ದುಲೀಪ್​ ಟ್ರೋಫಿಯಲ್ಲಿ ಕೊಹ್ಲಿ, ರೋಹಿತ್​, ಬುಮ್ರಾ ಆಡಲ್ಲ; ಗಿಲ್​, ಶ್ರೇಯಸ್​ಗೆ ನಾಯಕತ್ವ

web seniors
Published on

ನವದೆಹಲಿ: ಸೆಪ್ಟೆಂಬರ್​ 5ರಿಂದ ಬೆಂಗಳೂರು ಮತ್ತು ಆಂಧ್ರದ ಅನಂತಪುರದಲ್ಲಿ ನಡೆಯಲಿರುವ 2024-25ರ ದೇಶೀಯ ಕ್ರಿಕೆಟ್​ ಋತುವಿನ ಮೊದಲ ಟೂರ್ನಿಯಾದ ದುಲೀಪ್​ ಟ್ರೋಫಿಗೆ 4 ತಂಡಗಳನ್ನು ಬಿಸಿಸಿಐ ಬುಧವಾರ ಪ್ರಕಟಿಸಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯ ಪೂರ್ವಸಿದ್ಧತೆಗೆ ವೇದಿಕೆಯಾಗಿರುವ ಈ ಟೂರ್ನಿಯಿಂದ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ, ಆರ್​. ಅಶ್ವಿನ್​ರಂಥ ಪ್ರಮುಖ ಆಟಗಾರಿಗೆ ವಿನಾಯಿತಿ ನೀಡಲಾಗಿದೆ. ಶುಭಮಾನ್​ ಗಿಲ್​ಗೆ ಎ ಮತ್ತು ಶ್ರೇಯಸ್​ ಅಯ್ಯರ್​ಗೆ ಡಿ ತಂಡದ ನಾಯಕತ್ವ ನೀಡಲಾಗಿದೆ.

ರಿಷಭ್​ ಪಂತ್​, ಕೆಎಲ್​ ರಾಹುಲ್​, ಯಶಸ್ವಿ ಜೈಸ್ವಾಲ್​, ಅಕ್ಷರ್​ ಪಟೇಲ್​, ಕುಲದೀಪ್​ ಯಾದವ್​, ಇಶಾನ್​ ಕಿಶನ್​, ಟಿ20 ನಾಯಕ ಸೂರ್ಯಕುಮಾರ್​ ಯಾದವ್​ ವಿವಿಧ ತಂಡಗಳಲ್ಲಿ ಯುವ ಆಟಗಾರರೊಂದಿಗೆ ಸ್ಥಾನ ಪಡೆದಿದ್ದಾರೆ. ಅಭಿಮನ್ಯು ಈಶ್ವರನ್​ ಬಿ ಮತ್ತು ಋತುರಾಜ್​ ಗಾಯಕ್ವಾಡ್​ ಸಿ ತಂಡಗಳ ನಾಯಕರಾಗಿ ನೇಮಕಗೊಂಡಿದ್ದಾರೆ. ಐಪಿಎಲ್​ ವೇಳೆ ಗಮನಸೆಳೆದಿದ್ದ ವೇಗಿ ಮಯಾಂಕ್​ ಯಾದವ್​ ಫಿಟ್ನೆಸ್​ ಸಮಸ್ಯೆಯಿಂದ ಸ್ಥಾನ ಪಡೆದಿಲ್ಲ. ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ ಬಿ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಫಿಟ್​ ಆದರಷ್ಟೇ ಆಡಲಿದ್ದಾರೆ.

ಟೂರ್ನಿಯ 2ನೇ ಸುತ್ತಿನ ಪಂದ್ಯಗಳು ಸೆಪ್ಟೆಂಬರ್​ 12ರಿಂದ ನಡೆಯಲಿದ್ದು, ಬಾಂಗ್ಲಾ ವಿರುದ್ಧ ಸೆಪ್ಟೆಂಬರ್​ 19ರಿಂದ ನಡೆಯಲಿರುವ ಟೆಸ್ಟ್​ ಸರಣಿಗೆ ಆಯ್ಕೆಯಾದ ಆಟಗಾರರ ಸ್ಥಾನವನ್ನು ಬದಲಿ ಆಟಗಾರರು ತುಂಬಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಟೀಮ್​ ಎ: ಶುಭಮಾನ್​ ಗಿಲ್​ (ನಾಯಕ), ಮಯಾಂಕ್​ ಅಗವಾರ್ವಲ್​, ರಿಯಾನ್​ ಪರಾಗ್​, ಧ್ರುವ ಜುರೆಲ್​, ಕೆಎಲ್​ ರಾಹುಲ್​, ತಿಲಕ್​ ವರ್ಮ, ಶಿವಂ ದುಬೆ, ತನುಷ್​ ಕೋಟ್ಯಾನ್​, ಕುಲದೀಪ್​ ಯಾದವ್​, ಆಕಾಶ್​ ದೀಪ್​, ಪ್ರಸಿದ್ಧ ಕೃಷ್ಣ, ಖಲೀಲ್​ ಅಹ್ಮದ್​, ಆವೇಶ್​ ಖಾನ್​, ವಿದ್ವತ್​ ಕಾವೇರಪ್ಪ, ಕುಮಾರ್​ ಕುಶಾಗ್ರ, ಶಾಶ್ವತ್​ ರಾವತ್​.

