ಕೆಕೆಆರ್ ಎದುರು ಮುಗ್ಗರಿಸಿದ ಡೆಲ್ಲಿ ಕ್ಯಾಪಿಟಲ್ಸ್, ಅರಬ್‌ನಾಡಿನಲ್ಲಿ ತಪ್ಪಿದ ಹ್ಯಾಟ್ರಿಕ್ ಜಯ

kkr and dc for web4
Published on

ಶಾರ್ಜಾ: ಅರಬ್‌ನಾಡಿನಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದ ಹಾಲಿ ರನ್ನರ್‌ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಆಘಾತ ಎದುರಿಸಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಪಿಎಲ್-14ರ ಎರಡನೇ ಭಾಗದ ಹಣಾಹಣಿಯಲ್ಲಿ ಡೆಲ್ಲಿ ತಂಡ 3 ವಿಕೆಟ್‌ಗಳಿಂದ ಕೆಕೆಆರ್ ತಂಡಕ್ಕೆ ಶರಣಾಯಿತು. ಈ ಸೋಲಿನೊಂದಿಗೆ ರಿಷಭ್ ಪಂತ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ತಪ್ಪಿಸಿಕೊಂಡರೆ, ಯುಎಇಯಲ್ಲಿ ಆಡಿದ 4ನೇ ಪಂದ್ಯದಲ್ಲಿ 3ನೇ ಜಯ ದಾಖಲಿಸಿದ ಇವೊಯಿನ್ ಮಾರ್ಗನ್ ಬಳಗ ಪ್ಲೇಆಫ್ ಹಾದಿಗೆ ಮತ್ತಷ್ಟು ಸನಿಹವಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ, ಆರಂಭಿಕರಾದ ಸ್ಟೀವನ್ ಸ್ಮಿತ್ (39ರನ್, 34 ಎಸೆತ, 4 ಬೌಂಡರಿ) ಹಾಗೂ ಶಿಖರ್ ಧವನ್ (24ರನ್, 20 ಎಸೆತ, 5 ಬೌಂಡರಿ) ಉತ್ತಮ ಆರಂಭದ ನಡುವೆಯೂ 9 ವಿಕೆಟ್‌ಗೆ 127 ರನ್ ಪೇರಿಸಿತು. ಬಳಿಕ ಈ ಸಾಧಾರಣ ಮೊತ್ತ ಬೆನ್ನಟ್ಟಿದ ಕೆಕೆಆರ್, ಆವೇಶ್ ಖಾನ್ (13ಕ್ಕೆ 3) ಮಾರಕ ದಾಳಿ ನಡುವೆಯೂ ನಿತೀಶ್ ರಾಣಾ (36*ರನ್, 27 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ಫಲವಾಗಿ 18.2 ಓವರ್‌ಗಳಲ್ಲಿ 7 ವಿಕೆಟ್‌ಗೆ 130 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಡೆಲ್ಲಿ ಕ್ಯಾಪಿಟಲ್ಸ್: 9 ವಿಕೆಟ್‌ಗೆ 127 (ಸ್ಟೀವನ್ ಸ್ಮಿತ್ 39, ಶಿಖರ್ ಧವನ್ 24, ರಿಷಭ್ ಪಂತ್ 39, ಸುನೀಲ್ ನಾರಾಯಣ್ 18ಕ್ಕೆ 2, ವೆಂಕಟೇಶ್ ಅಯ್ಯರ್ 29ಕ್ಕೆ 2, ಲಾಕಿ ಫರ್ಗ್ಯುಸನ್ 10ಕ್ಕೆ 2), ಕೆಕೆಆರ್: 18.2 ಓವರ್‌ಗಳಲ್ಲಿ 7 ವಿಕೆಟ್‌ಗೆ 130 (ಶುಭಮಾನ್ ಗಿಲ್ 30, ನಿತೀಶ್ ರಾಣಾ 36*, ಸುನೀಲ್ ನಾರಾಯಣ್ 21, ಆವೇಶ್ ಖಾನ್ 13ಕ್ಕೆ 3, ಆರ್.ಅಶ್ವಿನ್ 24ಕ್ಕೆ 1, ಅನ್ರಿಚ್ ನೋಕಿಯ 15ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net