ಫಲಿಸಲಿಲ್ಲ ರಿಯಾನ್ ಪರಾಗ್ ಸ್ಫೋಟಕ ಇನ್ನಿಂಗ್ಸ್​! 1 ರನ್​ನಿಂದ ಗೆದ್ದ ಕೆಕೆಆರ್​ ಪ್ಲೇಆಫ್​ ಕನಸು ಇನ್ನೂ ಜೀವಂತ | KKR vs RR

ವಿಜಯವಾಣಿ - 2025-05-04T195741.960
Published on

KKR vs RR: ಇಂದು (ಮೇ.04) ಕೋಲ್ಕತದ ಈಡೆನ್​ ಗಾರ್ಡೆನ್ಸ್​ ಮೈದಾನದಲ್ಲಿ ನಡೆದ ಕೆಕೆಆರ್​ ಮತ್ತು ಆರ್​ಆರ್​ ನಡುವಿನ ರೋಚಕ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಪಡೆ ಒಂದು ರನ್​ನಿಂದ ಗೆದ್ದು ಬೀಗಿತು. ಈ ಗೆಲುವಿನ ಮೂಲಕ ತಮ್ಮ ಪ್ಲೇಆಫ್​ ಕನಸನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್, ಆರ್​ಆರ್​ಗೆ ಬೌಲಿಂಗ್ ಮಾಡಲು ಆಹ್ವಾನಿಸಿತು. 20 ಓವರ್ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡು 206 ರನ್​ ಕಲೆಹಾಕಿದ ಕೆಕೆಆರ್​, ಈ ಗುರಿಯನ್ನು ಬೆನ್ನಟ್ಟುವಂತೆ ರಾಜಸ್ಥಾನಕ್ಕೆ ಸವಾಲು ಹಾಕಿತು. ಅಂತೆಯೇ ಚೇಸಿಂಗ್​ಗಿಳಿದ ಆರ್​ಆರ್​ಗೆ ರಿಯಾನ್​ ಪರಾಗ್​ 95 ರನ್​ಗಳ ಅದ್ಭುತ ಇನ್ನಿಂಗ್ಸ್ ಸಿಕ್ಕಿದರೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಕೇವಲ ಒಂದೇ ಒಂದು ರನ್​ನಿಂದ ಸೋಲುಂಡಿತು.

ಇನ್ನು ಕೆಕೆಆರ್​ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ವೆಸ್ಟ್​ ಇಂಡೀಸ್​ ದೈತ್ಯ ಬ್ಯಾಟರ್​ ಆ್ಯಂಡ್ರೆ ರಸೆಲ್​, ಕೇವಲ 25 ಎಸೆತದಲ್ಲಿ 57 ರನ್​ ಬಾರಿಸುವ ಮೂಲಕ ಅರ್ಧ ಶತಕ ಗಳಿಸಿ, ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಅರ್ಧ ಶತಕ ಬಾರಿಸಿ ಕೆಕೆಆರ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಸೆಲ್​, ಇದೀಗ ಫಾರ್ಮ್​ಗೆ ಮರಳಿರುವುದು ಕೆಕೆಆರ್​ಗೆ ಮತ್ತಷ್ಟು ಬಲ ತುಂಬಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net