ವಿವಾಹದ 4ನೇ ವಾರ್ಷಿಕೋತ್ಸವದಂದು ಕೊಹ್ಲಿಯಿಂದ ಪತ್ನಿಗೆ ವಿಶೇಷ ಸಂದೇಶ

anushka virat web
Published on

ನವದೆಹಲಿ: ಇಟಲಿಯಲ್ಲಿ 2017ರ ಡಿಸೆಂಬರ್ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿಗೆ ಶನಿವಾರ 4ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಪತ್ನಿ ಅನುಷ್ಕಾಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ಕೊಹ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ.

‘ಕಳೆದ 4 ವರ್ಷಗಳಿಂದ ನನ್ನ ಸಿಲ್ಲಿ ಜೋಕ್ಸ್, ಸೋಮಾರಿತನವನ್ನು ಸಹಿಸಿಕೊಂಡಿರುವೆ. ಪ್ರತಿದಿನ ನಾನು ಹೇಗಿರುವೆನೋ ಹಾಗೆ ಸ್ವೀಕರಿಸಿರುವೆ. ನಾನೆಷ್ಟು ಕಿರಿಕಿರಿಗಳನ್ನು ಮಾಡಿದರೂ ಪ್ರೀತಿ ತೋರಿಸಿರುವೆ. ಕಳೆದ 4 ವರ್ಷಗಳು ದೇವರು ನಮಗೆ ನೀಡಿರುವ ಅತ್ಯುತ್ತಮ ಆಶೀರ್ವಾದ. ನಿನ್ನನ್ನು ಮದುವೆಯಾದ ಬಳಿಕ ನನ್ನ ಜೀವನ ಎಲ್ಲ ರೀತಿಯಲ್ಲೂ ಪರಿಪೂರ್ಣವಾಗಿದೆ’ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಜತೆಗೆ ಪುತ್ರಿ ವಾಮಿಕಾ ಜನನದ (ಜನವರಿ 11) ಬಳಿಕ ಇದು ಮೊದಲ ವಿವಾಹ ವಾರ್ಷಿಕೋತ್ಸವ ಆಗಿರುವುದರಿಂದ ಹೆಚ್ಚು ವಿಶೇಷವಾದುದು. ಪುಟ್ಟ ಮುಂಚ್‌ಕಿನ್ (ವಾಮಿಕಾ) ಆಗಮನದಿಂದ ನಮ್ಮ ಜೀವನವೀಗ ಪರಿಪೂರ್ಣವಾಗಿದೆ ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net