ಆಂಗ್ಲರ ನಾಡಲ್ಲಿ ಕನ್ನಡಿಗನ ಶತಕದಾಟ; ಕೆ.ಎಲ್​. ರಾಹುಲ್​ಗೆ ಉಪನಾಯಕನ ಸೆಂಚುರಿ ಸಾಥ್​ | IND vs ENG Test

ವಿಜಯವಾಣಿ - 2025-06-23T194557.349
Published on

IND vs ENG Test: ಪ್ರಸಕ್ತ ಆಂಗ್ಲರ ನೆಲದಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್​ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಟೆಸ್ಟ್ ಹೆಡಿಂಗ್ಲಿಯಲ್ಲಿ​ ನಡೆಯುತ್ತಿದ್ದು, 4ನೇ ದಿನದ ಪಂದ್ಯದಲ್ಲಿ ಭಾರತ ಮುಂಚೂಣಿಯಲ್ಲಿದೆ. ತಂಡದ ಪರ ಶತಕ ಬಾರಿಸಿದ ಕನ್ನಡಿಗ ಕೆ.ಎಲ್​. ರಾಹುಲ್​, ಆಂಗ್ಲರ ನಾಡಿನಲ್ಲಿ ಭರ್ಜರಿ ಇನ್ನಿಂಗ್ಸ್​ನತ್ತ ಸಾಗಿದ್ದಾರೆ.

ಕೆ.ಎಲ್. ರಾಹುಲ್ ಶತಕದ ಬೆನ್ನಲ್ಲೇ ಇಂಗ್ಲೆಂಡ್ ಬೌಲರ್​ಗಳ ಬೆವರಿಳಿಸುತ್ತಿರುವ ಟೀಮ್ ಇಂಡಿಯಾ ಉಪನಾಯಕ ರಿಷಭ್ ಪಂತ್​ ಕೂಡ ಶತಕ ಬಾರಿಸಿದ್ದಾರೆ. ಮೊದಲ ದಿನವೇ ಆಕರ್ಷಕ ಶತಕ ದಾಖಲಿಸಿ, ಪಲ್ಟಿ ಹೊಡೆದು ಸಂಭ್ರಮಿಸಿದ್ದ ಪಂತ್​, ನಾಲ್ಕನೇ ದಿನದ ಆಟದಲ್ಲಿಯೂ ತಂಡದ ಪರ ಉತ್ತಮ ಇನ್ನಿಂಗ್ಸ್ ನೀಡಿದ್ದಾರೆ. ಟೆಸ್ಟ್‌ನಲ್ಲಿ ರಾಹುಲ್ ದಾಖಲಿಸಿದ ಒಂಬತ್ತನೇ ಶತಕ ಇದಾಗಿದೆ.

ಪ್ರಸ್ತುತ ಬ್ಯಾಟಿಂಗ್ ವಿವರ

  • ಕೆ.ಎಲ್​. ರಾಹುಲ್​ (112* ರನ್​, 217 ಎಸೆತ)
  • ರಿಷಭ್ ಪಂತ್​ (100* ರನ್​, 130 ಎಸೆತ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net