

ಚೆನ್ನೈ: ಸರ್ವಾಂಗೀಣ ನಿರ್ವಹಣೆ ತೋರಿದ ಕೋಲ್ಕತ ನೈಟ್‌ರೈಡರ್ಸ್ ತಂಡ ಐಪಿಎಲ್-14ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಶುಭಾರಂಭ ಕಂಡಿತು. ಕನ್ನಡಿಗ ಮನೀಷ್ ಪಾಂಡೆ (61*ರನ್, 44 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ಜಾನಿ ಬೇರ್‌ಸ್ಟೋ (55ರನ್, 40 ಎಸೆತ, 5 ಬೌಂಡರಿ, 3 ಸಿಕ್ಸರ್) ಪ್ರತಿಹೋರಾಟದ ನಡುವೆಯೂ ಕೆಕೆಆರ್ ತಂಡ 10 ರನ್‌ಗಳಿಂದ ಜಯ ದಾಖಲಿಸಿತು.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ನಿತೀಶ್ ರಾಣಾ (80 ರನ್, 56 ಎಸೆತ, 9 ಬೌಂಡರಿ, 4 ಸಿಕ್ಸರ್) ಹಾಗೂ ರಾಹುಲ್ ತ್ರಿಪಾಠಿ (53 ರನ್, 29 ಎಸೆತ, 5 ಬೌಂಡರಿ, 2 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್‌ಗೆ 187 ರನ್ ಪೇರಿಸಿತು. ಪ್ರತಿಯಾಗಿ ಸನ್‌ರೈಸರ್ಸ್ ತಂಡ 5 ವಿಕೆಟ್‌ಗೆ 177 ರನ್ ಪೇರಿಸಲಷ್ಟೇ ಶಕ್ತವಾಯಿತು.
ಕೋಲ್ಕತ ನೈಟ್ ರೈಡರ್ಸ್: 6 ವಿಕೆಟ್‌ಗೆ 187 (ನಿತೀಶ್ ರಾಣಾ 80, ರಾಹುಲ್ ತ್ರಿಪಾಠಿ 53, ದಿನೇಶ್ ಕಾರ್ತಿಕ್ 22*, ಮೊಹಮದ್ ಶಮಿ 32ಕ್ಕೆ 2, ರಶೀದ್ ಖಾನ್ 24ಕ್ಕೆ 2), ಸನ್‌ರೈಸರ್ಸ್ ಹೈದರಾಬಾದ್: 5 ವಿಕೆಟ್‌ಗೆ 177 (ಮನೀಷ್ ಪಾಂಡೆ 61*, ಜಾನಿ ಬೇರ್‌ಸ್ಟೋ 55, ಅಬ್ದುಲ್ ಸಮದ್ 19*, ಪ್ರಸಿದ್ಧ ಕೃಷ್ಣ 35ಕ್ಕೆ 2, ಶಕೀಬ್ ಅಲ್ ಹಸನ್ 34ಕ್ಕೆ 1, ಪ್ಯಾಟ್ ಕಮ್ಮಿಸ್ 30ಕ್ಕೆ 1, ಆಂಡ್ರೆ ರಸೆಲ್ 32ಕ್ಕೆ 1).