ಐಪಿಎಲ್‌ನ ಹೊಸ ತಂಡ ಲಖನೌಗೆ ಕನ್ನಡಿಗ ಕೆಎಲ್ ರಾಹುಲ್ ನಾಯಕ?

kl rahul web
Published on

ನವದೆಹಲಿ: ಕನ್ನಡಿಗ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡದಿಂದ ಹೊರಬರಲಿದ್ದು, ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ.

ಸಂಜೀವ್ ಗೋಯೆಂಕಾ ಗ್ರೂಪ್ ದಾಖಲೆಯ 7,090 ಕೋಟಿ ರೂ. ಮೊತ್ತವನ್ನು ಬಿಸಿಸಿಐಗೆ ಪಾವತಿಸಿ ಲಖನೌ ಫ್ರಾಂಚೈಸಿಯನ್ನು ಖರೀದಿಸಿದ್ದು, ರಾಹುಲ್ ಅವರನ್ನು ನಾಯಕರನ್ನಾಗಿ ನೇಮಿಸಲು ಒಲವು ತೋರಿದೆ ಎನ್ನಲಾಗಿದೆ.

ಕಳೆದ ಐಪಿಎಲ್‌ನಲ್ಲಿ ರಾಹುಲ್ 550 ರನ್ ಗಳಿಸಿ ಕೂದಲೆಳೆ ಅಂತರದಲ್ಲಿ ಆರೆಂಜ್ ಕ್ಯಾಪ್‌ನಿಂದ ವಂಚಿತರಾಗಿದ್ದರು. ರಾಹುಲ್ ಇತ್ತೀಚೆಗೆ ಭಾರತ ಟಿ20 ತಂಡದ ಉಪನಾಯಕರಾಗಿಯೂ ನೇಮಕಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net