ನ್ಯೂಜಿಲೆಂಡ್​ ಮಹಿಳಾ ಸಿಬ್ಬಂದಿಗೆ ಮೊಬೈಲ್​ ಗಿಫ್ಟ್ ನೀಡಿದ ಕೆಎಲ್​ ರಾಹುಲ್​!

ಕನ್ನಡಿಗ ಕೆಎಲ್​ ರಾಹುಲ್​ಗೆ ಪಂದ್ಯದ ನಂತರ "ಗೇಮ್​ ಚೇಂಜರ್​ ಆಫ್​​ ದಿ ಮ್ಯಾಚ್​' ಪ್ರಶಸ್ತಿಯಾಗಿ ಸ್ಮಾರ್ಟ್​ಫೋನ್​ ನೀಡಲಾಗಿತ್ತು
cricket
ಕೆಎಲ್​ ರಾಹುಲ್​ ಮತ್ತು ಅವರಿಂದ ಉಡುಗೊರೆ ಪಡೆದ ಮಹಿಳೆಏಜೆನ್ಸಿ
Published on: 

ವೆಲ್ಲಿಂಗ್ಟನ್​: ಮಳೆಬಾಧಿತ ಎರಡನೇ ಏಕದಿನ ಪಂದ್ಯದಲ್ಲಿ ಉಪಯುಕ್ತ ಆಟದೊಂದಿಗೆ ಭಾರತದ ಗೆಲುವಿಗೆ ನೆರವಾದ ಕನ್ನಡಿಗ ಕೆಎಲ್​ ರಾಹುಲ್​ಗೆ ಪಂದ್ಯದ ನಂತರ "ಗೇಮ್​ ಚೇಂಜರ್​ ಆಫ್​​ ದಿ ಮ್ಯಾಚ್​' ಪ್ರಶಸ್ತಿಯಾಗಿ ಸ್ಮಾರ್ಟ್​ಫೋನ್​ ನೀಡಲಾಗಿತ್ತು. ಇದನ್ನು ಮೈದಾನದಲ್ಲಿದ್ದ ಸ್ಥಳೀಯ ಮಹಿಳಾ ಸಿಬ್ಬಂದಿಯೊಬ್ಬರಿಗೆ ಉಡುಗೊರೆಯಾಗಿ ನೀಡುವ ಮೂಲಕ ಮನಗೆದ್ದಿದ್ದಾರೆ.

"ರಾಹುಲ್​ಗೆ ಸಿಕ್ಕ ಮೊಬೈಲ್​ಅನ್ನು ನನಗೆ ನೀಡಿದರು. ನನಗೆ ಅಚ್ಚರಿಯಾಯಿತು. ಆದರೆ ಅವರ ನಡೆ ನನ್ನ ಹೃದಯ ಗೆದ್ದಿತು. ನಾನು ಅದನ್ನು ನಿರೀಕ್ಷೆ ಮಾಡಿರಲಿಲ್ಲ' ಎಂದು ಆ ಮಹಿಳೆ ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ಆಸೀಸ್​ ದಾಖಲೆ ಮುರಿದ ಭಾರತ!

ಭಾರತ ತಂಡ ಹಾಲಿ ವರ್ಷ ಎಲ್ಲ ಮಾದರಿಯ ಕ್ರಿಕೆಟ್​ ಸೇರಿ ನ್ಯೂಜಿಲೆಂಡ್​ ವಿರುದ್ಧ ಒಟ್ಟಾರೆ 11 ಗೆಲುವು ದಾಖಲಿಸಿದೆ. ಈ ಮೂಲಕ ರಿಕಿ ಪಾಂಟಿಂಗ್​ ಸಾರಥ್ಯದ ಆಸ್ಟ್ರೆಲಿಯಾ ತಂಡ 2005ರಲ್ಲಿ ನ್ಯೂಜಿಲೆಂಡ್​ ವಿರುದ್ಧ ಒಟ್ಟು 10 ಗೆಲುವು ಸಾಧಿಸಿದ್ದ ದಾಖಲೆಯನ್ನು ಭಾರತ ಮುರಿದಿದೆ. ಆಸ್ಟ್ರೆಲಿಯಾ 21 ವರ್ಷಗಳ ಹಿಂದೆ 12 ಪಂದ್ಯಗಳಲ್ಲೇ 10 ಗೆಲುವು(ಟಿ20ಯಲ್ಲಿ 1, ಏಕದಿನದಲ್ಲಿ 7, ಟೆಸ್ಟ್​ನಲ್ಲಿ 2) ಸಾಧಿಸಿದ್ದರೆ, ಭಾರತ ತಂಡ 16 ಪಂದ್ಯಗಳಲ್ಲಿ 11 ಗೆಲುವು ಸಾಧಿಸಿದೆ. ಭಾರತ ಹಾಲಿ ವರ್ಷ ಕಿವೀಸ್​ ವಿರುದ್ಧ ಆಡಿದ 11 ಟಿ20 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದ್ದರೆ, ಏಕದಿನದಲ್ಲಿ 5ರಲ್ಲಿ 3 ಗೆಲುವು ಸಾಧಿಸಿದೆ.