್ತರಿಸಲಿದೆ ಎಂದು ಆರ್ಬಿಐ ಈ ತಿಂಗಳ ಆರಂಭದಲ್ಲಿ ಅಂದಾಜಿಸಿದೆ. ಕಳೆದ ಹಣಕಾಸು ವರ್ಷದಲ್ಲಿ (2023-24) ಭಾರತದ ಆರ್ಥಿಕತೆ ಶೇ.8.2ರಷ್ಟು ಬೆಳವಣಿಗೆಯಾಗಿದೆ.