ರಾಹುಲ್ ಹೇರ್‌ಸ್ಟೈಲ್‌ಗೆ ಫಿದಾ ಆದ ಬಾಲಿವುಡ್ ನಟಿಯರು...

anushka kapoor_web
Published on

ಬೆಂಗಳೂರು: ಕರೊನಾ ವೈರಸ್ ಭೀತಿಯಿಂದಾಗಿ ಇಡೀ ಕ್ರೀಡಾ ಲೋಕವೇ ನಿಂತ ನೀರಾಗಿದೆ. ಈ ವೇಳೆಗೆ ಐಪಿಎಲ್‌ನಲ್ಲಿ ಮಿಂಚುತ್ತಿದ್ದ ಕ್ರಿಕೆಟಿಗರ ಪಾಡಂತೂ ಹೇಳತೀರದು. ಲಾಕ್‌ಡೌನ್ ವೇಳೆ ಸಾಮಾಜಿಕ ಜಾಲತಾಣ ಅವರಿಗೆ ಅಸವಾಗಿದೆ. ಪ್ರತಿದಿನ ಇನ್‌ಸ್ಟಾಗ್ರಾಮ್, ಟ್ವಿಟರ್ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾರೆ. ಟೀಮ್ ಇಂಡಿಯಾದ ಭರವಸೆಯ ಆಟಗಾರ ಕೆಎಲ್ ರಾಹುಲ್ ಕೂಡ ಸಾಮಾಜಿಕ ಜಾಲತಾಣಗಳಿಗೆ ಬಹಳ ಹತ್ತಿರವಾಗಿದ್ದಾರೆ. ಇದೀಗ ರಾಹುಲ್ ಹೇರ್‌ಸ್ಟೈಲ್ ಇಬ್ಬರು ಬಾಲಿವುಡ್ ನಟಿಯರ ಗಮನಸೆಳೆದಿದೆ.

ದೈನಂದಿನ ಚಟುವಟಿಕೆಗಳನ್ನು ಇನ್‌ಸ್ಟಾಗ್ರಾಮನಲ್ಲಿ ಹಂಚಿಕೊಳ್ಳುವ ಕೆಎಲ್ ರಾಹುಲ್, ಇದೀಗ ಅವರ ಹೊಸ ಹೇರ್‌ಸ್ಟೈಲ್ ಎಲ್ಲರ ಗಮನಸೆಳೆದಿದೆ. ಲಾಕ್‌ಡೌನ್ 4.0ರ ಹೊಸ ಹೇರ್‌ಸ್ಟೈಲ್ ಚಿತ್ರವನ್ನು ಇನ್‌ಸ್ಟಾದಲ್ಲಿ ಪ್ರಕಟಿಸಿರುವ ರಾಹುಲ್, ಮನಸು ಹೋಗಿದೆ...ಕೂದಲೂ ಹೋಗಿದೆ... ಎಂದು ಶೀರ್ಷಿಕೆ ನೀಡಿರುವುದಕ್ಕೆ ನಟಿಯರಾದ್ ಅಕಾಂಕ್ಷಾ ರಂಜನ್ ಕಪೂರ್ ಹಾಗೂ ಅನುಷ್ಕಾ ರಂಜನ್ ಪ್ರತಿಕ್ರಿಯಿಸಿದ್ದಾರೆ. ಅನುಷ್ಕಾ ರಂಜನ್ ‘ಲಾ..ಹುಲ್ ಎಂದು ಹೇಳಿದರೆ, ಅಕಾಂಕ್ಷಾ ನೋ ವೇ...ಎಂದು ಬರೆದಿದ್ದಾರೆ. ಕರಣ್ ಜೋಹರ್ ನಿರ್ಮಾಣದ ‘ಗಿಲ್ಟಿ’ ಚಿತ್ರದ ಮೂಲಕ ಅಕಾಂಕ್ಷಾ ರಂಜನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

28 ವರ್ಷದ ರಾಹುಲ್ ಇತ್ತೀಚೆಗಷ್ಟೇ ಟ್ವಿಟರ್‌ನಲ್ಲಿ ಅಭಿಮಾನಿಗಳ ಪ್ರಶ್ನೋತ್ತರಗಳಿಗೆ ಉತ್ತರಿಸಿದ್ದರು. ಸದ್ಯ ಅನಿರ್ದಿಷ್ಟಾವಧಿ ವರೆಗೆ ಮುಂದೂಡಲ್ಪಟ್ಟಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಬೇಕಿತ್ತು. ಜಿಮ್‌ನಲ್ಲಿ ವರ್ಕ್‌ಔಟ್, ಫಿಟ್ನೆಸ್ ಟಿಪ್ಸ್ ಸೇರಿದಂತೆ ಇನ್ನಿತರ ನಿರ್ವಹಣೆ ಕುರಿತು ರಾಹುಲ್ ಟ್ವಿಟ್‌ನಲ್ಲಿ ತಿಳಿಸುತ್ತಾ ಬಂದಿದ್ದಾರೆ. ರಾಹುಲ್ ಇದುವರೆಗೂ ಆಡಿರುವ 36 ಟೆಸ್ಟ್ ಪಂದ್ಯಗಳಿಂದ 5 ಶತಕ ಸೇರಿದಂತೆ 2006 ರನ್ ಪೇರಿಸಿದ್ದರೆ, 32 ಏಕದಿನ ಪಂದ್ಯಗಳಿಂದ 4 ಶತಕ ಒಳಗೊಂಡಂತೆ 1239 ರನ್ ಹಾಗೂ 42 ಟಿ20 ಪಂದ್ಯಗಳಿಂದ 2 ಶತಕ ಸೇರಿದಂತೆ 1461 ರನ್ ಕಲೆಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net