ಗೆಳತಿ ಹುಟ್ಟುಹಬ್ಬಕ್ಕೆ ಕ್ರಿಕೆಟಿಗ ಕೆಎಲ್ ರಾಹುಲ್ ನೀಡಿದ ಗಿಫ್ಟ್ ಏನು..!

rahul and athiya for web
Published on

ಬೆಂಗಳೂರು: ಭಾರತ ತಂಡದ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ನಟಿ ಅತಿಯಾ ಶೆಟ್ಟಿ ಜೋಡಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಜೋಡಿ ಶೀಘ್ರವೇ ಹಸೆಮಣೆ ಏರಲಿದೆ ಅಂತೆಲ್ಲಾ ಸುದ್ದಿ ಹರಡುತ್ತಲೇ ಇದೆ. ಗುರುವಾರ ತಮ್ಮ 28ನೇ ಹುಟ್ಟುಹಬ್ಬ ಆಚರಿಸಿಕೊಂಡ ಅತಿಯಾಗೆ ರಾಹುಲ್ ವಿಶಿಷ್ಠ ರೀತಿಯಲ್ಲಿ ಶುಭಕೋರಿದ್ದಾರೆ. ಭುಜದ ಮೇಲೆ ಅತಿಯಾ ಒರಗಿರುವ ಫೋಟೋ ಪ್ರಕಟಿಸಿ, ಹ್ಯಾಪಿ ಬರ್ತ್‌ಡೇ ಮ್ಯಾಡ್ ಚೈಲ್ಡ್ ಎಂದು ರಾಹುಲ್ ಬರೆದುಕೊಂಡಿದ್ದಾರೆ. ಇದು ರಾಹುಲ್ ಕ್ಲಿಕಿಸಿದ ಸೆಲ್ಫಿಯಾಗಿದೆ. ಸದ್ಯದ ಸ್ಥಿತಿಯಲ್ಲಿ ಗೆಳತಿಗೆ ರಾಹುಲ್ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಚಿತ್ರವೇ ಬರ್ತ್ ಡೇ ಗಿಫ್ಟ್ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷದ ಅತಿಯಾ ಹುಟ್ಟುಹಬ್ಬದಂದೇ ರಾಹುಲ್, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಪ್ರಕಟಿಸಿ ಶುಭಕೋರಿದ್ದರು. ಇದರೊಂದಿಗೆ ಬಾಲಿವುಡ್ ನಟಿ ಜತೆಗಿನ ಒಡನಾಟವನ್ನು ಬಹಿರಂಗಪಡಿಸಿದ್ದರು. ಅತಿಯಾ ಶೆಟ್ಟಿ, ಮಂಗಳೂರು ಮೂಲದ ಬಾಲಿವುಡ್ ನಟ ಸುನೀಲ್ ಶೆಟ್ಟಿಯ ಮಗಳು. ಜತೆಗೆ ಕಳೆದ ಏಪ್ರಿಲ್‌ನಲ್ಲಿ ರಾಹುಲ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದ ಅತಿಯಾ, ನನ್ನ ಹುಡುಗನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದರು. ಗೆಳೆಯರೊಬ್ಬರಿಂದ ಪರಸ್ಪರ ಪರಿಚಯಗೊಂಡ ರಾಹುಲ್-ಅತಿಯಾ ಜೋಡಿ ಕಳೆದ ವರ್ಷ ಥಾಯ್ಲೆಂಡ್ ಪ್ರವಾಸಕ್ಕೆ ಹೋಗಿತ್ತು.

2015ರಲ್ಲಿ ಆದಿತ್ಯ ಪಚೊಲಿ ಜತೆ ಬಾಲಿವುಡ್‌ಗೆ ಅತಿಯಾ ಪದಾರ್ಪಣೆ ಮಾಡಿದ್ದರು. ರಾಹುಲ್ ಸಾರಥ್ಯದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 13ನೇ ಐಪಿಎಲ್‌ನಲ್ಲಿ ಪ್ಲೇ ಆ್ ಹಂತಕ್ಕೇರಲು ವಿಫಲವಾಗಿದೆ. ಸ್ವದೇಶಕ್ಕೆ ಆಗಮಿಸದ ರಾಹುಲ್, ರಾಷ್ಟ್ರೀಯ ತಂಡದೊಂದಿಗೆ ಆಸ್ಟ್ರೇಲಿಯಾಗೆ ತೆರಳುವ ಸಲುವಾಗಿ ಯುಎಇಯಲ್ಲೇ ಉಳಿದುಕೊಂಡಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಆರ್‌ಸಿಬಿ ಆಟಗಾರರ ಸಮ್ಮುಖದಲ್ಲಿ 32ನೇ ಹುಟ್ಟುಹಬ್ಬ ಆಚರಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net