

ಕೋಲ್ಕತ: ವಿಕೆಟ್ ಕೀಪರ್-ಆರಂಭಿಕ ಫಿಲ್ ಸಾಲ್ಟ್ (89*ರನ್, 47 ಎಸೆತ, 14 ಬೌಂಡರಿ, 3 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ಬಲದಿಂದ ಕೋಲ್ಕತ ನೈಟ್ರೈಡರ್ಸ್ ತಂಡ ಐಪಿಎಲ್-17ರಲ್ಲಿ ಲಖನೌ ಸೂಪರ್ಜೈಂಟ್ಸ್ ವಿರುದ್ಧ 8 ವಿಕೆಟ್ಗಳಿಂದ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ ಜಯದ ಹಳಿಗೆ ಮರಳಿದ ಕೆಕೆಆರ್ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡರೆ, ಕೆಎಲ್ ರಾಹುಲ್ ಪಡೆ ಸತತ 2ನೇ ಸೋಲು ಕಂಡಿತು.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಲಖನೌ, ಅಗ್ರ ಬ್ಯಾಟರ್ಗಳ ವೈಲ್ಯದ ನಡುವೆ ನಿಕೋಲಸ್ ಪೂರನ್ (45 ರನ್, 32 ಎಸೆತ, 2 ಬೌಂಡರಿ, 4 ಸಿಕ್ಸರ್) ಹೋರಾಟದಿಂದ 7 ವಿಕೆಟ್ಗೆ 161 ರನ್ ಕಲೆಹಾಕಿತು. ಪ್ರತಿಯಾಗಿ ಕೆಕೆಆರ್, ಫಿಲ್ ಸಾಲ್ಟ್ ಮತ್ತು ನಾಯಕ ಶ್ರೇಯಸ್ ಅಯ್ಯರ್ (38*) ಮುರಿಯದ 3ನೇ ವಿಕೆಟ್ಗೆ 76 ಎಸೆತಗಳಲ್ಲಿ 120 ರನ್ ಸೇರಿಸಿದ ನೆರವಿನಿಂದ 15.4 ಓವರ್ಗಳಲ್ಲಿ 2 ವಿಕೆಟ್ಗೆ 162 ರನ್ ಪೇರಿಸಿ ಜಯಿಸಿತು. ವೇಗಿ ಮೊಹ್ಸಿನ್ ಖಾನ್ (29ಕ್ಕೆ 2) ಮೊದಲ 2 ವಿಕೆಟ್ ಬೇಗನೆ ಕಬಳಿಸಿ ಕೆಕೆಆರ್ಗೆ ಆಘಾತ ನೀಡಿದರೂ, ಸಾಲ್ಟ್&ಶ್ರೇಯಸ್ ಜೋಡಿ ಬಳಿಕ ಸವಾಲಾಗಿ ನಿಂತು 26 ಎಸೆತ ಬಾಕಿ ಇರುವಂತೆಯೇ ಸುರತವಾಗಿ ದಡ ಸೇರಿಸಿತು.
ಲಖನೌಗೆ ಕಡಿವಾಣ
ಮೋಹನ್ ಬಗಾನ್ ುಟ್ಬಾಲ್ ಕ್ಲಬ್ಗೆ ಗೌರವ ಸೂಚಿಸುವ ಸಲುವಾಗಿ ಎಂದಿನ ನೀಲಿ ಜೆರ್ಸಿಗೆ ಬದಲಾಗಿ ಹಸಿರು&ಕೆಂಗಂದು ಜೆರ್ಸಿಯೊಂದಿಗೆ ಕಣಕ್ಕಿಳಿದ ಲಖನೌಗೆ ಉತ್ತಮ ಆರಂಭ ಸಿಗಲಿಲ್ಲ. ಕ್ವಿಂಟನ್ ಡಿಕಾಕ್ (10), ದೀಪಕ್ ಹೂಡಾ (8) ಪವರ್ಪ್ಲೇನಲ್ಲೇ ಡಗೌಟ್ಗೆ ಮರಳಿದರು. ನಂತರ ಕೆಎಲ್ ರಾಹುಲ್ (39) ಮತ್ತು ಆಯುಷ್ ಬಡೋನಿ (29) 3ನೇ ವಿಕೆಟ್ಗೆ 39 ರನ್ ಸೇರಿಸಿದರೂ, ಇದಕ್ಕೆ 34 ಎಸೆತ ಬಳಸಿದ್ದರಿಂದ ಲಖನೌ ಸ್ಥಿತಿ ಸುಧಾರಿಸಲಿಲ್ಲ. ಆದರೆ ಕೊನೆಯಲ್ಲಿ ಪೂರನ್ ಬಿರುಸಿನ ಆಟವಾಡುವ ಮೂಲಕ ಲಖನೌ ಮೊತ್ತವನ್ನು 160ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಕೊನೇ 4 ಓವರ್ಗಳಲ್ಲಿ ಲಖನೌ 43 ರನ್ ಕಸಿಯಿತು. ಟೂರ್ನಿಯ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ ಈ ಬಾರಿ 3 ವಿಕೆಟ್ ಕಬಳಿಸಿ ಗಮನಸೆಳೆದರು.