ಕನ್ನಡಿಗನ ಮನೆಗೆ ಕಾಲಿಟ್ಟ ಮಹಾಲಕ್ಷ್ಮಿ; ಹೆಣ್ಣುಮಗುವಿನ ತಂದೆಯಾದ ಕ್ರಿಕೆಟಿಗ ಕೆ.ಎಲ್​. ರಾಹುಲ್​ | KL Rahul

ವಿಜಯವಾಣಿ (71)
Published on

KL Rahul: ಇಂದು (ಮಾ.24) ಐಪಿಎಲ್​ನ ನಾಲ್ಕನೇ ಪಂದ್ಯದಲ್ಲಿ ತಮ್ಮ ತಂಡದ ಪರ ಆಡದ ಕೆ.ಎಲ್​. ರಾಹುಲ್​ ಅನುಪಸ್ಥಿತಿಗೆ ಕ್ರಿಕೆಟ್ ಅಭಿಮಾನಿಗಳು ಗೊಂದಲ ವ್ಯಕ್ತಪಡಿಸಿದ್ದರು. ಆದರೆ, ಕನ್ನಡಿಗನ ಮನೆಗೆ ಮಹಾಲಕ್ಷ್ಮಿ ಕಾಲಿಟ್ಟಿರುವ ಸುದ್ದಿಯನ್ನು ಕೇಳಿ ಸಂತಸ ವ್ಯಕ್ತಪಡಿಸಿದ್ದಾರೆ.

ಕೆ.ಎಲ್​. ರಾಹುಲ್ ಮತ್ತು ಆಥಿಯಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನಿಸಿದೆ. ತಾಯಿ, ಮಗು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಹಂಚಿಕೊಂಡ ರಾಹುಲ್​, ತಮಗೆ ಹೆಣ್ಣುಮಗುವಾದ ಸುದ್ದಿಯನ್ನು ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಮಾ.22ರಂದು ಆರಂಭಗೊಂಡ ಐಪಿಎಲ್​ ಆವೃತ್ತಿಯ ನಾಲ್ಕನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್​ ನಡುವೆ ನಡೆದಿದೆ. ಈ ಪಂದ್ಯದಲ್ಲಿ ತಮ್ಮ ತಂಡದ ಪರ ಮೈದಾನಕ್ಕಿಳಿಯಬೇಕಿದ್ದ ಕೆ.ಎಲ್​. ರಾಹುಲ್​, ಪತ್ನಿ ಹೆರಿಗೆ ಮುನ್ಸೂಚನೆ ಹಿನ್ನೆಲೆ ಇಂದಿನ ಮ್ಯಾಚ್​ನಿಂದ ಹಿಂದೆ ಸರಿದರು. ಇದೀಗ ಮೊದಲ ಮಗುವಿಗೆ ತಂದೆಯಾದ ಕೆ.ಎಲ್​ ರಾಹುಲ್ ಕುಟುಂಬದಲ್ಲಿ ಸಂತಸ ಮನೆಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net