

ಅಬುಧಾಬಿ: ಯುಎಇಗೆ ಆಗಮಿಸುವುದಕ್ಕೂ ಮುನ್ನ ಕೆಕೆಆರ್‌ಗೆ ಪ್ಲೇಆಫ್ ಹಾದಿ ದುರ್ಗಮವೆನಿಸಿದ್ದರೂ, ಇದೀಗ ಪರಿಸ್ಥಿತಿಯೇ ಸಂಪೂರ್ಣ ಭಿನ್ನವಾಗಿದೆ. ಅರಬ್ ನಾಡಿಗೆ ಆಗಮಿಸುವುದಕ್ಕೂ ಮುನ್ನ ಆಡಿದ 7 ಪಂದ್ಯಗಳಲ್ಲಿ ಕೇವಲ 2 ಗೆಲುವು ಕಂಡಿದ್ದ ಕೆಕೆಆರ್ ಇದೀಗ ಸತತ 2ನೇ ಜಯ ದಾಖಲಿಸಿ 8 ಅಂಕಗಳೊಂದಿಗೆ ಪ್ಲೇಆಫ್ ಆಸೆ ಹೆಚ್ಚಿಸಿಕೊಂಡಿದೆ. ಭಾನುವಾರದ ಮೊದಲ ಪಂದ್ಯದಲ್ಲಿ ಇವೊಯಿನ್ ಮಾರ್ಗನ್ ಪಡೆ 3 ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡವನ್ನು ಎದುರಿಸಲಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಉಭಯ ತಂಡಗಳ ಕದನಕ್ಕೆ ಜಯೇದ್ ಕ್ರಿಕೆಟ್ ಸ್ಟೇಡಿಯಂ ವೇದಿಕೆಯಾಗಲಿದೆ. 2 ತಂಡಗಳು ಹಿಂದಿನ ಪಂದ್ಯಗಳಲ್ಲಿ ಬಲಿಷ್ಠ ಆರ್‌ಸಿಬಿ, ಮುಂಬೈ ತಂಡಗಳನ್ನೇ ಸೋಲಿಸಿವೆ ಎಂಬುದು ಗಮನಾರ್ಹ. ಗೆಲುವಿನ ಲಯದಲ್ಲಿರುವ ಉಭಯ ತಂಡಗಳಲ್ಲೂ ಬದಲಾವಣೆಯ ನಿರೀಕ್ಷೆ ಇಲ್ಲ.
ಟೀಮ್ ನ್ಯೂಸ್:
ಕೆಕೆಆರ್: ಸತತ 2 ಪಂದ್ಯಗಳಲ್ಲಿ ಗೆದ್ದ ಹುಮ್ಮಸ್ಸಿನಲ್ಲಿರುವ ಕೆಕೆಆರ್ ತಂಡ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯಲಿದೆ.
ಸಿಎಸ್‌ಕೆ : ಸಿಎಸ್‌ಕೆ ತಂಡ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಂಡಿದೆ. ಆರ್‌ಸಿಬಿ ಎದುರು ಭರ್ಜರಿ ನಿರ್ವಹಣೆ ತೋರಿದ ಬ್ರಾವೊ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ. ಹೀಗಾಗಿ ಸ್ಯಾಮ್ ಕರ‌್ರನ್ ಈ ಪಂದ್ಯದಲ್ಲೂ ಹೊರಗುಳಿಯುವುದು ಅನಿವಾರ್ಯ.
ಮುಖಾಮುಖಿ: 24, ಸಿಎಸ್‌ಕೆ: 15, ಕೆಕೆಆರ್: 8, ರದ್ದು: 1
ಹಿಂದಿನ ಮುಖಾಮುಖಿ: ಸಿಎಸ್‌ಕೆಗೆ 18 ರನ್ ಜಯ
ಪಂದ್ಯ ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್