

ಬೆಂಗಳೂರು: ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಾರದ ಹಿಂದಷ್ಟೇ ಗಂಡು ಮಗುವಿಗೆ ಅಪ್ಪನಾಗಿದ್ದಾರೆ. ಹಾರ್ದಿಕ್ ಪಾಂಡ್ಯ-ನತಾಶಾ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಪಾಂಡ್ಯ ಆಪ್ತ ಮಿತ್ರ ಕನ್ನಡಿಗ ಕೆಎಲ್ ರಾಹುಲ್ ಮಾತ್ರ ವಿಶೇಷವಾಗಿ ಶುಭ ಕೋರಿದ್ದಾರೆ. ಹಾರ್ದಿಕ್ ಸಹೋದರ ಕೃನಾಲ್ ಪಾಂಡ್ಯ ಮಗುವಿನ ಫೋಟೋ ಪ್ರಕಟಿಸಿ, ಕ್ರಿಕೆಟ್ ವಿಷಯ ಮಾತಾಡೋಣ, ಸಮಯ ವ್ಯರ್ಥ್ಯ ಮಾಡುವುದು ಬೇಡ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್, ‘ಅವನಿಗೆ ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಆಗುವಂತೆ ಹೇಳು’ ಎಂದು ಹೇಳಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್ ಪಾಂಡ್ಯ ಹಲವು ತಿಂಗಳಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದರು. ಕಳೆದ ಮಾರ್ಚ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ವಾಪಸಾಗಬೇಕಿದ್ದರೂ ಕೋವಿಡ್-19ರ ಭಯದಿಂದಾಗಿ ಸರಣಿ ರದ್ದುಗೊಂಡಿತ್ತು. ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪ್ರತಿನಿಧಿಸುತ್ತಿದ್ದರೆ, ಕೆಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸಾರಥ್ಯವಹಿಸಲಿದ್ದಾರೆ.