

ಸಾರಾ ಅಲಿ ಖಾನ್ ಮತ್ತು ಅನನ್ಯ ಪಾಂಡೆ ಜತೆಯಾಗಿ ಕಾಫಿ ವಿತ್ ಕರಣ್ ಸೀಸನ್ 8ರ ಶೋನಲ್ಲಿ ಭಾಗವಹಿಸಿದ್ದಾರೆ. ಕರಣ್ ಜೋಹರ್ ಪ್ರಸಿದ್ಧ ಶೋನಲ್ಲಿ ಕಾಣಿಸಿಕೊಂಡ ನಟಿ ಸಾರಾ ಅಲಿಖಾನ್, ಕ್ರಿಕೆಟಿಗ ಶುಭಮಾನ್ ಗಿಲ್ ಮತ್ತು ಅವರ ಡೇಟಿಂಗ್ ವದಂತಿಗಳ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಕೂತಹಲಕಾರಿ ವಿಚಾರ ಅಂದ್ರೆ ಸಾರಾ ಶುಭ್ಮನ್ ಜತೆ ತಾವು ಡೇಟಿಂಗ್ ಮಾಡುತ್ತಿಲ್ಲ. ನಾನು ಸಿಂಗಲ್ ಎಂದು ಹೇಳಿಕೊಂಡಿದ್ದಾರೆ. ಕರಣ್ ಜೋಹರ್ ಫೇಮಸ್ ಬ್ಯಾಟ್ಸ್ಮ್ಯಾನ್ ಜತೆಗೆ ನೀವು ಡೇಟಿಂಗ್ ಮಾಶಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಆಗ ಸಿಂಬಾ ನಟಿ ಎಲ್ಲರೂ ತನ್ನನ್ನು ಮತ್ತೊಂದು 'ಸಾರಾ' ಎಂದು ತಪ್ಪಾಗಿ ಭಾವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕರಣ್ ಪ್ರಶ್ನೆಗೆ ಉತ್ತರಿಸಿದ ಸಾರಾ, ನೀವೆಲ್ಲರೂ ತಪ್ಪು ತಿಳಿದಿದ್ದೀರಿ, ನೀವೆಲ್ಲರೂ ತಪ್ಪಾದ ಸಾರಾ ಹಿಂದೆ ಬಿದ್ದಿದ್ದೀರಿ. ಸರಿಯಾದ ಸಾರಾನನ್ನ ಗುರುತಿಸಿ. ಶುಭ್ಮನ್ ಗಿಲ್ ಡೇಟ್ ಮಾಡುತ್ತಿರೋ ಸಾರಾ ನಾನಲ್ಲ. ಮತ್ತೊಂದು ಸಾರಾ ಇದ್ದಾರೆ ಅನ್ನೋದು ಸಾರಾ ಅಲಿಖಾನ್ ಹೇಳಿಕೆ.
ಸಾರಾ ಅಲಿ ಖಾನ್ ಸಾರಾ ತೆಂಡೂಲ್ಕರ್ ಮತ್ತು ಶುಭ್ಮನ್ ಡೇಟಿಂಗ್ ವದಂತಿಯ ಬಗ್ಗೆ ಏನನ್ನೂ ಮಾತನಾಡಿಲ್ಲ. ಆದ್ರೆ ಮತ್ತೊಂದು ಸಾರಾ ಅಂದಿರೋ ಮಾತು ಇದೀಗ ವೈರಲ್ ಆಗಿದೆ.
ನಾನು ಇಂದಿನ ವರೆಗೂ ಯಾವುದೇ ಅಂದ್ರೆ ನನಗಿಂತಲೂ ಕಿರಿಯ ವಯಸ್ಸಿನ ಕ್ರಿಕೆಟಿಗನನ್ನು ಡೇಟ್ ಮಾಡಿಲ್ಲ. ಅಂತೆಯೇ ನಾನು ಶುಭ್ಮನ್ ಸ್ನೇಹಿತೆಯೂ ಅಲ್ಲ ನಮ್ಮಿಬ್ಬರ ನಡುವೆ ಫ್ರೆಂಡ್ಶಿಪ್ ಸಮೇತ ಇಲ್ಲವೆಂದು, ಯಮ್ಮ ಮತ್ತು ಶುಭ್ಮನ್ಗಿಲ್ ಡೇಟಿಂಗ್ ರೂಮರ್ಗಳನ್ನ ತಳ್ಳಿ ಹಾಕಿದ್ದಾರೆ.