ಟೀಮ್​ ಬಿ: ಅಭಿಮನ್ಯು ಈಶ್ವರನ್​ (ನಾಯಕ), ಯಶಸ್ವಿ ಜೈಸ್ವಾಲ್​, ಸ್ರಾರ್ಜ್​ ಖಾನ್​, ರಿಷಭ್​ ಪಂತ್​, ಮುಶೀರ್​ ಖಾನ್​, ನಿತೀಶ್​ ಕುಮಾರ್​ ರೆಡ್ಡಿ, ವಾಷಿಂಗ್ಟನ್​ ಸುಂದರ್​, ರವೀಂದ್ರ ಜಡೇಜಾ, ಮೊಹಮದ್​ ಸಿರಾಜ್​, ಯಶ್​ ದಯಾಳ್​, ಮುಕೇಶ್​ ಕುಮಾರ್​, ರಾಹುಲ್​ ಚಹರ್​, ಸಾಯಿ ಕಿಶೋರ್​, ಮೋಹಿತ್​ ಅವಸ್ಥಿ, ಎನ್​. ಜಗದೀಶನ್​.

ಟೀಮ್​ ಸಿ: ಋತುರಾಜ್​ ಗಾಯಕ್ವಾಡ್​ (ನಾಯಕ), ಸಾಯಿ ಸುದರ್ಶನ್​, ರಜತ್​ ಪಾಟೀದಾರ್​, ಅಭಿಷೇಕ್​ ಪೊರೆಲ್​, ಸೂರ್ಯಕುಮಾರ್​ ಯಾದವ್​, ಬಿ. ಇಂದ್ರಜಿತ್​, ಹೃತಿಕ್​ ಶೋಕೀನ್​, ಮಾನವ್​ ಸುಥರ್​, ಉಮ್ರಾನ್​ ಮಲಿಕ್​, ವೈಶಾಕ್​ ವಿಜಯ್​ಕುಮಾರ್​, ಅಂಶುಲ್​ ಖಂಬೋಜ್​, ಹಿಮಾಂಶು ಚೌಹಾಣ್​, ಮಯಾಂಕ್​ ಮಾರ್ಕಂಡೆ, ಆರ್ಯನ್​ ಜುಯಲ್​, ಸಂದೀಪ್​ ವಾರಿಯರ್​.

ಟೀಮ್​ ಡಿ: ಶ್ರೇಯಸ್​ ಅಯ್ಯರ್​ (ನಾಯಕ), ಅಥರ್ವ ತೈಡೆ, ಯಶ್​ ದುಬೆ, ದೇವದತ್​ ಪಡಿಕಲ್​, ಇಶಾನ್​ ಕಿಶನ್​, ರಿಕಿ ಭುಯಿ, ಸಾರಾಂಶ್​ ಜೈನ್​, ಅಕ್ಷರ್​ ಪಟೇಲ್​, ಅರ್ಷದೀಪ್​ ಸಿಂಗ್​, ಆದಿತ್ಯ ಠಾಕ್ರೆ, ಹರ್ಷಿತ್​ ರಾಣಾ, ತುಷಾರ್​ ದೇಶಪಾಂಡೆ, ಆಕಾಶ್​ ಸೇನ್​ಗುಪ್ತಾ, ಕೆಎಸ್​ ಭರತ್​, ಸೌರಭ್​ ಕುಮಾರ್​.

ರಾಜ್ಯದ 6 ಆಟಗಾರರಿಗೆ ಚಾನ್ಸ್​

ದುಲೀಪ್​ ಟ್ರೋಫಿಯಲ್ಲಿ ರಾಜ್ಯದ 6 ಆಟಗಾರರು ಆಡಲಿದ್ದಾರೆ. ಕೆಎಲ್​ ರಾಹುಲ್​, ಮಯಾಂಕ್​ ಅಗರ್ವಾಲ್​, ಪ್ರಸಿದ್ಧಕೃಷ್ಣ, ವಿದ್ವತ್​ ಕಾವೇರಪ್ಪ ಎ ತಂಡದಲ್ಲಿದ್ದರೆ, ವೈಶಾಕ್​ ವಿಜಯ್​ಕುಮಾರ್​ ಸಿ ತಂಡದಲ್ಲಿದ್ದಾರೆ. ದೇವದತ್​ ಪಡಿಕ್ಕಲ್​ ಡಿ ತಂಡದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net